ಈಗಿನ ಸುದ್ದಿ

ಇನ್ನು ಕಾರು ವಿಮೆ ನವೀಕರಣ 5 ವರ್ಷಗಳಿಗೊಮ್ಮೆ?

ಇನ್ನು ಕಾರು ವಿಮೆ ನವೀಕರಣ 5 ವರ್ಷಗಳಿಗೊಮ್ಮೆ?
Published On :

ನವದೆಹಲಿ: ಪ್ರತೀ ವರ್ಷ ಕಾರು ವಿಮೆಯನ್ನು ನವೀಕರಣಗೊಳಿಸುವುದು ಹೆಚ್ಚಿನವರಿಗೆ ತಲೆನೋವಿನ ಸಂಗತಿಯೇ. ಹೀಗಿರುವಾಗ ನಾವೇ ನಿಮ್ಮ ವಿಮೆಯನ್ನು ನವೀಕರಿಸುತ್ತೇವೆ ಎಂದು ಕಾರು ಖರೀದಿಯ ವೇಳೆಗೆ ಕಾರು ಕಂಪನಿಗಳೇ ಗ್ರಾಹಕರಿಗೆ ಆಫರ್ ನೀಡುವುದೂ ಉಂಟು.

ಆದರೆ ಈಗ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಇಂಗ್ಲೀಷ್ ದಿನಪತ್ರಿಕೆಯೊಂದರ ವರದಿಯ ಪ್ರಕಾರ ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲೆಪ್‌ಮೆಂಟ್ ಅಥಾರಿಟಿ (ಐಆರ್‌ಡಿಎ) 5 ವರ್ಷಗಳಿಗೊಮ್ಮೆ ಕಾರು ವಿಮೆ ನವೀಕರಣಗೊಳಿಸುವ ಸಂಹಿತೆಯನ್ನು ಜಾರಿ ಮಾಡಲು ಯೋಚನೆ ಮಾಡಿದೆ ಎಂದು ವರದಿ ಮಾಡಿದೆ.

ಈ ಸಂಹಿತೆ ಜಾರಿಯಾದರೆ, ಈ ಹಿಂದಿನ ವಿಮೆ ನೀತಿಗಳಿಗಿಂತ ಇದು ಅಗ್ಗವೆನಿಸಲಿದೆ. ಅದೇ ವೇಳೆ ಗ್ರಾಮಾಂತರ ಪ್ರದೇಶಗಳಲ್ಲಿ ವಿಮೆಯನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ದೀರ್ಘಕಾಲದ ವಿಮೆಯನ್ನು ನೀಡಲು ಐಆರ್‌ಡಿಎ ನಿರ್ಧರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.