ಎಟಿಎಸ್ ಡಿಸಿಪಿ ಸಾವು ಆತ್ಮಹತ್ಯೆಯಲ್ಲ: ಪತ್ನಿ
ಮುಂಬೈ: ಭಯೋತ್ಪಾದನ ನಿಗ್ರಹ ದಳದ ಡಿಸಿಪಿ ಸಾವು ಆತ್ಮಹತ್ಯೆಯಲ್ಲ, ಅನಿರೀಕ್ಷಿತವಾಗಿ ಗುಂಡು ಸಿಡಿದು ಸಾವನ್ನಪ್ಪಿದ್ದಾರೆ ಎಂದು ಡಿಸಿಪಿ ಪತ್ನಿ ಸುಶ್ಮಿತಾ ಗುರುವಾರ ಹೇಳಿದ್ದಾರೆ.
ಇತ್ತಿಚೇಗಷ್ಟೆ ಗುಂಡು ಸಿಡಿದು ಭಯೋತ್ಪಾದನ ನಿಗ್ರಹ ದಳದ ಡಿಸಿಪಿ ಸಂಜಯ್ ಬ್ಯಾನರ್ಜಿ ಮೃತಪಟ್ಟಿದ್ದರು. ಕುಟಂಬ ಸಮೇತ ಹೋಟೆಲ್ಗೆ ಹೋಗಿದ್ದಾಗ, ರಿವಾಲ್ವರ್ ತೆಗೆದು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದರು.
ಆದರೆ ಡಿಸಿಪಿ ಪತ್ನಿ ಇದು ಆತ್ಮಹತ್ಯೆ ಅಲ್ಲ. ಆಕಸ್ಮಿಕವಾಗಿ ಗುಂಡು ಸಿಡಿದಿದೆ ಎಂದು ಹೇಳಿದ್ದಾರೆ.
ಹೋಟೆಲ್ನಲ್ಲಿ ಕುಳಿತು ಊಟ ಮಾಡುತ್ತಿರಬೇಕಾದರೆ, ತಮ್ಮ ಜೇಬಿನಿಂದ ಕರವಸ್ತ್ರ ತೆಗೆಯಲು ಮುಂದಾದಾಗ ರಿವಾಲ್ವಾರ್ ಕೆಳಗೆ ಬಿದ್ದು, ಆಕಸ್ಮಿಕವಾಗಿ ಅವರ ತಲೆಗೆ ಗುಂಡು ತಗುಲಿದೆ ಎಂದು ಕಾರಣ ನೀಡಿದ್ದಾರೆ.
ಮೊದಲಿಗೆ ಪೊಲೀಸರು, ಕುಟುಂಬದಲ್ಲಿ ಉಂಟಾದ ಕಲಹದಿಂದ ಡಿಸಿಪಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದ್ದರು. ಆದರೆ ಪತ್ನಿ ಆತ್ಮಹತ್ಯೆಯಲ್ಲ ಆಕಸ್ಮಿಕ ಎಂದು ಹೇಳಿರುವುದು ಇನ್ನಷ್ಟು ಗೊಂದಲ ಸೃಷ್ಟಿಸಿದೆ.
ಪ್ರಕರಣದ ತನಿಖೆ ಮಾಡುತ್ತಿದ್ದು, ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಪೊಲೀಸ್ ಆಯುಕ್ತ ಕೆ.ಪಿ ರಘವಂಶಿ ಹೇಳಿದ್ದಾರೆ.
ಸುಷ್ಮಿತಾ ಅವರ ಹೇಳಿಕೆಯನ್ನು ನಂಬಲಾಗುವುದಿಲ್ಲ. ಅವರ ಹೇಳಿಕೆ ಅನುಮಾನವನ್ನುಂಟಮಾಡಿದೆ. ಈ ಮೊದಲು ಸುಷ್ಮಿತಾ, ಸಂಜಯ್ ತುಂಬಾ ಮಾನಸಿಕ ಒತ್ತಡದಲ್ಲಿದ್ದರು. ಆಯುಧಗಳ ಬಳಸುವ ವಾಡಿಕೆಯಿತ್ತು. ಈವರೆಗೆ ಅವರು ರಿವಾಲ್ವರ್ನ ತಪ್ಪಾಗಿ ಹಿಡಿದಿಲ್ಲ ಎಂದು ಹೇಳಿದ್ದರು. ಆದರೆ ಈಗ ಆಕಸ್ಮಿಕ ಎನ್ನುತ್ತಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆಡೆಮಾಡಿಕೊಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿ ಕುಟಂಬದೊಡನೆ ಗೋವಾದ ಥೇನ್ನಲ್ಲಿರುವ ಪೋರ್ಚುಗೀಸ್ ಹೋಟೆಲ್ಗೆ ಮದ್ಯಾಹ್ನದ ಉಪಹಾರಕ್ಕೆ ತೆರಳಿದ್ದರು. ಹೋಟೆಲ್ನಲ್ಲಿ ಪತ್ನಿಯೊಂದಿಗೆ ಮತಾನಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ತಮ್ಮ ಬಳಿ ಇದ್ದ ರಿವಾಲ್ವಾರ್ ತೆಗೆದು ಶೂಟ್ ಮಾಡಿಕೊಂಡಿದ್ದರು.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರು ಅವರು ಪ್ರಾಣಾಪಾಯದಿಂದ ಪಾರಾಗಿಲ್ಲ. ಘಟನೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಪತ್ನಿಯ ಜೊತೆ ಜಗಳವಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

