ಅತ್ಯಾಚಾರ ಪ್ರಕರಣ ದಾಖಲಿಸುವುದು 'ಫ್ಯಾಶನ್' ಆಗಿಬಿಟ್ಟಿದೆ: ಶಿವಾ ಸೇನಾ

ಮುಂಬೈ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿರುವ ಶಿವಸೇನಾ, ಇತ್ತೀಚೆಗೆ ಅತ್ಯಾಚಾರ ಪ್ರಕರಣ ದಾಖಲಿಸುವುದು ಫ್ಯಾಶನ್ ಆಗಿಬಿಟ್ಟಿದೆ ಎಂದು ಹೇಳಿದೆ.
ಐಪಿಎಸ್ ಅಧಿಕಾರಿ ಸುನಿಲ್ ಪರಾಸ್ಕರ್ ಅವರ ಮೇಲೆ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ಖಂಡಿಸಿರುವ ಶಿವಸೇನಾ, ಇತ್ತೀಚೆಗೆ ಪುರುಷರ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸುವುದು ಫ್ಯಾಶನ್ ಆಗಿಬಿಟ್ಟಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದೆ.
ಇತ್ತೀಚೆಗಷ್ಟೇ ಮಾಡೆಲ್ ಒಬ್ಬಳು, ಮಹಾರಾಷ್ಟ್ರದ ಹಿರಿಯ ಐಪಿಎಸ್ ಅಧಿಕಾರಿ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ದೂರು ದಾಖಲಿಸಿದ್ದಳು. ದೂರಿನ ಅನ್ವಯ ಸುನಿಲ್ ಪರಾಸ್ಕರ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆಗೆ ಮುಂಬೈ ಪೊಲೀಸ್ ಕಮೀಷನರ್ ಆದೇಶಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿರುವ ಶಿವಸೇನಾ, ಉನ್ನತಮಟ್ಟದಲ್ಲಿರುವವರ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿವುದು ವಾಡಿಕೆಯಾಗಿದೆ.
ಪೊಲೀಸ್ ಇಲಾಖೆಯಲ್ಲಿ ಅನೇಕ ವರ್ಷಗಳ ಕಾಲ ದುಡಿದಿರುವ ಅಧಿಕಾರಿಯ ಮೇಲೆ ಒಂದು ಹುಡುಗಿ ಅತ್ಯಾಚಾರ ಪ್ರಕರಣ ದಾಖಲಿಸಿದ ತಕ್ಷಣ, ಆತ ವಿಲನ್ ಆಗಿಬಿಟ್ಟಿದ್ದಾನೆ ಎಂದು ಹೇಳಿದೆ.
ನಿರ್ಭಯ ಪ್ರಕರಣದ ನಂತರ ನೂತನ ಕಾನೂನು ರಚಿಸಲಾಯಿತು. ಆದರೆ ಅತ್ಯಾಚಾರವನ್ನು ತಡೆಯಲಾಯಿತೇ? ಕೆಲವರು ವೈಯಕ್ತಿಕ ದ್ವೇಷಕ್ಕಾಗಿ ಅತ್ಯಾಚಾರ ಪ್ರಕರಣ ದಾಖಲಿಸುವ ಆಯುಧ ಹಿಡಿದುಕೊಂಡಿದ್ದಾರೆ ಎಂದು ಶಿವಸೇನಾ ಆರೋಪಿಸಿದೆ.
ಸತ್ಯ ಹೊರಬರುವ ತನಕ ಮಾಧ್ಯಮಗಳಲ್ಲಿ ಅಧಿಕಾರಿಯನ್ನು ವಿಲನ್ ರೀತಿಯಲ್ಲಿ ಬಿಂಬಿಸಲಾಗುತ್ತದೆ. ಇದರಿಂದ ಅವರ ಗೌರವಕ್ಕೆ ಧಕ್ಕೆ ಬರುತ್ತದೆ ಎಂದ ಶಿವಸೇನಾ, ಈ ದೇಶದಲ್ಲಿರುವ ಎಲ್ಲಾ ಕಾನೂನುಗಳು ಮಹಿಳೆಯರ ಪರವಾಗಿ ಇದೆ. ಹಾಗಾಗಿ, ನ್ಯಾಯಾಂಗ ಎಚ್ಚೆತ್ತುಕೊಂಡು, ನಿರಪರಾಧಿಗಳಿಗೆ ನ್ಯಾಯಾ ನೀಡಬೇಕು ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


