ಮದುವೆಗೆ ಒತ್ತಡ: ಆತ್ಮಹತ್ಯೆಗೆ ಯತ್ನಿಸಿದ ಯುವಕ

ಚೆನ್ನೈ: ಪೋಷಕರು ತಾವು ನೋಡಿದ ಹುಡುಗಿಯನ್ನೇ ಮದುವೆಯಾಗಬೇಕೆಂದು ಒತ್ತಡ ಹೇರಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ತಮಿಳುನಾಡಿನ ವೆಲ್ಲೂರ್ ನಿವಾಸಿ ಮುರುಗನ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಸಿಂಗಾಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುರುಗನ್ ರಜಾ ನಿಮಿತ್ತ ಹುಟ್ಟೂರಿಗೆ ಬಂದಿದ್ದ. ಈ ಸಂಧರ್ಭದಲ್ಲಿ ಮನೆಯವರು ತಾವು ನೋಡಿದ ಹುಡುಗಿಯನ್ನು ಮದುವೆಯಾಗುವಂತೆ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಒಪ್ಪದ ಮುರುಗನ್ ವಾಪಾಸ್ ಸಿಂಗಾಪುರಕ್ಕೆ ಹೋಗಲು ನಿರ್ಧರಿಸಿ ವಿಮಾನ ನಿಲ್ದಾಣಕ್ಕೆ ತೆರಳಿದ್ದಾನೆ. ಈ ವೇಳೆ ಪೋಷಕರು ಹಿಂಬಾಲಿಸಿಕೊಂಡು ಬರುವುದನ್ನು ಕಂಡು ಪರಾರಿಯಾಗಲು ಯತ್ನಿಸಿದ. ಆದರೆ ಸಿಂಗಾಪುರಕ್ಕೆ ಹೋಗುವ ವಿಮಾನ ತಡವಾಗಿ ಬರುವುದೆಂಬ ಮಾಹಿತಿ ತಿಳಿದ ಯುವಕ ವಿಮಾನ ನಿಲ್ದಾಣದ ಮಹಡಿಯಿಂದಲೇ ಧುಮುಕಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಲ್ದಾಣದ ಮೊದಲನೇ ಮಹಡಿಯಿಂದ ನೆಲ ಮಹಡಿ 15 ಅಡಿಯಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಮೇಲಿಂದ ಕೆಳಗೆ ಜಿಗಿದ ಕಾರಣ ಕಾಲಿನ ಮೂಳೆಗೆ ಪೆಟ್ಟುಬಿದ್ದಿದ್ದು ಶೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಮದುವೆ ಕುರಿತು ಮುರುಗನ್ ಹಾಗೂ ಅವರ ಪೋಷಕರ ಸಂಬಂಧಿಕರ ನಡುವೆ ವಾದ ವಿವಾದಗಳು ನಡೆದಿದೆ. ಅಂತಿಮವಾಗಿ ಮುರುಗನ್ ಮದುವೆಯನ್ನು ತಿರಸ್ಕರಿಸಿ ನಂತರ ಊರನ್ನು ಬಿಟ್ಟು ಹೋಗಲು ನಿರ್ಧರಿಸಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ. ಅಲ್ಲಿ ವಿಮಾನ ತಡವಾಗಿ ಬರುತ್ತದೆಂದು ತಿಳಿದ ಯುವಕ ವಿಮಾನ ನಿಲ್ದಾಣದಲ್ಲೇ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಈಗಾಗಲೇ ಪ್ರಕರಣವನ್ನು ಚೆನ್ನೈ ಪೋಲೀಸರು ದಾಖಲಿಸಿಕೊಂಡಿದ್ದು, ಪೋಷಕರನ್ನು ವಿಚಾರಣೆ ನಡೆದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


