ಉಗ್ರ ಹಫೀಜ್ ಭೇಟಿ ವೈಯಕ್ತಿಕ: ಪತ್ರಕರ್ತ ಪ್ರತಾಪ್

ನವದೆಹಲಿ: ಯೋಗ ಗುರು ಬಾಬಾ ರಾಮ್ದೇವ್ ಅವರ ಆಪ್ತ ಹಾಗೂ ಪತ್ರಕರ್ತ ವೇದ್ ಪ್ರತಾಪ್ ವೈದಿಕ್ ಅವರು ಮುಂಬೈ ದಾಳಿ ಪ್ರಕರಣದ ಪ್ರಮುಖ ಆರೋಪಿ ಹಾಗೂ ಜಮಾತ್-ಉದ್-ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಮೊಹ್ಮದ್ ಸಯೀದ್ನನ್ನು ಭೇಟಿ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಆದರೆ ಮೊಸ್ಟ್ ವಾಂಟೆಡ್ ಉಗ್ರನ ಭೇಟಿಯನ್ನು ಸಮರ್ಥಿಸಿಕೊಂಡಿರುವ ಪ್ರತಾಪ್, ಹಫೀಜ್ ಭೇಟಿ ತಮ್ಮ ವೈಯಕ್ತಿಕ ವಿಚಾರ ಎಂದಿದ್ದಾರೆ.
ಇಂದು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಪ್ರತಾಪ್, ತಾವು ಪ್ರಧಾನಿಯ ಪ್ರತಿನಿಧಿಯಾಗಿ ಹಫೀಜ್ನನ್ನು ಭೇಟಿ ಮಾಡಿಲ್ಲ. ಓರ್ವ ಪತ್ರಕರ್ತನಾಗಿ ನಾನು ಭೇಟಿ ಮಾಡಿದ್ದೇನೆ. ಇದು ನನ್ನ ವೈಯಕ್ತಿಕ ಭೇಟಿ ಮತ್ತು ಒಬ್ಬ ಪತ್ರಕರ್ತನಾದನು ಎಲ್ಲಾ ರೀತಿಯ ವ್ಯಕ್ತಿಗಳನ್ನು ಭೇಟಿ ಮಾಡಬೇಕು ಎಂದು ಹೇಳಿದ್ದಾರೆ.
ಜುಲೈ 2ರಂದು ಪಾಕಿಸ್ತಾನದ ಲಾಹೋರ್ನಲ್ಲಿ ತಾವು ಹಫೀಜ್ನನ್ನು ಭೇಟಿ ಮಾಡಿರುವುದಾಗಿ ಪ್ರತಾಪ್ ಹೇಳಿಕೊಂಡಿದ್ದಾರೆ. ಅಲ್ಲದೆ ಉಗ್ರ ಹಫೀಜ್ನೊಂದಿಗೆ ಮಾತುಕತೆ ನಡೆಸುತ್ತಿರುವ ಫೋಟೋವನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಅತಿ ಅಪಾಯಕಾರಿ ವ್ಯಕ್ತಿ ಎಂದು ಹಫೀಜ್ ಹೇಳಿಕೊಂಡಿದ್ದಾನೆ.
ಶಾಂತಿ ಸಂಶೋಧನಾ ಸಂಸ್ಥೆ ಆಹ್ವಾನದ ಮೇರೆಗೆ ನಿಯೋಗದೊಂದಿಗೆ ಪಾಕಿಸ್ತಾನಕ್ಕೆ ತೆರಳಿದ್ದ ವೇದ್ ಪ್ರತಾಪ್ ವೈದಿಕ್ ಅವರು ಹಫೀಜ್ ನನ್ನು ಭೇಟಿಯಾಗಿರುವುದು ಬಾಬಾ ರಾಮದೇವ್ ಅವರನ್ನು ಮಾತ್ರವಲ್ಲ, ಬಿಜೆಪಿ ಸರಕಾರವನ್ನೂ ಮುಜುಗರಕ್ಕೆ ಸಿಲುಕಿಸಿದೆ. ಪ್ರತಾಪ್ ಅವರು ಓರ್ವ ಪತ್ರಕರ್ತನಾಗಿ ಹಫೀಜ್ ಅವರನ್ನು ಭೇಟಿಯಾಗಿದ್ದಾರೆ ಎಂದು ಬಾಬಾ ರಾಮದೇವ್ ಈ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


