ಈಗಿನ ಸುದ್ದಿ

ಮೊದಲಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಇಸಿಸ್ ನಾಯಕ ಅಬೂಬಕ್ರ್

ಮೊದಲಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಇಸಿಸ್ ನಾಯಕ ಅಬೂಬಕ್ರ್
Published On :

ಮೊಸೂಲ್(ಇರಾಕ್): ಇರಾಕ್ ಬಿಕ್ಕಟ್ಟಿಗೆ ಕಾರಣಕರ್ತನಾಗಿರುವ ಮೂಲಭೂತವಾದಿ ಇಸ್ಲಾಮಿಕ್ ಸಂಘಟನೆಯ ನಾಯಕ ಹಾಗೂ ಆಕ್ರಮಿತ ಇರಾಕ್‌ನ ಸ್ವಯಂಘೋಷಿತ ಖಲೀಫಾ ಅಬೂಬಕ್ರ-ಅಲ್-ಬಾಗ್ದಾದಿ ಇದೀಗ ಸಾರ್ವಜನಿಕವಾಗಿ ಪ್ರತ್ಯಕ್ಷನಾಗಿದ್ದು, ಇರಾಕ್‌ನ ಮಸೀದಿಯೊಂದರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾನೆ.

ಇರಾಕ್‌ನ ಮೊಸೂಲ್‌ನಲ್ಲಿರುವ ಅಲ್-ನೌರಿ-ಮಾಸ್ಕ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುಮಾರು 15 ನಿಮಿಷಗಳ ಕಾಲ ಹಾಲಿ ಸುನ್ನಿ ಉಗ್ರರನ್ನು ಉದ್ದೇಶಿಸಿ ಅಬೂಬಕ್ರ್ ಮಾತನಾಡಿರುವ ವಿಡಿಯೋ ಬಿಡುಗಡೆಯಾಗಿದೆ.

ವಿಡಿಯೋದಲ್ಲಿ ಅಬೂಬಕ್ರ್, ಯಾರನ್ನೇ ಆದರೂ ಪರೀಕ್ಷಿಸಿ ಜತೆಗೆ ಸೇರಿಸಿಕೊಳ್ಳುವಂತೆ ಎಂದಿದ್ದಾನೆ. ಪ್ರತಿಯೊಬ್ಬರ ಮೇಲೂ, ನನ್ನ ಮೇಲೆಯೂ ಕೂಡ ನಿಗಾ ಇಡಿ. ನಾನೇನಾದರೂ ತಪ್ಪು ಮಾಡಿದ್ದೇನೆ ಎಂದು ನಿಮಗೆ ಅನ್ನಿಸಿದರೆ ನನ್ನನ್ನು ತಿದ್ದಿ ಸಲಹೆಗಳನ್ನು ನೀಡಿ. ನಾನು ಸರಿ ದಾರಿಯಲ್ಲಿ ಹೋಗುವಂತೆ ಮಾಡಿ. ನಾನು ಎಲ್ಲಿಯವರೆಗೆ ದೇವರ ಆಜ್ಞೆ ಪಾಲಿಸುತ್ತೇನೊ ಅಲ್ಲಿಯತನಕ ನನ್ನ ಮಾತಿಗೆ ಬೆಲೆ ನೀಡಿ ಎಂದು ತಿಳಿಸಿದ್ದಾನೆ.

ಪ್ರಪಂಚದಾದ್ಯಂತ ಇಸ್ಲಾ ಧಾರ್ಮಿಕ ರಾಜ್ಯ ಅಥವಾ ಖಲೀಫೇಟ್ ಸ್ಥಾಪನೆ ಮಾಡುವುದು ಪ್ರತಿಯೊಬ್ಬ ಮುಸ್ಲಿಂನ ಕರ್ತವ್ಯ ಎಂದು ಪ್ರೇರೇಪಿಸಿದ್ದಾನೆ.

ಇರಾಕ್ ದಾಳಿ ವೇಳೆ ಬಾಗ್ದಾದಿ ತೀವ್ರವಾಗಿ ಗಾಯಗೊಂಡಿದ್ದಾನೆ ಅಥವಾ ಮೃತಪಟ್ಟಿದ್ದಾನೆ ಎಂಬ ವಂದತಿಗಳ ಬಳಿಕ ಉಗ್ರರು ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಮೂಲಭೂತವಾದಿ ಉಗ್ರ ಸಂಘಟನೆ ಮುಖಂಡ ಬಾಗ್ದಾದಿಯ ಈ ವಿಡಿಯೋ ಮುದ್ರಿಕೆಯೇ ಸುಳ್ಳು ಎಂದು ಇರಾಕ್ ಸರ್ಕಾರ ಹೇಳಿದೆ.

ಶುಕ್ರವಾರ ನಡೆದಿರುವ ಇರಾಕ್ ಪಡೆಗಳ ವೈಮಾನಿಕ ದಾಳಿಯಲ್ಲಿ ಸ್ವಯಂಘೋಷಿತ ನಾಯಕ ಅಬೂಬಕ್ರ್ ತೀವ್ರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸಿರಿಯಾಕ್ಕೆ ತೆರಳಿದ್ದಾನೆ ಎಂದು ಇರಾಕ್‌ನ ಆಂತರಿಕ ವ್ಯವಹಾರಗಳ ಸಚಿವ ಬ್ರಿಗೇಡ್ ಜನರಲ್ ಸಾದ್‌ಮಾನ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.