ಈಗಿನ ಸುದ್ದಿ

ಸದಾನಂದಗೌಡರಿಂದ ಮೋದಿ ಸರ್ಕಾರದ ಚೊಚ್ಚಲ ರೇಲ್ವೆ ಬಜೆಟ್ ಮಂಡನೆ

ಸದಾನಂದಗೌಡರಿಂದ ಮೋದಿ ಸರ್ಕಾರದ ಚೊಚ್ಚಲ ರೇಲ್ವೆ ಬಜೆಟ್ ಮಂಡನೆ
Published On :

- ರೈಲ್ವೆ ವಾರ್ಷಿಕ ಯೋಜನೆ ವೆಚ್ಚ- 64,305 ಕೋಟಿ ರು.
- ಬಜೆಟ್ ಅನುದಾನ- 30,223 ಕೋಟಿ ರು.
- ಆಂತರಿಕ ಸಂಪನ್ಮೂಲ- 10,418 ಕೋಟಿ ರು.
- ಹೆಚ್ಚುವರಿ ಬಜೆಟ್ ಸಂಪನ್ಮೂಲ- 19,805 ಕೋಟಿ ರು.
- ರೈಲ್ವೆ ಲೋಡಿಂಗ್ ಗುರಿ- 1,101 ದಶಲಕ್ಷ ಟನ್
- 10 ವರ್ಷಗಳಲ್ಲಿ ರೈಲ್ವೆ ಆಧುನೀಕರಣಕ್ಕೆ ಬೇಕಾದ ವೆಚ್ಚ- 5 ಲಕ್ಷ ಕೋಟಿ ರು.
- ಇತ್ತೀಚೆಗೆ ಮಾಡಿದ ಪ್ರಯಾಣ ದರ ಏರಿಕೆಯಿಂದ ಆಗುವ ಉಳಿತಾಯ-8 ಸಾವಿರ ಕೋಟಿ ರು.
- ರೈಲ್ವೆಗೆ ಸಂದಾಯವಾಗಲಿರುವ ಅಂದಾಜು ಮೊತ್ತ-1,64,374 ಕೋಟಿ ರು.
- ರೈಲ್ವೆಗೆ ಆಗಲಿರುವ ಅಂದಾಜು ವೆಚ್ಚ- 149176 ರು.
- ವಜ್ರ ಚತುಷ್ಪಥ ಯೋಜನೆಗೆ ಬೇಕಾಗುವ ಮೊತ್ತ- 9 ಸಾವಿರ ಕೋಟಿ ರು.


ನವದೆಹಲಿ:
ಭಾರತೀಯ ರೇಲ್ವೆಯೊಂದಿಗೆ ಪ್ರತಿಯೊಬ್ಬ ಭಾರತೀಯನ ಭಾವನೆ ಬೆಸೆದುಕೊಂಡಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರೇಲ್ವೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು ಭರವಸೆ ನೀಡಿದ್ದಾರೆ.

ಇಂದು ಸಂಸತ್ತಿನಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಹಾಗೂ ತಮ್ಮ ಚೊಚ್ಚಲ ರೈಲ್ವೆ ಬಜೆಟ್ ಮಂಡಿಸಿದ ಸದನಾಂದಗೌಡ, ದೇಶದ ಜನತೆಗೆ ನಾನು ಆಭಾರಿಯಾಗಿದ್ದು, ಪ್ರಾಮಾಣಿಕತೆಗೆ ನನ್ನ ಮೊದಲ ಆದ್ಯತೆ ಎಂದು ಹೇಳಿದರು.

ಈಗ ದೇಶದಲ್ಲಿ ಪ್ರತಿದಿನ 12,500 ರೈಲುಗಳು ಸಂಚರಿಸುತ್ತಿವೆ. ಈ ರೈಲುಗಳಲ್ಲಿ ಪ್ರತಿನಿತ್ಯ 23 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಕಳೆದ 10 ವರ್ಷಗಳಿಂದ ಪ್ರಯಾಣ ದರ ಏರಿಕೆಯಾಗಿಲ್ಲ ಎಂದರು.

ದೇಶದ ಬೆಳವಣಿಗೆಯಲ್ಲಿ ರೇಲ್ವೆ ಇಲಾಖೆ ಪಾತ್ರ ಮಹತ್ವದ್ದು. ರೇಲ್ವೆ ಪ್ರಯಾಣ ದರ ಅತಿ ಕಡಿಮೆ ಇದ್ದು, 1 ರುಪಾಯಿ ಸಂಪಾದನೆಗೆ 94 ಪೈಸೆ ವೆಚ್ಚ ಮಾಡಲಾಗುತ್ತಿದೆ ಎಂದರು.

