ಈಗಿನ ಸುದ್ದಿ

ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಉದ್ದೇಶವಿಲ್ಲ: ಸರ್ಕಾರ

ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಉದ್ದೇಶವಿಲ್ಲ: ಸರ್ಕಾರ
Published On :

ನವದೆಹಲಿ:  ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎಂಬ ಸುದ್ದಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಈ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಿಎಂ ಸಿದ್ದೇಶ್ವರ ಅವರು ಸದ್ಯ, ಸರ್ಕಾರ ಏರ್ ಇಂಡಿಯಾ ಖಾಸಗೀಕರಣದ ಬಗ್ಗೆ ಯೋಚಿಸಿಲ್ಲ ಎಂದಿದ್ದಾರೆ.

ಏರ್ ಇಂಡಿಯಾದಲ್ಲುಂಟಾಗಿರುವ ನಷ್ಟವನ್ನು ಭರಿಸಲು ಖಾಸಗೀಕರಣಗೊಳಿಸುವ ಚಿಂತನೆ ಮಾಡಲಾಯಿತೆ? ಈ ಬಗ್ಗೆ ವಿಸ್ತಾರವಾದ ಅಧ್ಯಯನ ಮಾಡಲಾಗುತ್ತಿದೆಯೆ? ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದೇಶ್ವರ್ 2012ರ ವಿತ್ತೀಯ ಸುಧಾರಣಾ ಯೋಜನೆಯ ಪ್ರಕಾರ ನಾವು ಏರ್ ಇಂಡಿಯಾದ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಲು ನೋಡುತ್ತಿದ್ದೇವೆ. ಇದೀಗ ಏರ್ ಇಂಡಿಯಾದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು, ಈ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

2011-12ರ ಅವಧಿಯಲ್ಲಿ ಏರ್ ಇಂಡಿಯಾದ ನಷ್ಟವಾಗಿರುವ ತೆರಿಗೆ 7,560 ಕೋಟಿ ರು. ಆಗಿತ್ತು. ಆದರೆ 2012-13 ರ ಅವಧಿಯಲ್ಲಿ ರು. 5,490 ಕೋಟಿಗೆ ಇಳಿದಿದ್ದು ಮಾತ್ರವಲ್ಲದೆ, 2013-14ರ ಅವಧಿಯಲ್ಲಿ ರು. 5,389 ಕೋಟಿಗೆ ತಲುಪಿದೆ ಎಂದು ಸಚಿವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.