ಈಗಿನ ಸುದ್ದಿ

ಸಂಬಳ ಕೊಡದ 'ಶೃಂಗಾರ' ತಮಗೆ ಬೇಡವೆಂದ ಕ್ರೇಜಿಸ್ಟಾರ್

ಸಂಬಳ ಕೊಡದ 'ಶೃಂಗಾರ' ತಮಗೆ ಬೇಡವೆಂದ ಕ್ರೇಜಿಸ್ಟಾರ್
Published On :

ಬೆಂಗಳೂರು: ಸರಿಯಾದ ಸಮಯಕ್ಕೆ ತಮಗೆ ಸಂಬಂಳ ನೀಡದ 'ಶೃಂಗಾರ' ಚಿತ್ರದಿಂದ ತಾವು ಹೊರ ಬಂದಿರುವುದಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸೋಮವಾರ ಹೇಳಿದ್ದಾರೆ.

ಸಂಬಳ ನೀಡದ 'ಶೃಂಗಾರ' ಚಿತ್ರದ ನಿರ್ಮಾಪಕರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರವಿಚಂದ್ರನ್ ಅವರು, ಚಿತ್ರದ ಮುಹೂರ್ತದ ದಿನ ಸಂಭಾವನೆ ನೀಡುವುದಾಗಿ ನಿರ್ಮಾಪಕರು ತಮಗೆ ಭರವಸೆ ನೀಡಿದ್ದರು. ಆದರೆ ಇದುವರೆಗೂ ತಮಗೆ ಹಣ ನೀಡಿಲ್ಲ. ಹೀಗಾಗಿ ತಾವು 'ಶೃಂಗಾರ' ಶೂಟಿಂಗ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಶೃಂಗಾರ ಚಿತ್ರದ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಅವರು, ರವಿಚಂದ್ರನ್ ಅವರಿಗೆ ಹಣ ನೀಡುವುದರಲ್ಲಿ ಎರಡು ದಿನ ತಡವಾಗಿದೆ ಅಷ್ಟೆ. ಆದರೆ ಅವರು ಚಿತ್ರದಿಂದ ಹಿಂದೆ ಸರಿದಿಲ್ಲ ಎಂದು ಹೇಳಿದ್ದಾರೆ.

ಸಂಭಾವನೆ ವಿಚಾರದಲ್ಲಿ ಮನಸ್ತಾಪ ಇರುವುದು ನಿಜ. ಆದರೂ ಅವರಿಗೆ ಹಣ ಕೊಡುವುದಾಗಿ ಹೇಳಿ ಒಪ್ಪಿಸುತ್ತೇನೆ ಎಂದು ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಹೊಸ ನಿರ್ಮಾಪಕ ಶಂಕರ್ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ ಹೊಸ ಚಿತ್ರ ಶೃಂಗಾರಕ್ಕೆ ಅಕ್ಷಯ ತೃತೀಯಾದ ಶುಭಘಳಿಗೆಯಲ್ಲಿ ಮುಹೂರ್ತ ನಡೆದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.