ಆದರ್ಶ ಹಗರಣ: ಅಶೋಕ್ ಚವ್ಹಾಣ್ ಅರ್ಜಿಗೆ ಸಿಬಿಐ ವಿರೋಧ
ಮುಂಬೈ: ಆದರ್ಶ ನಿವೇಶನಹಗರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಸಲ್ಲಿಸಿದ ಅರ್ಜಿಗೆ ಸಿಬಿಐ ಸೋಮವಾರ ವಿರೋಧ ವ್ಯಕ್ತಪಡಿಸಿದೆ.
ರಾಜಕೀಯದ ಪ್ರತಿಸ್ಫರ್ಧಿಗಳು ನನ್ನ ಮೇಲೆ ಸುಳ್ಳು ಆರೋಪ ಮಾಡಿ ಹಗರಣದಲ್ಲಿ ಸಿಲುಕಿಸಿದ್ದಾರೆ ಎಂದು ಅವರು ಆರೋಪಿಸಿ, ಈ ಕೂಡಲೆ ಅರ್ಜಿ ರದ್ದು ಗೊಳಿಸುವಂತೆ ಮನವಿ ಮಾಡಿದ್ದರು.
ಹಗರಣದ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ಯಾವುದೇ ಹಕ್ಕಿಲ್ಲ. ಆದರ್ಶ ಹಗರಣದ ತನಿಖೆ ನಡೆಸುವಂತೆ ಹೈಕೋರ್ಟ್ ಅಥವಾ ಮಹಾರಾಷ್ಟ್ರದ ಸರ್ಕಾರ ಸಿಬಿಐಗೆ ಸೂಚಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಇದಕ್ಕೆ ಉತ್ತರಿಸುವಂತೆ ಸಿಬಿಐ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು.
ಇದಕ್ಕೆ ಪ್ರತಿಕ್ರಯಿಸಿರುವ ಸಿಬಿಐ, ಚವ್ಹಾಣ್ ಅವರು ಅನವಶ್ಯಕವಾಗಿ ಆದರ್ಶ ಸೊಸೈಟಿಗೆ ನೆರವು ನೀಡಿದ್ದಾರೆ. ಇದರ ಪ್ರತಿಫಲವಾಗಿ ಚವ್ಹಾಣ್ ಸಂಭಂಧಿಗಳಿಗೆ ಮೂರು ನಿವೇಶನ ನೀಡಲಾಗಿದೆ. ಇದಲ್ಲದೇ ಶೇ.40 ರಷ್ಟು ಸದಸ್ಯರನ್ನು ಜನ ಸಾಮಾನ್ಯ ವರ್ಗದಿಂದ ಆಯ್ಕೆ ಮಾಡಿಕೊಳ್ಳಿ ಎಂದು ಚವ್ಹಾಣ್ ಸೋಸೈಟಿಗೆ ಸೂಚಿಸಿದ್ದಾರೆ. ಆದರೆ ದೇಶ ಕಾಯುವ ಸೈನಿಕರಿಗೆ ಹಾಗೂ ಯುದ್ಧದಲ್ಲಿ ಹೋರಾಡಿ ಮಣಿದ ಕುಟುಂಬ ಸದಸ್ಯರಿಗೆ ಮಾತ್ರ ಶೇ 40ರಷ್ಟು ಮೀಸಲಾತಿಯಿದೆ. ಇಲ್ಲಿ ಚವ್ಹಾಣ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಈ ಸಂಬಂಧ ತನಿಖೆ ನಡೆಸುವಂತೆ ರಕ್ಷಣಾ ಸಚಿವಾಲಯ ಸಿಬಿಐಗೆ ದೂರು ನೀಡಿದೆ. ಆದರೆ ಮಹಾರಾಷ್ಟ್ರ ಸರ್ಕಾರ ಸಿಬಿಐಗೆ ತನಿಖೆ ಮಾಡುವ ಅಧಿಕಾರವಿಲ್ಲ ಎಂದು ಒತ್ತಿ ಹೇಳುತ್ತಿದೆ ಎಂದು ಸಿಬಿಐ ದೂರಿದೆ.
ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಮೂರ್ತಿ ಪಿ.ವಿ ಹರದಾಸ್ ಮತ್ತು ಎ.ಆರ್.ಜೋಶಿ ನೇತೃತ್ವದ ಪೀಠ, ಅರ್ಜಿಗಳನ್ನು ಪರಿಶೀಲಿಸಿದ್ದು, ಏಪ್ರಿಲ್ 12 ವಿಚಾರಣೆ ಮುಂದೂಡಿದೆ.
ಚವ್ಹಾಣ್ ಅವರ ಅತ್ತೆ, ಮಾವ ಮತ್ತು ನಾದಿನಿಗೆ ಆದರ್ಶ ಸೋಸೈಟಿಯಲ್ಲಿ ನಿವೇಶನಗಳನ್ನು ನೀಡಲಾಗಿದೆ. ಹಗರಣ ಸಂಬಂಧ ಚವ್ಹಾಣ್ ಸೇರಿದಂತೆ 12 ಜನರ ಮೇಲೆ ದೋಷರೋಪ, ಮೋಸ, ಅಧಿಕಾರ ದುರುಪಯೋಗ ಮತ್ತು ಭಷ್ಟಾಚಾರ ಕಾಯ್ದೆ ಅಡಿ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

