ಈಗಿನ ಸುದ್ದಿ

ಆಟೋರಿಕ್ಷಾದಲ್ಲಿ ಮಹಿಳೆ ಮೇಲೆ ಗ್ಯಾಂಗ್'ರೇಪ್

ಆಟೋರಿಕ್ಷಾದಲ್ಲಿ ಮಹಿಳೆ ಮೇಲೆ ಗ್ಯಾಂಗ್'ರೇಪ್
Published On :

ಮಹೇಶ್ತಲ: ಆಟೋರಿಕ್ಷಾದಲ್ಲಿ ಮಹಿಳೆಯೊಬ್ಬಳ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ ಹೇಯ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಕೋಲ್ಕತಾದ ಸೌಥ್ 24 ಪರ್ಗಾಣಾಸ್ ಜಿಲ್ಲೆಯಲ್ಲಿ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದ 25 ವರ್ಷದ ಮಹಿಳೆಯ ಮೇಲೆ ಐವರು ಗ್ಯಾಂಗ್'ರೇಪ್ ಮಾಡಿ ವಾಹನದಿಂದ ಹೊರಗೆ ಬಿಸಾಡಲಾಗಿದೆ. ಐವರು ಅತ್ಯಾಚಾರಿಗಳಲ್ಲಿ ಮಹಿಳೆಯ ಸ್ನೇಹಿತನೊಬ್ಬನೂ ಇದ್ದಾನೆನ್ನಲಾಗಿದೆ.

ಅತ್ಯಾಚಾರಕ್ಕೊಳಗಾದ ಮಹಿಳೆಯು ಇಬ್ಬರು ಮಕ್ಕಳ ತಾಯಿಯಾಗಿದ್ದಾಳೆ. ಆಕೆಯ ಗಂಡ ಕೈಬಿಟ್ಟಿದ್ದರಿಂದ ತಾಯಿಯೊಂದಿಗೆ ಆಕ್ರಾ ಎಂಬಲ್ಲಿ ವಾಸಿಸುತ್ತಿದ್ದಳು. ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನೆನ್ನಲಾದ ಶಫೀಕ್ ಎಂಬಾತ ಜುಲೈ 31ರಂದು ಈಕೆಯನ್ನು ಮನೆಗೆ ಬರಲು ಹೇಳಿದ್ದಾನೆ.

ಶಫೀಕ್ ನನ್ನು ಕಾಣಲು ಬಂದ ಮಹಿಳೆಯನ್ನು ನಂಬರ್ ಪ್ಲೇಟ್ ಇಲ್ಲದ ಆಟೋರಿಕ್ಷಾವೊಂದರಲ್ಲಿ ಕೂರಿಸಿಕೊಂಡಿದ್ದಾನೆ. ಡ್ರಿಂಕ್ಸ್'ಗೆ ಮತ್ತುಬರುವ ಔಷಧ ಬೆರೆಸಿ ಮಹಿಳೆಗೆ ಕುಡಿಸಿದ್ದಾರೆ. ಪ್ರಜ್ಞಾಶೂನ್ಯಳಾದ ಮಹಿಳೆಯ ಮೇಲೆ ಐವರೂ ಅತ್ಯಾಚಾರ ಎಸಗಿದ್ದಾರೆ. ರಾತ್ರಿ 11ಗಂಟೆಯವರೆಗೂ ಮಹಿಳೆಗೆ ಹಿಂಸೆ ನೀಡಿ ಬಳಿಕ ಪ್ರಜ್ಞಾಶೂನ್ಯ ಸ್ಥಿತಿಯಲ್ಲೇ ಇದ್ದ ಆಕೆಯನ್ನು ಆಟೋದಿಂದ ಹೊರಗೆಸೆದು ಹೋಗಿದ್ದಾರೆ.

ಗಂಭೀರ ಸ್ಥಿತಿಯಲ್ಲಿರುವ ಮಹಿಳೆಯನ್ನ ಕೋಲ್ಕತಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯ ತಾಯಿ ನೀಡಿದ ದೂರಿನ ಮೇರೆಗೆ ಎಫ್'ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.