ಈಗಿನ ಸುದ್ದಿ

ಪ್ರಿಯಕರನ ಮನೆಯಲ್ಲೇ ಯುವತಿ ಆತ್ಮಹತ್ಯೆಗೆ ಶರಣು

ಪ್ರಿಯಕರನ ಮನೆಯಲ್ಲೇ ಯುವತಿ ಆತ್ಮಹತ್ಯೆಗೆ ಶರಣು
Published On :

ಬೆಂಗಳೂರು: ಯುವತಿಯೊಬ್ಬಳು ತಾನು ಪ್ರೀತಿಸುತ್ತಿದ್ದ ಯುವಕನ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ನಡೆದಿದೆ.

ತಾನು ಪ್ರೀತಿಸುತ್ತಿದ್ದ ಯುವಕ ಬೇರೊಂದು ಯುವತಿಯೊಂದಿಗೆ ಮದುವೆಯಾಗುತ್ತಿರುವ ಸಂಗತಿ ತಿಳಿದು ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗುತ್ತಿದೆ.

ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐಶ್ವರ್ಯ ಎಂಬ ಯುವತಿ ಪ್ರಿಯಕರನ ಮನೆಯಲ್ಲೇ ಆಶ್ರಯ ಪಡೆದಿದ್ದಳು. ಆದರೆ ಪ್ರಿಯಕರನ ಪೋಷಕರು ಬೇರೆ ಯುವತಿಯೊಂದಿಗೆ ತಮ್ಮ ಮಗನ ಮದುವೆ ಮಾಡಲು ಮುಂದಾದ ವಿಷಯ ತಿಳಿದ ಯುವತಿ, ಈ ವಿಷಯವಾಗಿ ಪ್ರಿಯಕರ ಮಣಿಕಾಂತ್‌ನೊಂದಿಗೆ ಇತ್ತೀಚೆಗೆ ಜಗಳ ಮಾಡಿಕೊಂಡಿದ್ದಳು.

ಈ ಎಲ್ಲಾ ಘಟನೆಗಳಿಂದ ಮನನೊಂದ ಯುವತಿ ನಿನ್ನೆ ರಾತ್ರಿ ಪ್ರಿಯಕರನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೋಲೀಸರು  ಮಣಿಕಾಂತ್ ಹಾಗೂ ಪೋಷಕರ ವಿಚಾರಣೆ ನಡೆಸುತ್ತಿದ್ದಾರೆ.

ಹಿನ್ನೆಲೆ........?
ಸಣ್ಣ ವಯಸ್ಸಿನಲ್ಲೇ ಪೋಷಕರನ್ನು ಕಳೆದು ಕೊಂಡಿದ್ದ ಐಶ್ವರ್ಯ ಸಂಬಂಧಿಕರಾದ ಶಿವಕುಮಾರ್ ಎಂಬುವರ ಆಶ್ರಯದಲ್ಲಿ ಬೆಳೆದಿದ್ದಳು. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಸಹ ಪಾಠಿಯಾಗಿದ್ದ ಮಣಿಕಾಂತ್ ಎಂಬಾತನೊಂದಿಗೆ ಪ್ರೀತಿ ಶುರುವಾಗಿದೆ. ಪ್ರೀತಿ ವಿಷಯವನ್ನು ಯುವತಿ ಮನೆಯವರಿಗೆ ತಿಳಿಸಿದ್ದು, ಇದಕ್ಕೆ ಮನೆಯವರು ಒಪ್ಪದ ಕಾರಣ ಯುವತಿ ಮನೆ ತೊರೆದು ಪ್ರಿಯಕರನ ಮನೆಯಲ್ಲಿ ಆಶ್ರಯ ಪಡೆದಿದ್ದಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.