ಜನಪ್ರಿಯ ಯೋಜನೆಗಳ ಅತಿಯಾದ ಘೋಷಣೆಯಿಂದ ರೇಲ್ವೆ ಇಲಾಖೆ ನಷ್ಟ ಅನುಭವಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ಪೂರ್ಣವಾಗಿರುವುದು ಕೇವಲ ಒಂದೇ ಒಂದು ಕಾಮಗಾರಿ ಮಾತ್ರ. 359 ಯೋಜನೆಗಳು ಬಾಕಿ ಇವೆ. ಈ ಎಲ್ಲಾ ಬಾಕಿ ಇರುವ ಯೋಜನೆಗಳನ್ನು ಪೂರ್ಣಗೊಳಿಸಲು 5 ಲಕ್ಷ ಕೋಟಿ ಹೂಡಿಕೆ ಮಾಡಲಾಗುತ್ತಿದೆ ಎಂದು ಡೀವಿ ಹೇಳಿದರು. ಅಲ್ಲದೆ ಹೈಸ್ಪೀಡ್ ರೈಲು ಸೇರಿದಂತೆ ಮುಂದಿನ ಯೋಜನೆಗಳಿಗೆ ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದ ಮಾದರಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಬಜೆಟ್ ಮುಖ್ಯಾಂಶಗಳು
ರೇಲ್ವೆ ಸುರಕ್ಷತೆಗೆ 283 ಕೋಟಿ ಮೀಸಲು
3700 ಕಿ.ಮೀ ಹಳಿ ನಿರ್ಮಾಣಕ್ಕೆ 41 ಸಾವಿರ ಕೋಟಿ
ರೇಲ್ವೆ ಆಹಾರ ಕಳೆಪೆಯಾಗಿದ್ದರೆ ಪೂರೈಕೆದಾರರ ವಿರುದ್ಧ ಕ್ರಮ
ಈ ವರ್ಷ 30 ಯೋಜನೆ ಪೂರ್ಣಗೊಳಿಸುವುದು
ಎಲ್ಲಾ ರೇಲ್ವೆ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರು
ರೇಲ್ವೆ ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಎಫ್‌ಡಿಐಗೆ ಅವಕಾಶ
ದೆಹಲಿ ರೈಲು ನಿಲ್ದಾಣ ಅಭಿವೃದ್ಧಿಗೆ 100 ಕೋಟಿ
ಚಾಲ್ತಿಯಲ್ಲಿರುವ ಯೋಜನೆಗಳಿಗೆ 5 ಲಕ್ಷ ಕೋಟಿ ಮೀಸಲು
ದೇಶದ 10 ಮೆಟ್ರೋ ನಿಲ್ದಾಣಗಳ ಅಭಿವೃದ್ಧಿಗೆ ಕ್ರಮ
5 ವರ್ಷಗಳಲ್ಲಿ ಕಾಗದ ರಹಿತ ಕಚೇರಿಯಾಗಿ ಪರಿವರ್ತನೆ
ಪ್ರತಿಯೊಂದು ರೈಲು ನಿಲ್ದಾಣಗಳಲ್ಲೂ ಸಿಸಿಟಿವಿ ಅಳವಡಿಕೆ
ಎ-1 ಕೆಟಗರಿ ರೈಲುಗಳಲ್ಲಿ ಹೈಫೈ ವ್ಯವಸ್ಥೆ
ಈಶಾನ್ಯ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ಯೋಜನೆ ವಿಸ್ತರಣೆ
ಚಾರ್‌ಧಾಮ್ ಯಾತ್ರೆಗಾಗಿ 4 ವಿಶೇಷ ರೈಲುಗಳ ವ್ಯವಸ್ಥೆ
ರೇಲ್ವೆ ಇಲಾಖೆ ಸಂಪೂರ್ಣ ಕಂಪ್ಯೂಟರೀಕರಣ
ಮುಂಬೈ- ಅಹಮದಾಬಾದ್ ನಡುವೆ ದೇಶದ ಪ್ರಪ್ರಥಮ ಬುಲೆಟ್ ರೈಲು
ದೆಹಲಿ-ಆಗ್ರ ನಡುವೆ ಸೆಮಿ ಬುಲೆಟ್ ರೈಲು
ಚೆನ್ನೈ-ಹೈದರಾಬಾದ್ ನಡುವೆ ಸೆಮಿ ಬುಲೆಟ್ ರೈಲು
ದೆಹಲಿಯಿಂದ ಕಾನ್ಪುರ್, ಚಂಡೀಗಡ್, ಪಟಾಣ್‌ಕೋಟ್ ನಡುವೆ ಹೈಸ್ಪೀಡ್ ರೈಲು,
ದೇಶದ ಇತರೆ 9 ಮಾರ್ಗಗಳಲ್ಲಿ ಹೈಸ್ಪೀಡ್ ರೈಲು
ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕಾಗಿ 29 ನೂತನ ಯೋಜನೆ
5 ಜನಸಾಧಾರಣ, 5 ಪ್ರೀಮಿಯಮ್, 6 ಎಸಿ ಎಕ್ಸ್ ಪ್ರೆಸ್ ರೈಲುಗಳು ಸೇರಿಂದೆತ 50 ನೂತನ ರೈಲುಗಳ ಘೋಷಣೆ










Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.