ಹುಡುಗಾಟಕ್ಕೆ ಬಾಲಕ ಬಲಿ

ಮಧುರೈ: 11 ವರ್ಷದ ಬಾಲಕನೊಬ್ಬ ಮಹಡಿಯ ಮೇಲೆ ಬಟ್ಟೆ ಒಣಗಿಸಲು ಕಟ್ಟಿದ್ದ ಹಗ್ಗವನ್ನು ಕುತ್ತಿಗೆಗೆ ಸುತ್ತಿಕೊಂಡು ಸಾವನ್ನಪ್ಪಿರುವ ದಾರುಣ ಘಟನೆ ಮಧುರೈನ ತಿಡೀರ್ ನಗರದಲ್ಲಿ ನಡೆದಿದೆ.
ವೆನ್ನಿಲ್ಲಾ ನಗರದ ದಕ್ಷಿಣ ಗೇಟ್ ಪೊಲೀಸ್ ಠಾಣೆ ಅಪರಾಧ ವಿಭಾಗದಲ್ಲಿ ಕಾರ್ಯಹಿಸುತ್ತಿರುವ ಪೇದೆಯೊಬ್ಬರ ಮಗನಾದ ಧಾಕ್ಷಾಯಣ(11) ಇಂದು ಮಹಡಿಯ ಮೇಲೆ ಬಟ್ಟೆ ಒಣಗಿಸಲು ಕಟ್ಟಿದ್ದ ಹಗ್ಗವನ್ನು ಕುತ್ತಿಗೆಗೆ ಸುತ್ತಿಕೊಂಡು ಗೋಡೆಯ ಮೇಲೆ ನಡೆಯುವ ಎಡವಿ ಬಿದ್ದಿದ್ದಾನೆ. ಈ ವೇಳೆ ಕುತ್ತಿಗೆಗೆ ಸುತ್ತಿಕೊಂಡಿದ್ದ ಹಗ್ಗ ಆತನ ಪ್ರಾಣವನ್ನೇ ತೆಗೆದಿದೆ.
ಧಾಕ್ಷಾಯಣ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ರಂಜಾನ್ ಪ್ರಯುಕ್ತ ಇಂದು ಶಾಲೆಗೆ ರಜೆ ಇದ್ದ ಕಾರಣ ಮನೆಯ ಮಹಡಿಯ ಮೇಲೆ ಆಟವಾಡಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ.
ರಜೆ ಇದ್ದ ಕಾರಣ ಅಣ್ಣ ತಮ್ಮ ಇಬ್ಬರು ಮಹಡಿ ಮೇಲೆ ಆಟವಾಡಲು ತೆರಳಿದ್ದರು. ಅಣ್ಣ ಹಗ್ಗದವನ್ನು ಕುತ್ತಿಗೆಗೆ ಸುತ್ತಿಕೊಂಡು ಬಿದ್ದಿದ್ದನ್ನು ಕಂಡ ಸಹೋದರ ಕೂಡಲೇ ತಾಯಿಗೆ ವಿಷಯ ತಿಳಿಸಿದ್ದಾನೆ. ತಾಯಿ ಮಹಡಿ ಮೇಲಕ್ಕೆ ಬರುವ ವೇಳೆಗಾಗಲೇ ದಾಕ್ಷಾಯಣ ಮೃತಪಟ್ಟಿದ್ದ. ತಮ್ಮ ಮಗ ಹಗ್ಗದ ಕುಣಿಕೆಗೆ ಬಂದಿರುವುದನ್ನು ಕಂಡ ತಾಯಿ ಕೂಡಲೇ ಹಗ್ಗವನ್ನು ಜಗ್ಗಿ ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿದ್ದಾರೆ. ಈ ವೇಳೆ ದಾಕ್ಷಾಯಣನನ್ನು ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ವೆನ್ನಿಲ್ಲಾ ನಗರದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


