ಕುವೈತ್ಗೆ ವಿಮಾನ ಪುನಾರಂಭ: ಒತ್ತಾಯ
ಮಂಗಳೂರು: ಖಾಸಗಿ ವಿಮಾನ ಸಂಸ್ಥೆಯ ಸಹಯೋಗದಲ್ಲಾದರೂ ಕುವೈತ್ ವಿಮಾನ ಯಾನ ಪುನಾರಂಭಿಸುವಂತೆ ವಿಧಾನಪರಿಷತ್ಸದಸ್ಯ ಐವನ್ ಡಿಸೋಜ ಆತ್ತಾಯಿಸಿದ್ದಾರೆ.
ವಿಧಾನಪರಿಷತ್ನಲ್ಲಿ ಮಾತನಾಡಿದ ಐವನ್, ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವ ರೋಶನ್ ಬೇಗ್ ಅವರಿಗೆ ಪ್ರಶ್ನೆ ಮಾಡಿದರು. ಪ್ರಯಾಣಿಕರ ಕೊರತೆಯಿಂದ ನೇರ ವಿಮಾನ ರದ್ದಾಗಿದೆ ಎಂದು ಬೇಗ್ ಮಾಹಿತಿ ನೀಡಿದರು. ಕುವೈತ್ಗೆ ನೇರ ವಿಮಾನ ರದ್ದು ಮಾಡಿರುವ ಹಿಂದೆ ಪ್ರಬಲ ಲಾಬಿ ಕೆಲಸ ಮಾಡಿದೆ ಎಂದು ಆರೋಪಿಸಿದ ಐವನ್, ಮಂಗಳೂರಿಂದ 60 ಸೀಟ್ ಕಾಯ್ದಿರಿಸಿ, ಕ್ಯಾಲಿಕಟ್ಗೆ 120 ಸೀಟ್ ಬಿಟ್ಟುಕೊಡಲಾಗಿದೆ. ಮಂಗಳೂರು ಸೀಟ್ಗಳು ಭರ್ತಿಯಾಗುತ್ತಿವೆ, ಕ್ಯಾಲಿಕಟ್ ಸೀಟ್ಗಳು ಖಾಲಿ ಇರುತ್ತವೆ ಎಂದರು.
ಸಚಿವ ರೋಶನ್ ಬೇಗ್ ಪ್ರತಿಕ್ರಿಯಿಸಿ, ಕೇಂದ್ರದಲ್ಲಿ ನಮ್ಮವರೇ ಆದ ಸಚಿವ ಸಿದ್ದೇಶ್ವರ ಇದ್ದಾರೆ, ಅವರ ಬಳಿ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರು. ಕುವೈತ್ನಲ್ಲಿ 7.62 ಲಕ್ಷ ಎನ್ಆರ್ಐಗಳಲ್ಲಿ ಕರಾವಳಿಯವರೇ 1.3 ಲಕ್ಷ ಮಂದಿ ಇದ್ದಾರೆ, ಅವರ ಸೌಲಭ್ಯಕ್ಕೆ ನೇರ ವಿಮಾನ ಯಾನ ಅಗತ್ಯ ಎಂದರು.
ರನ್ವೇ ವಿಸ್ತರಣೆ, 3 ಗುಡ್ಡ ಸ್ವಾಧೀನ: ಐವನ್ ಪ್ರಶ್ನೆಗೆ ಉತ್ತರಿಸಿದ ಸಚಿವ ರೋಶನ್ ಬೇಗ್, ಬಜಪೆ ರನ್ವೇ 1 ಕಿ.ಮೀ. (289.33 ಎಕರೆ)ವಿಸ್ತರಿಸುವ ಸಾಧ್ಯತಾ ವರದಿ ಸಿದ್ಧಪಡಿಸಿದ್ದು, 1120 ಕೋಟಿ ಬೇಕು. ಮಂಗಳೂರು ವಿಮಾನ ನಿಲ್ದಾಣ ಟೇಬಲ್ ಟಾಪ್ ಅಗಿರುವುದರಿಂದ ರನ್ ವೇ ಮಾಡಲು ಕಣಿವೆಯನ್ನು ಮಣ್ಣಿನಿಂದ ತುಂಬ ಬೇಕಾಗುತ್ತದೆ. ಆದ್ದರಿಂದ ವೆಚ್ಚವನ್ನು ಪೂರ್ತಿ ಸರ್ಕಾರವೇ ಭರಿಸುವ ಬದಲು ಸಾರ್ವಜನಿಕರ ಸಹಯೋಗದೊಂದಿಗೆ ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಮುಖ್ಯಮಂತ್ರಿ ಯೋಚಿಸುತ್ತಿದ್ದಾರೆ ಎಂದರು. ಕಣಿವೆ ತುಂಬಲು ಈಗಾಗಲೇ ಮೂರು ಗುಡ್ಡ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಬೇಗ್ ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

