ಈಗಿನ ಸುದ್ದಿ

ರಾಣಿಯವರಿಗೆ ಅಸಮಾಧಾನವಿದ್ದರೇ ಮಾತನಾಡುವೆ: ಸಿಎಂ

ರಾಣಿಯವರಿಗೆ ಅಸಮಾಧಾನವಿದ್ದರೇ ಮಾತನಾಡುವೆ: ಸಿಎಂ
Published On :

ಮಂಡೂರು: ಅರಮನೆ ವಿವಾದವನ್ನು ಸರ್ಕಾರ ಬಗೆಹರಿಸದಿದ್ದರೇ, ಖಾಸಗಿ ದಸರಾ ಆಚರಿಸಲಿ ಎಂಬ ಪ್ರಮೋದದೇವಿಯವರ ಹೇಳಿಕೆಗೆ ಪ್ರತಿಕ್ರಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಣಿಯವರಿಗೆ ಅಸಮಾಧಾನವಿದ್ದರೇ ನಾನೇ ಖುದ್ದು ಅವರೊಡನೆ ಮಾತನಾಡುವೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಮೈಸೂರು ಅರಮನೆಯ ವಿವಾದವನ್ನು ಶೀಘ್ರವೇ ಬಗೆಹರಿಸಲಿ ಎಂದು ದಿವಂಗತ ಶ್ರೀಕಂಠದತ್ತ ಒಡೆಯರ್ ಅವರ ಪತ್ನಿ ರಾಣಿ ಪ್ರಮೋದಾ ದೇವಿ ಅವರು ಶನಿವಾರ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಯಿಸಿರುವ ಸಿದ್ದರಾಮಯ್ಯ ಅವರು, ರಾಣಿಯವರಿಗೆ ಅಸಮಾಧಾನವಿದ್ದರೇ, ಅವರೊಂದಿಗೆ ನಾನೇ ಖುದ್ದಾಗಿ ಮಾತನಾಡುವೇ ಎಂದು ತಿಳಿಸಿದ್ದಾರೆ.

ಮಂಡೂರಿನಲ್ಲಿ ಮಾತನಾಡಿದ ಸಿಎಂ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಪ್ರತಿಬಾರಿಯಂತೆ ಈ ಬಾರಿಯು ರಾಣಿ ಪ್ರಮೋದಾದೇವಿಯವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿ ಆಹ್ವಾನ ನೀಡುತ್ತಾರೆ.

ಆಸ್ತಿ ವಿವಾದ ಸಂಬಂಧದ ಪ್ರಕರಣ ನ್ಯಾಯಾಲಯದಲ್ಲಿದೆ, ಹಾಗಾಗಿ ಇದರ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿಎಂ ಹೇಳಿದ್ದು, ರಾಣಿಯವರಿಗೆ ಅಸಮಾಧಾನವಿದ್ದರೇ ಅವರೊಂದಿಗೆ ಚರ್ಚಿಸುವೆ ಎಂದು ತಿಳಿಸಿದ್ದಾರೆ.

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ರಾಣಿಯವರು, ಸರ್ಕಾರ ಮೊದಲು ಅರಮನೆ ವಿವಾದವನ್ನು ಸರ್ಕಾರ ಮೊದಲು ಬಗೆಹರಿಸಲಿ, ನಂತರ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗುವುದು, ಒಂದು ವೇಳೆ ಸರ್ಕಾರ ವಿವಾದ ಬಗೆಹರಿಸದಿದ್ದರೆ ಖಾಸಗಿಯಾಗಿ ದಸರಾ ಆಚರಿಸಲಿ ಎಂದು ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.