ಈಗಿನ ಸುದ್ದಿ

ರೈಲ್ವೆ ಬಜೆಟ್: 58 ಹೊಸ ರೈಲುಗಳ ಪಟ್ಟಿ

ರೈಲ್ವೆ ಬಜೆಟ್: 58 ಹೊಸ ರೈಲುಗಳ ಪಟ್ಟಿ
Published On :

ನವದೆಹಲಿ: ಹೊಸದಾಗಿ 58 ರೈಲುಗಳಿಗೆ ಚಾಲನೆ ನೀಡಲಿದ್ದೇವೆ. ಈಗಾಗಲೇ ಇರುವ 11 ರೈಲುಗಳನ್ನು ವಿಸ್ತರಿಸಲಾಗುವುದು. 9 ಮಾರ್ಗಗಳಿಗೆ ವಜ್ರ ಚತುಷ್ಪಥ ನಿರ್ಮಿಸಿ ಅತಿ ವೇಗದ ರೈಲುಗಳನ್ನು ಒದಗಿಸಲಿದ್ದೇವೆ. ಅದಲ್ಲದೆ ಮುಂಬೈ- ಅಹಮದಾಬಾದ್ ಮಾರ್ಗಕ್ಕೆ ಬುಲ್ಲೆಟ್ ರೈಲನ್ನು ಆರಂಭಿಸುವ ಪ್ರಸ್ತಾವವನ್ನು ಮುಂದೆ ಹಾಕಿದ್ದೇವೆ. 5 ಜನಸಾಧಾರಣ ರೈಲುಗಳು, 5 ಪ್ರೀಮಿಯಂ ರೈಲುಗಳು, 6 ಎಸಿ ಎಕ್ಸ್‌ಪ್ರೆಸ್ ರೈಲುಗಳು, 27 ಎಕ್ಸ್‌ಪ್ರೆಸ್ ರೈಲುಗಳು, 8 ಪ್ಯಾಸೆಂಜರ್ ರೈಲುಗಳು, 2 ಮೆಮು ಮತ್ತು 5 ಡೆಮು ಸೇವೆಗಳನ್ನು ಈ ವರ್ಷ ಆರಂಭಿಸಲಿದ್ದೇವೆ. ಹಬ್ಬ, ರಜೆ ಮತ್ತು ವಿಶೇಷ ದಿನಗಳಲ್ಲಿ ರೈಲ್ವೆ ಬೇಡಿಕೆಗಳನ್ನು ಈಡೇರಿಸಲು ವಿಶೇಷ ರೈಲುಗಳನ್ನು ಒದಗಿಸಲಾಗುವುದು ಎಂದು ರೈಲ್ವೆ ಸಚಿವರಾದ ಸದಾನಂದ ಗೌಡ ಹೇಳಿದ್ದಾರೆ.

ರೈಲ್ವೆ ಬಜೆಟ್ ಮಂಡಣೆ ವೇಳೆ ಸಚಿವಾಲಯ ಹೊರತರಲಿರುವ ಎಲ್ಲ ಯೋಜನೆಗಳ ಬಗ್ಗೆ ಅವರು ವಿವರಿಸಿದರು. ಈ ಪಟ್ಟಿಯಲ್ಲಿರುವ 58 ಹೊಸ ರೈಲ್ವೆ ಮಾರ್ಗಗಳು ಈ ರೀತಿಯಿವೆ:
ಜನಸಾಧಾರಣ ರೈಲುಗಳು-
ಅಹಮದಾಬಾದ್- ದರ್ಭಂಗಾ ಜನಸಾಧಾರಣ ಎಕ್ಸ್‌ಪ್ರೆಸ್ (ಸೂರತ್ ಮೂಲಕ)
ಜಯನಗರ್- ಮುಂಬೈ ಜನಸಾಧಾರಣ ಎಕ್ಸ್‌ಪ್ರೆಸ್
ಮುಂಬೈ- ಗೋರಖ್‌ಪುರ ಜನಸಾಧಾರಣ ಎಕ್ಸ್‌ಪ್ರೆಸ್
ಸಹರಸಾ- ಆನಂದ್ ವಿಹಾರ್ ಜನಸಾಧಾರಣ ಎಕ್ಸ್‌ಪ್ರೆಸ್ (ಮೋತಿಹಾರಿ ಮೂಲಕ)
ಸಹರಸಾ- ಅಮೃತಸರ ಜನಸಾಧಾರಣ ಎಕ್ಸ್‌ಪ್ರೆಸ್

