3ನೇ ಟೆಸ್ಟ್: ಭಾರತಕ್ಕೆ ಹೀನಾಯ ಸೋಲು

ಸೌಥಾಂಪ್ಟನ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಅನುಭವಿಸಿದೆ.
ಸೌಥಾಂಪ್ಟನ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ಪ್ರತ್ಯುತ್ತರ ನೀಡಲು ಭಾರತೀಯ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ವಿಫಲರಾಗಿದ್ದರಿಂದ ಇಂಗ್ಲೆಂಡ್ 266 ರನ್ಗಳಿಂದ ಜಯ ಸಾಧಸಿದೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದೆ.
ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಬೃಹತ್ ಮೊತ್ತವನ್ನೇ ಕಲೆಹಾಕಿತು. 7 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ 569 ರನ್ ಪೇರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ನಂತರ ಬ್ಯಾಟ್ ಮಾಡಿ ಭಾರತೀಯ ಆಟಗಾರರು ಇಂಗ್ಲೆಂಡ್ ಮಾರಕ ದಾಳಿಗೆ ತತ್ತರಿಸಿದರು. ಹೀಗಾಗಿ ಭಾರತ ಮೊದಲ ಇನಿಂಗ್ಸ್ ನಲ್ಲಿ 330ಕ್ಕೆ ಸರ್ವಪತನ ಕಂಡಿತು.
239 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ವೇಗವಾಗಿ ರನ್ ಕಲೆಹಾಕಿ 4 ವಿಕೆಟ್ಗೆ 205 ರನ್ ಗಳಿಸಿ ಚಹಾ ವಿರಾಮಕ್ಕೆ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಭಾರತಕ್ಕೆ 445 ಬೃಹತ್ ಮೊತ್ತವನ್ನೇ ನೀಡಿತ್ತು. ಈ ರನ್ ಬೆನ್ನಟ್ಟಿದ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ 112 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇಂದು ಐದನೇ ದಿನದಾಟ ಆರಂಭಿಸಿದ ಭಾರತ ಕೇವಲ 66 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ಗೆ ಶರಣಾಯಿತು. ಭಾರತ ಪರ ಆಟಗಾರ ಅಜಿಂಕ್ಯ ರಹಾನೆ ಸಿಡಿಸಿದ 52 ರನ್ ಎರಡನೇ ಇನಿಂಗ್ಸ್ ನ ಅತ್ಯಧಿಕ ಮೊತ್ತವಾಗಿದೆ.
ಸ್ಕೋರು ವಿವರ:
ಇಂಗ್ಲೆಂಡ್ ಮೊದಲ ಇನಿಂಗ್ಸ್ 569/7 ಡಿಕ್ಲೇರ್ಡ್
ಭಾರತ ಮೊದಲ ಇನಿಂಗ್ಸ್ 330 ರನ್ ಆಲೌಟ್
ಇಂಗ್ಲೆಂಡ್ 2ನೇ ಇನಿಂಗ್ಸ್ 205/4 ಡಿಕ್ಲೇರ್
(ಅಲಸ್ಟೇರ್ ಕುಕ್ ಅಜೇಯ 70, ಜೋ ರೂಟ್ 56, ಗ್ಯಾರಿ ಬ್ಯಾಲನ್ಸ್ 38, ಇಯಾನ್ ಬೆಲ್ 23 ರನ್ - ರವೀಂದ್ರ ಜಡೇಜಾ 52/3)
ಭಾರತ 2ನೇ ಇನಿಂಗ್ಸ್ 178 ರನ್ ಆಲೌಟ್
(ಅಜಿಂಕ್ಯ ರಹಾನೆ ಅಜೇಯ 52, ಶಿಖರ್ ಧವನ್ 37, ವಿರಾಟ್ ಕೊಹ್ಲಿ 28ರನ್ - ಮೊಯೀನ್ ಅಲಿ 67/6)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


