ನಾನು ಆರೆಸ್ಸೆಸ್ಸ್ನ ವ್ಯಕ್ತಿಯಲ್ಲ: ವೇದ್ ಪ್ರತಾಪ್ ವೈದಿಕ್

ನವದೆಹಲಿ: ಯೋಗಗುರು ರಾಮ್ ದೇವ್ರ ಆಪ್ತ, ಪತ್ರಕರ್ತ ವೇದ್ ಪ್ರತಾಪ್ ವೈದಿಕ್ ಅವರು 26/11ರ ಉಗ್ರ ಹಫೀಜ್ ಸಯೀದ್ನ್ನು ಭೇಟಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ಕೋಲಾಹಲ ಮುಂದುವರಿದಿದೆ.
ಹಫೀಜ್ ಸಯೀದ್ನ್ನು ಭೇಟಿ ಮಾಡಿರುವ ವೇದ್ ಪ್ರತಾಪ್ ಆರೆಸ್ಸೆಸ್ಸ್ ನ ವ್ಯಕ್ತಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದರು . ಇದಕ್ಕೆ ಪ್ರತಿಕ್ರಿಯೆ ನೀಡಿದ ವೈದಿಕ್ ಅವರು ನಾನು ಆರೆಸ್ಸೆಸ್ಸ್ ನ ವ್ಯಕ್ತಿಯಲ್ಲ ರಾಹುಲ್ ಏನು ಬೇಕಾದರೂ ಹೇಳಿಕೊಳ್ಳಲಿ ಎಂದಿದ್ದಾರೆ.
ಭಾರತದ ಮೋಸ್ಟ್ ವಾಂಟೆಡ್ ಉಗ್ರನ ಜತೆ ವೈದಿಕ್ ಪ್ರತಾಪ್ ಮಾತುಕತೆ ನಡೆಸಿದ್ದರ ಹಿಂದಿನ ಉದ್ದೇಶವೇನು? ಉಗ್ರ ಸಯೀದ್ನನ್ನು ಭೇಟಿಯಾಗುವ ಮುನ್ನ ವೈದಿಕ್ ಅವರು ಸರ್ಕಾರದ ಅನುಮತಿ ಕೋರಿದ್ದರೆ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಎದ್ದಿದ್ದವು. ವೈದಿಕ್ ಭೇಟಿ ಸದನದಗಳಲ್ಲಿ ಕೋಲಾಹಲವನ್ನೂ ಸೃಷ್ಟಿಸಿತ್ತು.
ಆದಾಗ್ಯೂ, ತಾನು ಪಾಕಿಸ್ತಾನದ ಪತ್ರಕರ್ತನೊಬ್ಬನ ಮೂಲಕ ಒಬ್ಬ ಪತ್ರಕರ್ತನ ರೀತಿಯಲ್ಲಿ ಸಯೀದ್ನ್ನು ಭೇಟಿಯಾಗಿದ್ದೆ ಎಂದು ವೈದಿಕ್ ಸ್ಪಷ್ಟನೆ ನೀಡಿದ್ದಾರೆ.
ಈ ಭೇಟಿಯ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ಕೇಂದ್ರ ಬಿಜೆಪಿ ಸರ್ಕಾರ ನಮ್ಮನ್ನು ಪೆದ್ದುಮಾಡುತ್ತಿದೆ ಎಂದಿತ್ತು. ಈ ಬಗ್ಗೆ ಸುದ್ದಿಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ವೈದಿಕ್ ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಇಲ್ಲಿ ಅಧಿಕಾರದಲ್ಲಿತ್ತು ಎಂಬುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನಾನು ಕಳೆದ 40 ವರ್ಷಗಳಿಂದ ವಿದೇಶಗಳಿಗೆ ಪ್ರಯಾಣ ಬೆಳೆಸಿದ್ದೇನೆ. ನನ್ನ ಈ ಪ್ರಯಾಣದ ಬಗ್ಗೆ ರಾಯಭಾರಿ ಕಚೇರಿ ನನ್ನನ್ನು ಸನ್ಮಾನಿಸಿದೆಯೆ? ನಾನು ಎಲ್ಲರನ್ನು ನೇರ ನೇರವಾಗಿಯೇ ಭೇಟಿ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಏತನ್ಮಧ್ಯೆ, ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೀರಾ? ಎಂಂಬ ಪ್ರಶ್ನೆಗೆ ಉತ್ತರಿಸಿದ ವೈದಿಕ್, ನಾನು ಸಾಮಾನ್ಯ ಮನುಷ್ಯ ಈ ರೀತಿ ಎಲ್ಲ ಮೊಕದ್ದಮೆ ಹೂಡಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


