ಈಗಿನ ಸುದ್ದಿ

2014-15ರ ಜಿಡಿಪಿ ದರ ಶೇ 5.4-5.9 ರಷ್ಟು ಚೇತರಿಕೆ: ಆರ್ಥಿಕ ಸಮೀಕ್ಷೆ

2014-15ರ ಜಿಡಿಪಿ ದರ ಶೇ 5.4-5.9 ರಷ್ಟು ಚೇತರಿಕೆ: ಆರ್ಥಿಕ ಸಮೀಕ್ಷೆ
Published On :

ನವದೆಹಲಿ: ಹಣಕಾಸು ಬಜೆಟ್ಗೂ ಮುನ್ನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಪೂರ್ವಭಾವಿ ಆರ್ಥಿಕ ಸಮೀಕ್ಷೆಯೊಂದನ್ನು ಮಂಡಿಸಿದ್ದು, ಸಮೀಕ್ಷೆ ಪ್ರಕಾರ 2014-15ರಲ್ಲಿ ಜಿಡಿಪಿ ಬೆಳವಣಿಗೆ ಶೇ. 5.4 ರಿಂದ 5.9ರಷ್ಟು ಏರಿಕೆಯನ್ನು ನಿರೀಕ್ಷಿಸಲಾಗಿದೆ.

ಮುಂಗಾರು ಕೊರತೆಯ ನಡುವೆಯೂ ಕಳೆದೆರಡು ವರ್ಷಗಳಿಂದ ಶೇ. 5ರ ನಡುವೆಯೆ ಸುತ್ತುತ್ತಿದ್ದ ಜಿಡಿಪಿ ಪ್ರಸ್ತುತ ವರ್ಷದಲ್ಲಿ ಶೇ.4 ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದ್ದು, ಸರ್ಕಾರದ ಪ್ರಸ್ತುತ ಹಣಕಾಸು ಸ್ಥಿತಿ ದುಸ್ಥಿತಿಗೆ ತಲುಪಿದೆ ಎಂದು ಸಮೀಕ್ಷೆ ಹೇಳಿದೆ.

ಹಣಕಾಸು ಕೊರತೆಯನ್ನು ಕಡಿಮೆ ಮಾಡಲು ಸಬ್ಸಿಡಿ ವೆಚ್ಚಗಳ ಕಡಿತ ಹಾಗೂ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸುವಂತೆ ಆರ್ಥಿಕ ಸಮೀಕ್ಷೆ ಶಿಫಾರಸು ಮಾಡಿದೆ. ಹಣಕಾಸು ಸಚಿವಾಲಯದ ಹಿರಿಯ ಆರ್ಥಿಕ ಸಲಹೆಗಾರರಾಗಿರುವ ಅರ್ಥಶಾಸ್ತ್ರಜ್ಞೆ ಇಳಾ ಪಟ್ನಾಯಕ್ ಈ ವಾರ್ಷಿಕ ವರದಿ ಸಿದ್ಧಪಡಿಸಿದ್ದಾರೆ.

ಮಾರ್ಚ್ 2015ರವರೆಗಿನ ಅವಧಿಗೆ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಶೇ. 4.3 ರಿಂದ 4.5 ರಷ್ಟು ಕೊರತೆಯನ್ನು ಹಣಕಾಸು ಸಚಿವರು ತಮ್ಮ ಬಜೆಟ್ನಲ್ಲಿ ಅಂದಾಜಿಸುವ ಸಾಧ್ಯತೆ ಇದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಮೊದಲ ಹಣಕಾಸು ಬಜೆಟ್ ನಾಳೆ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಲಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.