ಈಗಿನ ಸುದ್ದಿ

ಉಕ್ರೇನ್ ಬಂಡುಕೋರರಿಂದ ಮಲೇಷ್ಯಾ ವಿಮಾನದ ಬ್ಲಾಕ್ ಬಾಕ್ಸ್ ಹಸ್ತಾಂತರ

ಉಕ್ರೇನ್ ಬಂಡುಕೋರರಿಂದ ಮಲೇಷ್ಯಾ ವಿಮಾನದ ಬ್ಲಾಕ್ ಬಾಕ್ಸ್ ಹಸ್ತಾಂತರ
Published On :

ಡೊನೆಟಸ್ಕ್(ಉಕ್ರೇನ್): ರಷ್ಯಾದ ಉಗ್ರರ ಗುಂಡಿಗೆ ಬಲಿಯಾದ ಮಲೇಷ್ಯಾ ಏರ್‌ಲೈನ್ಸ್‌ನ ಎಂಎಚ್17 ವಿಮಾನದ ಬ್ಲಾಕ್ ಬಾಕ್ಸ್ ಅನ್ನು ರಷ್ಯಾ ಪರ ಉಕ್ರೇನ್ ಬಂಡುಕೋರರು ಮಂಗಳವಾರ ಮಲೇಷ್ಯಾ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಬಂಡುಕೋರರ ನಾಯಕ ಅಲೆಕ್ಸಾಂಡರ್ ಬೋರೋಡಿ ಅವರು ಮಲೇಷ್ಯಾ ಅಧಿಕಾರಿಗಳಿಗೆ ವಿಮಾನದ ಬ್ಲಾಕ್ ಬಾಕ್ಸ್ ಅನ್ನು ಹಸ್ತಾಂತರಿಸಿದರು. ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಚ್ ಪ್ರಧಾನಿ ಮಾರ್ಕ್ ರುಟ್ಟೆ ಅವರು, ವಿಮಾನ ಪತನವಾದ ಸ್ಥಳದಿಂದ ಸುಮಾರು 200 ಮೃತದೇಹಗಳನ್ನು ಹೊತ್ತ ರೈಲು ಉಕ್ರೇನ್ ಸರ್ಕಾರದ ವಶದಲ್ಲಿರುವ ಖಾರ್ಕಿವ್‌ಗೆ ತೆರಳಿದ್ದು, ಅಲ್ಲಿಂದ ಶವಗಳನ್ನು ನೆದರ್ಲೆಂಡ್‌ಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.

ಮಲೇಷ್ಯಾ ಪ್ರಧಾನಿ ದುರಂತ ಸ್ಥಳವನ್ನು ತಲುಪಿದ ಬಳಿಕ ಮೃತದೇಹಗಳನ್ನು ಹೊತ್ತ ರೈಲು ಪ್ರಯಾಣ ಆರಂಭಿಸಿತು. ಉಕ್ರೇನ್‌ನಲ್ಲಿ ಹೊಡೆದುರುಳಿಸಲಾದ ಮಲೇಷ್ಯಾ ವಿಮಾನದಲ್ಲಿ ಹೆಚ್ಚಿನ ಪ್ರಯಾಣಿಕರೂ ಡಚ್‌ ಪ್ರಜೆಗಳಾಗಿದ್ದರು.

ನೆದರ್ಲೆಂಡ್‌ನ‌ ಆಮ್‌ಸ್ಟರ್‌ಡ್ಯಾಂನಿಂದ ಮಲೇಷ್ಯಾದ ಕೌಲಾಲಂಪುರಕ್ಕೆ ತೆರಳುತ್ತಿದ್ದ ಮಲೇಷ್ಯಾ ವಿಮಾನವನ್ನು  ಯುದ್ಧ ಪೀಡಿತ ಉಕ್ರೇನ್‌ ವಾಯುವಲಯದಲ್ಲಿ ಗುರುವಾರ ಸಂಜೆ ಕ್ಷಿಪಣಿ ಮೂಲಕ ಹೊಡೆದುರುಳಿಸಲಾಗಿತ್ತು.

ವಿಮಾನದಲ್ಲಿದ್ದ 280 ಪ್ರಯಾಣಿಕರು ಹಾಗೂ 15 ಸಿಬ್ಬಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಮೃತಪಟ್ಟವರ ಪೈಕಿ 173 ಮಂದಿ ನೆದರ್‌ಲೆಂಡ್‌ ಪ್ರಜೆಗಳಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.