ಈಗಿನ ಸುದ್ದಿ

ಅಮೆರಿಕ ಪ್ರತಿನಿಧಿಗಳಿಂದ ಮೋದಿ ಭೇಟಿ

ಅಮೆರಿಕ ಪ್ರತಿನಿಧಿಗಳಿಂದ ಮೋದಿ ಭೇಟಿ
Published On :

ಅಹಮದಬಾದ್: ಅಮೆರಿಕಗೆ ಭೇಟಿ ನೀಡಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಸಾಧ್ಯವಾಗುತ್ತಿಲ್ಲ. ಆದರೆ ಅಮೆರಿಕ ಪ್ರತಿನಿಧಿಗಳೇ ಮೋದಿ ಅವರನ್ನು ಗುರುವಾರ ಭೇಟಿ ಮಾಡಿದ್ದು, ವ್ಯಾಪಾರೋದ್ಯಮದ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

2002 ಗುಜರಾತ್ ಗಲಭೆಗೆ ಕಾರಣರಾದವರು ಎಂಬ ಆಪಾದನೆ ಮೇಲೆ ನರೇಂದ್ರ ಮೋದಿ ಅವರಿಗೆ ಅಮೆರಿಕ ವೀಸಾ ನೀಡಲು ನಿರಾಕರಿಸಿತ್ತು. ಈ ಹಿನ್ನಲೆಯಲ್ಲಿ ಗುಜರಾತ್‌ಗೆ ಬಂದಿರುವ ಅಮೆರಿಕದ ಪ್ರತಿನಿಧಿಗಳು ಮೋದಿ ಮನವೊಲಿಸಲು ಮುಂದಾಗಿದ್ದಾರೆ.

ಭಾರತೀಯ-ಅಮೆರಿಕನ್ನರ ಪಬ್ಸಿಕ್ ಪಾಲಿಸಿ ಸಂಸ್ಥೆ ಆಯೋಜಿಸಿರುವ ವ್ಯಾಪಾರೋದ್ಯಮ ಪ್ರವಾಸ ಇದಾಗಿದ್ದು, ಅಮೆರಿಕದ ಪ್ರತಿನಿಧಿಗಳು ಭಾರತಕ್ಕೆ ಭೇಟಿ ನೀಡಿದ್ದಾರೆ.

ಅಮೆರಿಕದ ಇಲ್ಲಿನಾಯ್ಸ್ ರಾಜ್ಯದ ಪ್ರತಿನಿಧಿ ಆರಾನ್ ಸ್ಖಾಕ್ ನೇತೃತ್ವದಲ್ಲಿ ಮೋದಿ ಅವರೊಡನೆ ಸಭೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಗುಜರಾತ್‌ನಲ್ಲಿ ಬಂಡವಾಳ ಹೂಡಿಕೆ ಮಾಡಲು ಮೋದಿ ಅವರು ಆಯಸ್ಕಾಂತ ಸೃಷ್ಟಿಸಿದ್ದಾರೆ ಎಂದಿರುವ ಅಮೆರಿಕದ ಪ್ರತಿನಿಧಿಗಳು, ವ್ಯಾಪಾರೋದ್ಯಮ ಕುರಿತು ಸರ್ಕಾರಿ ಅಧಿಕಾರಿಗಳು, ಸಂಸದರು ಮತ್ತು ಭಾರತೀಯ ಉದ್ಯಮಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.