ಪ್ರೀಮಿಯಂ ರೈಲುಗಳು
ಮುಂಬೈ ಸೆಂಟ್ರಲ್- ನವದೆಹಲಿ ಪ್ರೀಮಿಯಂ ಎಸಿ ಎಕ್ಸ್‌ಪ್ರೆಸ್
ಶಾಲಿಮಾರ್- ಚೆನ್ನೈ ಪ್ರೀಮಿಯಂ ಎಸಿ ಎಕ್ಸ್‌ಪ್ರೆಸ್
ಸಿಕಂದರಾಬಾದ್- ಹಜರತ್ ನಿಝಾಮುದ್ಧೀನ್ ಪ್ರೀಮಿಯಂ ಎಸಿ ಎಕ್ಸ್‌ಪ್ರೆಸ್
ಜೈಪುರ- ಮದುರೈ ಪ್ರೀಮಿಯಂ ಎಕ್ಸ್‌ಪ್ರೆಸ್
ಕಾಮಾಖ್ಯಾ- ಬೆಂಗಳೂರು ಪ್ರೀಮಿಯಂ ಎಕ್ಸ್‌ಪ್ರೆಸ್

ಎಸಿ ಎಕ್ಸ್‌ಪ್ರೆಸ್ ರೈಲುಗಳು
ವಿಜಯವಾಜಾ- ನವದೆಹಲಿ- ಎಪಿ ಎಕ್ಸ್‌ಪ್ರೆಸ್ (ಪ್ರತಿ ದಿನ)
ಲೋಕಮಾನ್ಯ ತಿಲಕ (ಟಿ)- ಲಖನೌ (ಸಾಪ್ತಾಹಿಕ)
ನಾಗ್ಪುರ- ಪುಣೆ (ವಾರಕ್ಕೊಮ್ಮೆ)
ನಾಗ್ಪುರ- ಅಮೃತಸರ (ವಾರಕ್ಕೊಮ್ಮೆ)
ನಹಾರ್‌ಲಗೂನ್- ನವದೆಹಲಿ (ವಾರಕ್ಕೊಮ್ಮೆ)
ನಿಝಾಮುದ್ಧೀನ್- ಪುಣೆ (ವಾರಕ್ಕೊಮ್ಮೆ)

ಎಕ್ಸ್‌ಪ್ರೆಸ್ ರೈಲುಗಳು
ಅಹಮದಾಬಾದ್- ಪಟನಾ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ವಾರಾಣಸಿ ಮೂಲಕ
ಅಹಮದಾಬಾದ್ ಚೆನ್ನೈಎಕ್ಸ್‌ಪ್ರೆಸ್ (ವಾರದಲ್ಲಿ ಎರಡು ದಿನ) ವಸಯಿ ರೋಡ್ ಮೂಲಕ
ಬೆಂಗಳೂರು- ಮಂಗಳೂರು ಎಕ್ಸ್‌ಪ್ರೆಸ್ (ಪ್ರತಿ ದಿನ)
ಬೆಂಗಳೂರು- ಶಿವಮೊಗ್ಗ ಎಕ್ಸ್‌ಪ್ರೆಸ್ (ವಾರದಲ್ಲಿ ಎರಡು ದಿನ)
ಬಾಂದ್ರಾ(ಟಿ)- ಜೈಪುರ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ) ನಾಗ್ಡಾ, ಕೋಟಾ ಮೂಲಕ
ಬೀದರ್- ಮುಂಬೈ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.