ಈಗಿನ ಸುದ್ದಿ

ಅರುಣ್ ಜೇಟ್ಲಿಯಿಂದ ಬಜೆಟ್ ಮಂಡನೆ

ಅರುಣ್ ಜೇಟ್ಲಿಯಿಂದ ಬಜೆಟ್ ಮಂಡನೆ
Published On :

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 2014-15ನೇ ಸಾಲಿನ ಬಜೆಟ್ ಮಂಡಿಸಿದ್ದು, ಭಾರತದ ಅರ್ಥ ವ್ಯವಸ್ಥೆಯ ಎದುರು ಬಹು ದೊಡ್ಡ ಸವಾಲು ಇದೆ ಎಂದು ಗುರುವಾರ ಹೇಳಿದ್ದಾರೆ.

ಇಂದು ಸಂಸತ್ತಿನಲ್ಲಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ಜೇಟ್ಲಿ, ಕುಂಟಿತಗೊಂಡಿರುವ ಭಾರತೀಯ ಆರ್ಥಿಕ ವ್ಯವಸ್ಥೆಯಿಂದಾಗಿ ಅವಕಾಶಗಳಿಗೆ ಹೊಡತೆ ಬಿದ್ದಿದೆ. ವಿಶ್ವದ ಆರ್ಥಿಕತೆ ಕುಸಿತವೇ ನಮ್ಮ ಆರ್ಥಿಕತೆ ಕುಸಿತಕ್ಕೆ ಕಾರಣ ಎಂದರು.

ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ತಾವು ಸಿದ್ಧ ಎಂದ ಜೇಟ್ಲಿ, ಸಮಗ್ರ ಹಾಗೂ ಸುಸ್ಥಿರ ಆರ್ಥಿಕತೆಗೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದರು. ಅಲ್ಲದೆ ಕಪ್ಪು ಹಣ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಹಣದುಬ್ಬರ ಇಳಿಕೆಗೆ ಮೊದಲ ಆದ್ಯತೆ ನೀಡಲಾಗುವುದು. ಇದರಿಂದ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಶೇ.7ರಿಂದ 8ರಷ್ಟು ಅಭಿವೃದ್ಧಿ ಸಾಧಿಸುವ ಗುರಿ ಹೊಂದಲಾಗಿದೆ ಎಂದರು.

ಬಜೆಟ್ ಮುಖ್ಯಾಂಶಗಳು
-ತೆರಿಗೆ ದರದಲ್ಲಿ ಬದಲಾವಣೆ ಇಲ್ಲ
- ಸಣ್ಣ, ಅಲ್ಪ ಪ್ರಮಾಣದಲ್ಲಿ ತೆರಿಗೆ ಪಾವತಿಸುವ ಹಾಗೂ ಹಿರಿಯ ನಾಗರಿಕರ ತೆರಿಗೆ ವಿನಾಯಿತಿ ಮಿತಿ 2 ಲಕ್ಷದಿಂದ 2.5 ಲಕ್ಷಕ್ಕೇರಿಕೆ. ವಾರ್ಷಿಕ 3 ಲಕ್ಷದವರೆಗೆ ಆದಾಯವಿರುವ ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ.
- ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್) ಮಿತಿ ವರ್ಷಕ್ಕೆ 1.5 ಲಕ್ಷಕ್ಕೇರಿಕೆ
- ಗೃಹ ಸಾಲದ ರಿಬೇಟ್ 1.5 ಲಕ್ಷದಿಂದ 2 ಲಕ್ಷಕ್ಕೇರಿಕೆ
- ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಳುಗಳ ತರಬೇತಿಗಾಗಿ 100 ಕೋಟಿ ರು.
- ನೇರ ತೆರಿಗೆ ಪ್ರಸ್ತಾಪ ಜಾರಿಯಾದರೆ ಸರ್ಕಾರದ ಬೊಕ್ಕಸಕ್ಕಾಗುವ ನಷ್ಟ 22,200 ಕೋಟಿ ರು.
