ನಾಶಮಾಡಲ್ಪಟ್ಟ ಕಡತಗಳ ಬಗ್ಗೆ ಮಾಹಿತಿ ಕೊಡಿ

ನವದೆಹಲಿ: ಕೇಂದ್ರ ಗೃಹ ಸಚಿವಾಲಯ ನಾಶಗೊಳಿಸಿದ ಕಡತಗಳ ಬಗ್ಗೆ ಮಾಹಿತಿ ನೀಡಿ ಎಂದು ರಾಜ್ಯಸಭಾ ಸದಸ್ಯರು ಗೃಹ ಸಚಿವ ರಾಜ್ನಾಥ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.
ಗೃಹ ಸಚಿವಾಲಯ 1.5 ಲಕ್ಷ ಕಡತಗಳನ್ನು ನಾಶ ಮಾಡಿದೆ ಎಂಬ ಸುದ್ದಿಯನ್ನು ಉಲ್ಲೇಖಿಸಿದ ರಾಜ್ಯಸಭಾ ಸದಸ್ಯರು ಗೃಹಸಚಿವಾಲಯ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಅದೇ ವೇಳೆ ಶುಕ್ರವಾರ ಮೇಲ್ಮನೆಯಲ್ಲಿ ಮಾತನಾಡಿದ ರಾಜ್ ನಾಥ್ ಸಿಂಗ್, ಸ್ವಚ್ಛ ಮಾಡುವ ಉದ್ದೇಶದಿಂದ 11,100 ಕಡತಗಳನ್ನಷ್ಟೇ ನಾಶ ಮಾಡಲಾಗಿದೆ ಎಂದು ಹೇಳಿದ್ದರು.
ಗೃಹಸಚಿವರು ಹೇಳಿರುವ ಹೇಳಿಕೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು, ಎಷ್ಟು ಕಡತಗಳನ್ನು ನಾಶ ಮಾಡಲಾಗಿದೆ ಎಂಬುದರ ಬಗ್ಗೆ ವಿವರಗಳನ್ನು ನೀಡಬೇಕೆಂದು ಜನತಾದಳ (ಸಂಯುಕ್ತ) ನೇತಾರ ಕೆ.ಸಿ ತ್ಯಾಗಿ ಅವರು ಹೇಳಿದ್ದಾರೆ.
ಅದೇ ವೇಳೆ ಕಡತಗಳನ್ನು ಯಾವ ರೀತಿ ನಾಶಪಡಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕೆಂದು ಸಿಪಿಎಂ ಒತ್ತಾಯಿಸಿದೆ.
ಮಾತ್ರವಲ್ಲದೆ ನಾಶಪಡಿಸಲ್ಪಟ್ಟ ಕಡತಗಳ ಇಲೆಕ್ಟ್ರಾನಿಕ್ ಪ್ರತಿಗಳನ್ನು ಇರಿಸಲಾಗಿದೆಯೇ? ನಾಶಗೊಳಿಸಲ್ಪಟ್ಟ ಕಡತಗಳಲ್ಲಿ ಮಹಾತ್ಮಾ ಗಾಂಧಿ ಹತ್ಯೆಗೆ ಸಂಬಂಧಪಟ್ಟ ಕಡತಗಳು ಇವೆಯೆ? ಐತಿಹಾಸಿಕ ವಿಷಯಗಳಿಗೆ ಸಂಬಂಧಪಟ್ಟ ಕಡತಗಳು ನಾಶವಾಗಿವೆಯೆ? ಎಂದು ವಿಪಕ್ಷ ನೇತಾರ ಗುಲಾಮ್ ನಬಿ ಆಜಾದ್ ಪ್ರಶ್ನಿಸಿದ್ದಾರೆ.
ಶುಕ್ರವಾರ ರಾಜ್ಯಸಭೆಯಲ್ಲಿ ಮಾತನಾಡಿದ ರಾಜ್ನಾಥ್ ಸಿಂಗ್ 05.06.2014 - 08.07.2014ರ ಅವಧಿಯಲ್ಲಿ ಒಟ್ಟು 11,100 ಕಡತಗಳನ್ನು ನಾಶಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ತಾವು ಯಾವುದೇ ಅಮೂಲ್ಯ ದಾಖಲೆಗಳಿರುವ ಕಡತಗಳನ್ನು ನಾಶಮಾಡಿಲ್ಲ, ಈ ಬಗ್ಗೆ ಸಂದೇಹ ಪಡುವ ಅಗತ್ಯವಿಲ್ಲ ಎಂದು ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


