ಈಗಿನ ಸುದ್ದಿ

ವೈದಿಕ್ ಸರ್ಕಾರವನ್ನು ಪ್ರತಿನಿಧಿಸಿಲ್ಲ: ಪ್ರಧಾನಿ ಕಚೇರಿ

ವೈದಿಕ್ ಸರ್ಕಾರವನ್ನು ಪ್ರತಿನಿಧಿಸಿಲ್ಲ: ಪ್ರಧಾನಿ ಕಚೇರಿ
Published On :

ನವದೆಹಲಿ: ಯೋಗಗುರು ರಾಮ್ ದೇವ್‌ರ ಆಪ್ತ, ಪತ್ರಕರ್ತ ವೇದ್ ಪ್ರತಾಪ್ ವೈದಿಕ್ ಅವರು ಪಾಕಿಸ್ತಾನಿ ಉಗ್ರ ಹಫೀಜ್ ಸಯೀದ್‌ರನ್ನು ಭೇಟಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದ ಚರ್ಚೆಗಳು ಸದ್ಯ ಮುಗಿಯುವಂತೆ ಕಾಣುತ್ತಿಲ್ಲ.

ಹಫೀಜ್- ವೈದಿಕ್ ಭೇಟಿಯ ಬಗ್ಗೆ ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲಗಳಂಟಾಗಿದ್ದು, ಈ ವಿವಾದಕ್ಕೆ ಪ್ರಧಾನಿ ಕಚೇರಿ ಬುಧವಾರ ಉತ್ತರಿಸಿದೆ.

ಈ ಬಗ್ಗೆ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ಕಚೇರಿ ಅಧಿಕಾರಿಗಳು ವೈದಿಕ್ ಅವರು ಸರ್ಕಾರವನ್ನು ಪ್ರತಿನಿಧೀಕರಿಸಿ ಸಯೀದ್ ಅವರನ್ನು ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ.

ವೈದಿಕ್ ಭೇಟಿ ಬಗ್ಗೆ ಸರ್ಕಾರ ಮಾಹಿತಿ ನೀಡಬೇಕೆಂದು ಹಿರಿಯ ಕಾಂಗ್ರೆಸ್ ನೇತಾರ ಕಮಲ್ ನಾಥ್ ಲೋಕಸಭೆಯಲ್ಲಿ ಆಗ್ರಹಿಸಿದ್ದರು.

26/11 ಸ್ಫೋಟದ ರುವಾರಿ ಆಗಿರುವ ಉಗ್ರ ಸಯೀದ್‌ನ್ನು ಭೇಟಿ ಮಾಡಿರುವ ವೈದಿಕ್ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಾಯಗಳು ಕೇಳಿಬರುತ್ತಿದ್ದು, ಬಿಜೆಪಿ ಮಿತ್ರ ಪಕ್ಷವಾದ ಶಿವಸೇವೆ ಕೂಡಾ ಕೇಂದ್ರ ಸರ್ಕಾರ ಈ ವಿಷಯವನ್ನು ಕಡೆಗಣಿಸುವಂತಿಲ್ಲ ಎಂದು ಹೇಳಿದೆ.

ರಾಜಕೀಯ ಕೋಲಾಹಲವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇದೀಗ ವೈದಿಕ್ ಭೇಟಿ ಬಗ್ಗೆ ಇಸ್ಲಾಮಬಾದ್‌ನಲ್ಲಿರುವ ಇಂಡಿಯನ್ ಹೈ ಕಮಿಷನ್ ವರದಿ ಸಲ್ಲಿಸುವಂತೆ ಆದೇಶಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.