- ಸೆಕ್ಷನ್ 80ಸಿ ಅನ್ವಯ ಇರುವ ಹೂಡಿಕೆ ಮಿತಿ 1 ಲಕ್ಷದಿಂದ 1.5 ಲಕ್ಷಕ್ಕೇರಿಕೆ ಪ್ರಸ್ತಾಪ
- ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸಂವಹನ ಅಗತ್ಯತೆಗಾಗಿ 150 ಕೋಟಿ
- ಈಶಾನ್ಯ ಪ್ರದೇಶಗಳಲ್ಲಿ 'ಅರುಣ್ ಪ್ರಭಾ' ಎಂಬ 24/7 ಚಾನೆಲ್ ಆರಂಭ
- ಈಶಾನ್ಯ ಪ್ರದೇಶಗಳಲ್ಲಿ ರೈಲು ಸಂಪರ್ಕಕ್ಕಾಗಿ 1 ಸಾವಿರ ಕೋಟಿ
- ಕಾಶ್ಮೀರದ ನಿರ್ವಸಿತ ವಲಸಿಗರಿಗಾಗಿ 500 ಕೋಟಿಯ ಕಾರ್ಯಕ್ರಮ ಆರಂಭ
- ನದಿಗಳ ಜೋಡಣೆ ಯೋಜನೆಗಾಗಿ 100 ಕೋಟಿ
- ಪುರಾತತ್ವ ಸ್ಥಳಗಳ ಅಭಿವೃದ್ಧಿಗಾಗಿ 100 ಕೋಟಿ. ಗಯಾವನ್ನು ವಿಶ್ವದರ್ಜೆಯ ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿ.
- ರಕ್ಷಣಾ ಕ್ಷೇತ್ರಕ್ಕೆ 5 ಸಾವಿರ ಕೋಟಿ
- ರಾಷ್ಟ್ರೀಯ ಪೊಲೀಸ್ ಸ್ಮಾರಕ ಸ್ಥಾಪನೆಗೆ 50 ಕೋಟಿ.
- ತಂತ್ರಜ್ಞಾನ ಅಭಿವೃದ್ಧಿ ನಿಧಿಯನ್ನು ಅಭಿವೃದ್ಧಿಪಡಿಸಲು 100 ಕೋಟಿ
- ಇಂಡಿಯಾ ಗೇಟ್‌ನ ಪ್ರಿನ್ಸೆಸ್ ಪಾರ್ಕ್‌ನಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕೆ 100 ಕೋಟಿ
- ರಕ್ಷಣಾ ಸಿಬ್ಬಂದಿಗಾಗಿ 'ಸಮಾನ ಹುದ್ದೆ, ಸಮಾನ ಪಿಂಚಣಿ' ನೀತಿ
- ಸಣ್ಣ ಬ್ಯಾಂಕುಗಳಿಗೆ ಪರವಾನಗಿ ನೀಡುವುದಕ್ಕಾಗಿ ಆರ್‌ಬಿಐನಿಂದ ಮಾರ್ಗಸೂಚಿ
- ದುರ್ಬಲ ವರ್ಗದವರ ಸಬಲೀಕರಣಕ್ಕಾಗಿ ಎಲ್ಲ ಕುಟುಂಬಗಳಿಗೂ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸುವ ಗುರಿ; ಪ್ರತಿ ಮನೆಯಲ್ಲೂ ಕನಿಷ್ಠ 2 ಬ್ಯಾಂಕ್ ಖಾತೆ ಉದ್ದೇಶ
- ರಾಷ್ಟ್ರೀಯ ಹೆದ್ದಾರಿಗಳಿಗಾಗಿ 37,800 ಕೋಟಿ
- ಆಯಾ ರಾಜ್ಯಗಳ ಕೋರಿಕೆಗೆ ತಕ್ಕಂತೆ ಖನಿಜಗಳ ಮೇಲಿನ ರಾಯಧನ ಪರಿಷ್ಕರಣೆ
- ಅನಿಲ ಗ್ರಿಡ್ ಪೂರ್ಣಗೊಳಿಸುವ ಸಲುವಾಗಿ ಪಿಪಿಪಿ ಮಾದರಿಯಲ್ಲಿ ಹೆಚ್ಚುವರಿ 15 ಸಾವಿರ ಕಿ.ಮೀ. ಪೈಪ್‌ಲೈನ್ ಅಭಿವೃದ್ಧಿ
- ಹೊಸ ಮತ್ತು ನವೀಕರಿಸಲಾಗುವ ಇಂಧನಕ್ಕೆ ಆದ್ಯತೆ; ರಾಜಸ್ಥಾನ, ತಮಿಳುನಾಡು, ಲಡಾಖ್‌ನಲ್ಲಿ 500 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ವಿದ್ಯುತ್ ಯೋಜನೆ ಆರಂಭ.
- ಅಲಹಾಬಾದ್‌ನಿಂದ ಹಲ್ದಿಯಾವರೆಗೆ(1,620 ಕಿ.ಮೀ.) ಗಂಗಾ ನದಿಗೆ ಜಲ ಮಾರ್ಗ ನಿರ್ಮಿಸಲು 4,200 ಕೋಟಿ.
