ಈಗಿನ ಸುದ್ದಿ

ಇಸಿಸ್ ಉಗ್ರರಿಂದ 46 ಭಾರತೀಯ ನರ್ಸ್‌ಗಳ ಸ್ಥಳಾಂತರ: ಕೇಂದ್ರ ಸ್ಪಷ್ಟನೆ

ಇಸಿಸ್ ಉಗ್ರರಿಂದ 46 ಭಾರತೀಯ ನರ್ಸ್‌ಗಳ ಸ್ಥಳಾಂತರ: ಕೇಂದ್ರ ಸ್ಪಷ್ಟನೆ
Published On :

ಬಾಗ್ದಾದ್: ಇರಾಕ್‌ನ ಟಿಕ್ರಿತ್ ನಗರದಲ್ಲಿ ಸಿಲುಕಿಕೊಂಡಿರುವ 46 ಭಾರತೀಯ ನರ್ಸ್‌ಗಳನ್ನು ಐಎಸ್‌ಐಎಸ್ ಉಗ್ರರು ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ ಎಂಬುದನ್ನು ವಿದೇಶಾಂಗ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ.

ಇರಾಕ್‌ನ ಟಿಕ್ರಿತ್ ನಗರದಿಂದ ಅಜ್ಞಾನ ಸ್ಥಳಕ್ಕೆ ನರ್ಸ್‌ಗಳನ್ನು ಐಎಸ್‌ಐಎಸ್ ಉಗ್ರರು ರವಾನಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಸಯ್ಯದ್ ಅಖ್ಬರುದ್ದೀನ್ ಅವರು ಸ್ಪಷ್ಟಪಡಿಸಿದ್ದು, ನರ್ಸ್‌ಗಳನ್ನು ಎಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿಲ್ಲ ಎಂದರು.

ಆದರೆ ಇಸಿಸ್ ಉಗ್ರರಿಂದ ನರ್ಸ್‌ಗಳಿಗೆ ಯಾವುದೇ ಅಪಾಯವಾಗಿಲ್ಲ ಅವರು ಸುರಕ್ಷಿತರಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

ಇದೇ ವೇಳೆ, ಆಸ್ಪತ್ರೆಯನ್ನು ಇಸಿಸ್ ಉಗ್ರರು ಸ್ಫೋಟಿಸಿದ್ದಾರೆ ಎಂಬ ವರದಿಯನ್ನು ತಳ್ಳಿಹಾಕಿರುವ ಸಯ್ಯದ್ ಅಖ್ಬರುದ್ದೀನ್, ಐವರು ಭಾರತೀಯ ನರ್ಸ್‌ಗಳಿಗೆ ಗಾಯಗಳಾಗಿರುವುದು ನಿಜ. ಆದರೆ ಇದು ಸ್ಫೋಟದಿಂದ ಆಗಿರುವುದಲ್ಲ. ಆಸ್ಪತ್ರೆಯ ಕಿಟಕಿ ಗಾಜು ಒಡೆದಿದ್ದರಿಂದ ಈ ಘಟನೆ ಸಂಭವಿಸಿದೆ ಎಂದರು.

46 ಭಾರತೀಯ ನರ್ಸ್‌ಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ವಿದೇಶಾಂಗ ಸಚಿವಾಲಯ ಸಕಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದಿದ್ದಾರೆ.

ಮತ್ತೊಂದೆಡೆ, ಇರಾಕ್‌ನ ಟಿಕ್ರಿತ್ ನಗರದಲ್ಲಿ 46 ಭಾರತೀಯ ನರ್ಸ್‌ಗಳು ತಂಗಿದ್ದ ಆಸ್ಪತ್ರೆಯನ್ನು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ(ಇಸಿಸ್) ಉಗ್ರರು ಸ್ಪೋಟಿಸಿದ್ದು, ಐವರು ಭಾರತೀಯ ನರ್ಸ್‌ಗಳಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಗಳು ಹೇಳಿವೆ.

ಇಂದು ಐಎಸ್‌ಐಎಸ್ ಉಗ್ರರು ಭಾರತೀಯ ನರ್ಸ್‌ಗಳು ತಂಗಿದ್ದ ಆಸ್ಪತ್ರೆಯನ್ನು ಸ್ಫೋಟಿಸಿದ್ದಾರೆ ಎಂದು ಇರಾಕ್‌ನ ಪ್ರಮುಖ ಪತ್ರಿಕೆಯೊಂದು ಟ್ವೀಟ್ ಮಾಡಿದ್ದು, ಸ್ಫೋಟದಲ್ಲಿ ಐವರು ಭಾರತೀಯರು ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.