ಈಗಿನ ಸುದ್ದಿ

ಐಎಸ್‌ಐಎಸ್ ಉಗ್ರರ ವಿರುದ್ಧ ಹೋರಾಡಲು ಭದ್ರತಾ ಪಡೆ ಸಜ್ಜು

ಐಎಸ್‌ಐಎಸ್ ಉಗ್ರರ ವಿರುದ್ಧ ಹೋರಾಡಲು ಭದ್ರತಾ ಪಡೆ ಸಜ್ಜು
Published On :

ನವದೆಹಲಿ: ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ಮೇಲೆ ಭಯೋತ್ಪದಕ ದಾಳಿ ನಡೆಸುವ ಬೆದರಿಕೆಯೊಡ್ಡಿರುವ ಐಎಸ್‌ಐಎಸ್ ಉಗ್ರ ಸಂಘಟನೆ ವಿರುದ್ಧ ಹೋರಾಡಲು ಭಾರತದ ಭದ್ರತಾ ಪಡೆಗಳು ಸಜ್ಜಾಗುತ್ತಿವೆ.

ಐಎಸ್‌ಐಎಸ್‌ನಿಂದ ಮಧ್ಯಪ್ರಾಜ್ಯದಲ್ಲಿ ನಡೆಯುತ್ತಿರುವ ಭಯೋತ್ಪಾದನ ಚಟುವಟಿಕೆ ಹಾಗೂ ಯುದ್ಧ ಬೆಳವಣಿಗೆಗಳ ಬಗ್ಗೆ ಕಣ್ಣಿಟ್ಟಿರುವ ಗೂಢಚಾರ ಸಂಸ್ಥೆಗಳು ಅವೆಲ್ಲವನ್ನೂ ಭಾರತದ ಆತಂರಿಕ ಸಚಿವಾಲಯಕ್ಕೆ ರವಾನಿಸುತ್ತಿದೆ.

ಇರಾಕ್ ಮತ್ತು ಸಿರಿಯಾ ಇಸ್ಲಾಮಿಕ್ ರಾಜ್ಯ ಕಟ್ಟುವ ನಿಟ್ಟಿನಲ್ಲಿ ಇರಾಕ್ ಹಾಗೂ ಸಿರಿಯಾದಲ್ಲಿ ಸಕ್ರಿಯವಾಗಿರುವ ಈ ಭಯೋತ್ಪಾದಕ ಸಂಘಟನೆ ಭವಿಷ್ಯದಲ್ಲಿ ಭಾರತ ಹಾಗೂ ಇನ್ನಿತರ ರಾಷ್ಟ್ರಗಳಲ್ಲಿ ದಾಳಿಗಳನ್ನು ನಡೆಸಲಿದೆ ಎಂಬ ಆಘಾತಕಾರಿ ಸುದ್ದಿಯನ್ನು ಗೂಢಚಾರ ಸಂಸ್ಥೆಗಳಿಂದ ಬಹಿರಂಗ ಪಡಿಸಿತ್ತು. ಈ ಹಿನ್ನೆಲೆಯಲ್ಲಿ ದೇಶದ ಆಂತರಿಕ ಭದ್ರತಾ ಸಂಸ್ಥೆಗಳು ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ಕಾರ್ಯತಂತ್ರ ಹೆಣಿಯುತ್ತಿವೆ.

ಇರಾಕ್‌ನಲ್ಲಿ ಶಿಯಾ ಹಾಗೂ ಸುನ್ನಿಗಳ ನಡುವೆ ಉದ್ಭವಿಸಿರುವ ಕಲಹ, ಭವಿಷ್ಯದಲ್ಲಿ ದೇಶದೊಳಗೂ ವಿಸ್ತರಿಸುವುದನ್ನು ಅಲ್ಲಗಳೆಯಲಾಗದು. ಈ ನಿಟ್ಟಿನಲ್ಲಿ ನಾನಾ ರಾಜ್ಯಗಳಿಗೆ ಸಲಹೆಗಳನ್ನು ಕಳುಹಿಸಲಾಗಿದೆ. ಈಗಾಗಲೇ ಸಂಭವನೀಯ ಪರಿಸ್ಥಿತಿಯನ್ನು ತಡೆಯಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಐಎಸ್‌ಐಎಸ್ ಕಮಾಂಡರ್ ಅಬು ಬಕ್ರ್ ಅಲ್ ಬಾಗ್ದಾದಿ ಈಗಾಗಲೇ ಭಾರತ ಸೇರಿದಂತೆ ಜಗತ್ತಿನ ನಾನಾ ರಾಷ್ಟ್ರಗಳಿಗೆ ತನ್ನ ರಮ್ಜಾನ್ ಭಾಷಣದಲ್ಲಿ ಎಚ್ಚರಿಕೆ ಸಂದೇಶ ಕಳುಹಿಸಿದ್ದಾನೆ. ಅಲ್ಲಾನ ವಿರೋಧಿಗಳ ವಿರುದ್ಧ ಶಸ್ತ್ರಗಳನ್ನು ಎತ್ತಿಕೊಳ್ಳುವಂತೆಯೂ ಕರೆ ನೀಡಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.