- ಟಯರ್ 2 ಮತ್ತು 3ನೇ ನಗರಗಳಲ್ಲಿ ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಹೊಸ ಏರ್‌ಪೋರ್ಟ್‌ಗಳ ಅಭಿವೃದ್ಧಿ ಯೋಜನೆ
- ರಾಯ್‌ಬರೇಲಿ, ಲಖನೌ, ಸೂರತ್, ಭಾಗಲ್ಪುರದಲ್ಲಿ ಇನ್ನೂ 6 ಜವಳಿ ಸಮೂಹ ಸ್ಥಾಪನೆಗೆ 200 ಕೋಟಿ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಶ್ಮಿನಾ (ಕಾಶ್ಮೀರದ ಉಣ್ಣೆ) ತಯಾರಿಕೆ ಯೋಜನೆಗೆ 50 ಕೋಟಿ.
- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಂಎಸ್‌ಎಂಇ)ಗಳ ಪುನಶ್ಚೇತನಕ್ಕೆ ಸಮಿತಿ. 3 ತಿಂಗಳೊಳಗೆ ವರದಿ
- 7 ನಗರಗಳಲ್ಲಿ ಇಂಡಸ್ಟ್ರಿಯಲ್ ಸ್ಮಾರ್ಟ್ ಸಿಟಿ ನಿರ್ಮಾಣ
- 100 ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ 7,060 ಕೋಟಿ!
- ಡಿಸೆಂಬರ್ 31ರೊಳಗಾಗಿ ಇ-ಪ್ಲಾಟ್‌ಫಾರ್ಮ್ ಮೂಲಕ ಎಲ್ಲ ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳನ್ನು ಒಂದುಗೂಡಿಸುವುದು
- ಕೃಷಿ ಸಂಬಂಧಿ ಮಾಹಿತಿ ಪ್ರಸಾರ ಮಾಡುವ ಕಿಸಾನ್ ಟೆಲಿವಿಷನ್‌ಗಾಗಿ 100 ಕೋಟಿ
- ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ಗೆ 1 ಸಾವಿರ ಕೋಟಿ
- ಅಲ್ಪಾವಧಿ ಗ್ರಾಮೀಣ ಸಾಲ ಮರುಪಾವತಿ ನಿಧಿಗೆ 5 ಸಾವಿರ ಕೋಟಿ
- ಸ್ವದೇಶಿ ಜಾನುವಾರು ತಳಿ ಮತ್ತು ದೇಶೀಯ ಮೀನುಗಾರಿಕೆಯಲ್ಲಿ ನೀಲಿ ಕ್ರಾಂತಿಗಾಗಿ 50 ಕೋಟಿ
- ನಬಾರ್ಡ್ ಮೂಲಕ 5 ಲಕ್ಷ ಭೂರಹಿತ ರೈತರಿಗೆ ಹಣಕಾಸು ನೆರವು
- ಮಣ್ಣಿನ ಫಲವತ್ತತೆ ಗುರುತಿನ ಚೀಟಿಗೆ 100 ಕೋಟಿ. ದೇಶಾದ್ಯಂತ ಮಣ್ಣಿನ ಪರೀಕ್ಷೆಗಾಗಿ 56 ಕೋಟಿ
- ಆಂಧ್ರ ಮತ್ತು ರಾಜಸ್ಥಾನದಲ್ಲಿ ಕೃಷಿ ವಿಶ್ವವಿದ್ಯಾಲಯ, ಹರ್ಯಾಣ ಮತ್ತು ತೆಲಂಗಾಣದಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ ಸ್ಥಾಪನೆಗಾಗಿ 200 ಕೋಟಿ.
- ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆಗಳಲ್ಲಿ ಕೊಳೆಗೇರಿ ಅಭಿವೃದ್ಧಿಯೂ ಸೇರ್ಪಡೆ
- ಮದರಸಾಗಳ ಆಧುನೀಕರಣಕ್ಕೆ 100 ಕೋಟಿ
- ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ರೈಲುಗಳ ಅಭಿವೃದ್ಧಿ; ಅಹಮದಾಬಾದ್ ಮತ್ತು ಲಖನೌನಲ್ಲಿ ಮೆಟ್ರೋ ಯೋಜನೆಗೆ 100 ಕೋಟಿ
- ಸಮುದಾಯ ರೇಡಿಯೋ ಕೇಂದ್ರಗಳಿಗೆ 100 ಕೋಟಿ; 600 ಹೊಸ ಮತ್ತು ಹಾಲಿ ಕೇಂದ್ರಗಳಿಗೆ ಬೆಂಬಲ
- ರಾಷ್ಟ್ರೀಯ ಗ್ರಾಮೀಣ ಅಂತರ್ಜಾಲ ಮತ್ತು ತಂತ್ರಜ್ಞಾನಕ್ಕಾಗಿ 500 ಕೋಟಿ
- ಲೋಕನಾಯಕ ಜಯಪ್ರಕಾಶ್ ನಾರಾಯಣ್ ಹೆಸರಿನಲ್ಲಿ ಮಧ್ಯಪ್ರದೇಶದಲ್ಲಿ ಅತ್ಯುತ್ಕೃಷ್ಟತಾ ಕೇಂದ್ರ ಸ್ಥಾಪನೆ
- ಇನ್ನೂ 5 ಐಐಟಿಗಳು ಮತ್ತು 5 ಐಐಎಂಗಳ ಸ್ಥಾಪನೆ
- ನಾಲ್ಕು ಹೆಚ್ಚುವರಿ ಏಮ್ಸ್ ಸ್ಥಾಪನೆಗೆ 500 ಕೋಟಿ. ಆಂಧ್ರ, ಪಶ್ಚಿಮ ಬಂಗಾಳ, ವಿದರ್ಭ ಮತ್ತು ಪೂರ್ವಂಚಲದಲ್ಲಿ ಸ್ಥಾಪನೆ
- ರಾಷ್ಟ್ರೀಯ ಗೃಹ ಬ್ಯಾಂಕಿಂಗ್ ಯೋಜನೆಗೆ 8 ಸಾವಿರ ಕೋಟಿ.
