ಈಗಿನ ಸುದ್ದಿ

ಜೇಟ್ಲಿ ಬಜೆಟ್, ಜನಪರ ಬಜೆಟ್: ಅನಂತಕುಮಾರ್

ಜೇಟ್ಲಿ ಬಜೆಟ್, ಜನಪರ ಬಜೆಟ್: ಅನಂತಕುಮಾರ್
Published On :

ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿರುವ 2014-15ರ ಸಾಲಿನ ಬಜೆಟ್ ಜನಪರ ಬಜೆಟ್ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಅನಂತಕುಮಾರ್ ಹೇಳಿದ್ದಾರೆ.

ಬಜೆಟ್ ಮಂಡನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದೆ ಅನಂತಕುಮಾರ್, ಆರ್ಥಿಕತೆಗೆ ಪುನಶ್ಟೇತನ ನೀಡುವ ಬಜೆಟ್ ಇದಾಗಿದ್ದು, ಜನಪರ ಅಭಿವೃದ್ಧಿಗಾಗಿಯೇ ಮಾಡಿರುವ ಬಜೆಟ್ ಎಂದರು. ಈ ಬಜೆಟ್‌ನಲ್ಲಿ ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಕೃಷಿ, ಕೈಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದರು.

ಪ್ರಸ್ತುತ ಬಜೆಟ್‌ನಲ್ಲಿ ದೇಶದ ಜನತೆಗೆ ಹೊರೆಯಾಗದಂತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಜೆಟ್‌ನಲ್ಲಿ ದೇಶದ ಜನರ ಮೇಲೆ ಯಾವುದೇ ತೆರಿಗೆ ವಿಧಿಸಿಲ್ಲ. ಅಲ್ಲದೆ ಎಲ್ಲಾ ವರ್ಗದವರಿಗೂ ಸರಿಸಮವಾದ ಬಜೆಟ್ ಕೊಡುಗೆ ಸಿಕ್ಕಿದೆ ಎಂದರು.

ಬಜೆಟ್ ಮುಖ್ಯಾಂಶಗಳು

  • ಹೊಸ ಯೂರಿಯಾ ನೀತಿ ಜಾರಿ, ಗೊಬ್ಬರ ಬೆಲೆ ಹೆಚ್ಚಳ ಸಾಧ್ಯತೆ
  • ದೇಶದ 9 ವಿಮಾನ ನಿಲ್ದಾಗಳಲ್ಲಿ ಇ ವೀಸಾ ಸೇವೆ, ಪ್ರವಾಸೋದ್ಯಮಕ್ಕೆ ಇ ವೀಸಾ ಯೋಜನೆ ಜಾರಿ
  • ಸಾಂಪ್ರದಾಯಿಕ ಉದ್ಯೋಗ ಕೌಶಲ್ಯ ಅಭಿವೃದ್ಧಿಗೆ ತರಬೇತಿ ಕೇಂದ್ರ
  • ವಿಮಾ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಎಫ್‌ಡಿಐ ಅವಕಾಶ
  • 1961ರ ಆದಾಯ ತೆರಿಗೆ ಕಾಯ್ದೆ ತಿದ್ದುಪಡಿ
  • ತೈಲ, ಎಲ್‌ಪಿಜಿ ಸಬ್ಸಿಡಿ ಸುಧಾರಣೆ
  • ತೆರಿಗೆ ವಾಜ್ಯಗಳ ವಿಚಾರಣೆ 2 ತಿಂಗಳಲ್ಲಿ ಮುಗಿಸಲು ಕ್ರಮ
  • ಗ್ರಾಮ ಜ್ಯೋತಿ ಯೋಜನೆಗೆ 500 ಕೋಟಿ
  • ಕಿಸಾನ್ ಉಳಿತಾಯ ಪತ್ರಗಳ ಮೂಲಕ ಉಳಿತಾಯ ಯೋಜನೆ ಜಾರಿ
  • ದೊಡ್ಡ ಸಿಟಿಗಳ ಬಳಿ ಸ್ಮಾರ್ಟ್ ಸಿಟಿ ನಿರ್ಮಾಣ, ಸ್ಮಾರ್ಟ್ ಸಿಟಿ  ನಿರ್ಮಾಣಕ್ಕೆ 7600 ಕೋಟಿ ನಿಗದಿ
  • ಸಬ್ಸಿಡಿ ಕಡಿತಕ್ಕೆ ಹೊಸ ಯುಆರ್‌ಇಎ ಪಾಲಿಸಿ
  • ವೆಚ್ಚ ನಿರ್ವಹಣಾ ಆಯೋಗ ಸ್ಥಾಪನೆಗೆ ನಿರ್ಧಾರ
  • ಸರ್ದಾರ್ ವಲಭಬಾಯ್ ಪಟೇಲ್ ಪ್ರತಿಮೆಗೆ 200 ಕೋಟಿ
  • 5 ಐಐಟಿ, 5 ಐಐಎಂ ಸ್ಥಾಪನೆ, 12 ವೈದ್ಯಕೀಯ ಕಾಲೇಜ್ ಸ್ಥಾಪನೆ
  • ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಬಳಕೆಗಾಗಿ ಡಿಜಿಟಲ್ ಇಂಡಿಯಾ ಯೋಜನೆ ಜಾರಿ
  • ಸುಸಜ್ಜಿತ ಕ್ಲಾಸ್‌ರೂಮ್‌ಗಳ ನಿರ್ಮಾಣಕ್ಕಾಗಿ 100 ಕೋಟಿ ರು.
  • ಆಂಧ್ರಪ್ರದೇಶ, ಮಹಾರಾಷ್ಟ್ರದ(ವಿದರ್ಭ), ಪಶ್ಚಿಮ ಬಂಗಾಳ ಹಾಗೂ ಪೂರ್ವಂಚಲದಲ್ಲಿ ಏಮ್ಸ್ ಕಾಲೇಜುಗಳ ಸ್ಥಾಪನೆ
  • ರಾಷ್ಟ್ರೀಯ ನೀರು ಸಂರಕ್ಷಣಾ ಯೋಜನೆಗಾಗಿ 2,100 ಕೋಟಿ ರು.
  • ದೇಶದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಮಾದರಿಯ ನಾಲ್ಕು ಹೊಸ ಕಾಲೇಜುಗಳ ಸ್ಥಾಪನೆ
  • ಬ್ಯಾಂಕ್‌ಗಳಿಗೆ ಹೆಚ್ಚಿನ ಸ್ವಾಯತತ್ತೆ ನೀಡುಲು ನಿರ್ಧಾರ
  • ಗ್ರಾಮೀಣ ಕುಡಿಯುವ ನೀರಿನ ಯೋಜನೆಗಾಗಿ 3,600 ಕೋಟಿ ರು.
  • ಸಾರಿಗೆ ಕ್ಷೇತ್ರಗಳಲ್ಲಿ ಮಹಿಳೆಯರ ಸುರಕ್ಷತೆಗೆ 150 ಕೋಟಿ ರು.
  • ಗಂಗಾ ನದಿ ಶುದ್ಧೀಕರಣಕ್ಕೆ 2037 ಕೋಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.