ಈಗಿನ ಸುದ್ದಿ

ಚಿತ್ರಕಲಾ ಪರಿಷತ್ತಿನಲ್ಲಿ ಅವ್ಯವಹಾರ: ಸದಸ್ಯೆ ಆರೋಪ

ಚಿತ್ರಕಲಾ ಪರಿಷತ್ತಿನಲ್ಲಿ ಅವ್ಯವಹಾರ: ಸದಸ್ಯೆ ಆರೋಪ
Published On :

ಬೆಂಗಳೂರು: ಚಿತ್ರಕಲಾ ಪರಿಷತ್ತಿನಲ್ಲಿ ಸದಸ್ಯರಲ್ಲದ ವ್ಯಕ್ತಿಗಳು ಕಲಾಕೃತಿಗಳನ್ನು ಮಾರಾಟ ಮಾಡುತ್ತಿದ್ದು, ಪರಿಷತ್ತಿನ ಸದಸ್ಯರು ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರಕಲಾ ಪರಿಷತ್ತಿನ ಸದಸ್ಯೆ ಶ್ರೀದೇವಿ ರಾವ್ ಪರಿಷತ್ತಿನ ಸದಸ್ಯರಲ್ಲದವರು ಕಲಾಕೃತಿಗಳನ್ನು ಮಾರಾಟ ಮಾಡಿ ಆ ಹಣವನ್ನು ಪರಿಷತ್ತಿನ ಖಾತೆಗೆ ನೀಡದೆ, ವೈಯಕ್ತಿಕವಾಗಿ ದುರುಪಯೋಗ ಪಡಿಸಿಕೊಳ್ಳತ್ತಿದ್ದಾರೆ.

ಈ ಎಲ್ಲಾ ಅನಾಮಿಕ ವ್ಯಕ್ತಿಗಳೂ ಪರಿಷತ್ತಿನ ನಾಯಕತ್ವ ವಹಿಸಿರುವ ಕೆ.ಎಸ್. ಅಜ್ಜಪ್ಪಯ್ಯ ಅವರ ಸಂಗಡಿಗರೇ ಆಗಿದ್ದು ಅವರೇ ಈ ಅವ್ಯವಹಾರದ ರುವಾರಿ ಎಂದು ಅವರು ಆರೋಪಿಸಿದ್ದಾರೆ.

ಪರಿಷತ್ತಿನಲ್ಲಿ ಕಲೆ ಬಗ್ಗೆ ತಿಳುವಳಿಕೆ ಇಲ್ಲದವರೆಲ್ಲಾ ಸದಸ್ಯತ್ವವನ್ನು ಹೊಂದಿ, ಕಲೆಯನ್ನು ಕೊಲೆ ಮಾಡುತ್ತಿದ್ದು, ಈಗಾಗಲೇ ಹಲವು ಪ್ರತಿಷ್ಠಿತ ಚಿತ್ರಕಲೆಗಳನ್ನು ನಾಶಪಡಿಸಿದ್ದಾರೆ.
ಪರಿಷತ್ತು ಅಭಿವೃದ್ಧಿ ಮಾಡುವ ನೆಪದಲ್ಲಿ ಯಾವುದೇ ದಾಖಲೆಗಳನ್ನೊದಗಿಸದೆ ಕೋಟಿ ಕೋಟಿ ಹಣವನ್ನು ದೋಚುತ್ತಿದ್ದಾರೆ.

ಇಂತಹ ಭ್ರಷ್ಟರಿಂದ ಪರಿಷತ್ತು ಉಳಿಯಬೇಕಾದರೆ, ಕೂಡಲೇ ಸರ್ಕಾರ ಈ ಅಕ್ರಮವನ್ನು ಸಿ.ಒ.ಡಿ ತನಿಖೆಗೆ ಒಪ್ಪಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.