- ವೆಚ್ಚ ಸುಧಾರಣೆಗಾಗಿ ವೆಚ್ಚ ನಿರ್ವಹಣೆ ಆಯೋಗ ರಚನೆ
- ಪ್ರಧಾನಮಂತ್ರಿ ಕೃಷಿ ಸಂಚಾಯಿ ಯೋಜನೆಗೆ 1 ಸಾವಿರ ಕೋಟಿ
- ಗ್ರಾಮೀಣ ಪ್ರದೇಶಗಳಿಗೂ ವಿದ್ಯುತ್ ಪೂರೈಕೆಗೆ ಅನುಕೂಲವಾಗುವಂತೆ 'ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ'ಗೆ 500 ಕೋಟಿ
- ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 14,389 ಕೋಟಿ
- 'ಅಜೀವಿಕಾ' ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀಡಲಾಗುವ ಶೇ.4ರ ಬಡ್ಡಿದರದ ಸಾಲವನ್ನುಇನ್ನೂ 100 ಜಿಲ್ಲೆಗಳಿಗೆ ವಿಸ್ತರಣೆ
- ಬುಡಕಟ್ಟು ಜನಾಂಗೀಯರ ಅಭಿವೃದ್ಧಿಗಾಗಿ 100 ಕೋಟಿ ಆನುದಾನದಡಿ 'ವನಬಂಧು ಕಲ್ಯಾಣ್ ಯೋಜನೆ'
- ಇಪಿ ಯೋಜನೆಯ ಎಲ್ಲ ಚಂದಾದಾರಿಗೂ ಮಾಸಿಕ 1 ಸಾವಿರ ಕನಿಷ್ಠ ಪಿಂಚಣಿ
- 15 ಹೊಸ ಬ್ರೈಲ್ ಪ್ರೆಸ್‌ಗಳ ನಿರ್ಮಾಣಕ್ಕೆ ಮತ್ತು 10 ಹಾಲಿ ಬ್ರೈಲ್ ಪ್ರೆಸ್ ಆಧುನೀಕರಣಕ್ಕಾಗಿ ರಾಜ್ಯ ಸರ್ಕಾರಗಳಿಗೆ ನೆರವು
- ದೃಷ್ಟಿ ನ್ಯೂನತೆ ಇರುವ ವ್ಯಕ್ತಿಗಳಿಗೆ ನೆರವಾಗುವ ಉದ್ದೇಶದಿಂದ ಬ್ರೈಲ್ ಇರುವ ಕರೆನ್ಸಿ ನೋಟುಗಳ ಮುದ್ರಣ
- ಸಾರ್ವಜನಿಕ ರಸ್ತೆ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ ಯೋಜನೆಗೆ ಪ್ರಾಯೋಗಿಕ ಪರೀಕ್ಷೆಗಾಗಿ 50 ಕೋಟಿ
- ದೊಡ್ಡ ನಗರಗಳಲ್ಲಿ ಮಹಿಳೆಯರ ಸುರಕ್ಷತೆ ಹೆಚ್ಚಿಸಲು 150 ಕೋಟಿ
- 'ಬೇಟಿ ಬಚಾವೋ, ಬೇಟಿ ಪಡಾವೋ' ಯೋಜನೆಗಾಗಿ 100 ಕೋಟಿ
- 12 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ
- ಪಂಡಿತ್ ಮದನ್ ಮೋಹನ್ ಮಾಳವೀಯ ಹೊಸ ಶಿಕ್ಷಕ ತರಬೇತಿ ಕಾರ್ಯಕ್ರಮಕ್ಕೆ 500 ಕೋಟಿ. ಹೊಸ ತರಬೇತಿ ಸಲಕರಣೆ ನೀಡಿ, ಶಿಕ್ಷಕರಿಗೆ ಉತ್ತೇಜನ ನೀಡುವ ಉದ್ದೇಶ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.