ರವೀಂದ್ರನಾಥ್ ಮೊಬೈಲ್ನಲ್ಲಿ ಯುವತಿ ಫೋಟೋ ಪತ್ತೆ: ಸಿಐಡಿ

ಬೆಂಗಳೂರು: ತೀವ್ರ ಸಂಚಲನ ಮೂಡಿದ್ದ ಕಾಫಿ ಶಾಪ್ನಲ್ಲಿ ಯುವತಿ ಪೋಟೋ ಕ್ಲಿಕ್ಕಿಸಿದ ಪ್ರಕರಣ ಮಂಗಳವಾರ ಹೊಸ ತಿರುವು ಪಡೆದುಕೊಂಡಿದೆ.
ಸಿಐಡಿ ಅಧಿಕಾರಿಗಳು ಪ್ರಕರಣ ಸಂಬಂದ ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಎಡಿಜಿಪಿ ಪಿ. ರವೀಂದ್ರನಾಥ್ ಮೊಬೈಲ್ನಲ್ಲಿ ಯುವತಿಯ ಎರಡು ಛಾಯಾಚಿತ್ರಗಳು ಪತ್ತೆಯಾಗಿರುವುದು ಇದೀಗ ಕೂತುಹಲಕ್ಕೆ ಕಾರಣವಾಗಿದೆ.
ರವೀಂದ್ರನಾಥ್ ಅವರ ಮೊಬೈಲ್ ಅನ್ನು ಪರೀಕ್ಷಿಸಿದ ಸಿಐಡಿ ಅಧಿಕಾರಿಗಳು ಅದರಲ್ಲಿ ದೂರು ನೀಡಿರುವ ಯುವತಿಯ ಫೋಟೋ ಪತ್ತೆಯಾಗಿದ್ದು, ಈ ಫೋಟೋಗಳನ್ನು ಬೆಳಗ್ಗೆ 10.47ಕ್ಕೆ ಒಂದು ಹಾಗೂ 10.48ಕ್ಕೆ ಮೊತ್ತೊಂದನ್ನು ಕ್ಲಿಕ್ಕಿಸಲಾಗಿದೆ ಎಂದು ಸಿಐಡಿ ಮೂಲಗಳಿಂದ ತಿಳಿದುಬಂದಿದೆ.
ಫೋಟೋಗಳ ಸತ್ಯಾಸತ್ಯತೆ ತಿಳಿದುಕೊಳ್ಳುವ ಸಲುವಾಗಿ ಸಿಐಡಿ ಅಧಿಕಾರಿಗಳು ಮೊಬೈಲನ್ನು ಗುಜರಾತ್ ನ ಅಹಮದಾಬಾದ್ ಫೊರೆನ್ಸಿಕ್ ಲ್ಯಾಬ್ ಗೆ ಕಳುಹಿಸಿದ್ದಾರೆ.
ರವೀಂದ್ರನಾಥ್ ಅವರ ಮೊಬೈಲ್ನಲ್ಲಿ ಛಾಯಾಚಿತ್ರವಿರುವುದು ಸ್ಪಷ್ಟವಾಗಿದೆ ಆದರೆ ಈ ಚಿತ್ರಗಳನ್ನು ರವೀಂದ್ರನಾಥ್ ಅವರೇ ಕ್ಲಿಕ್ಕಿಸಿದ್ದಾರಾ? ಅಥವಾ ಬೇರೆ ಮೊಬೈಲ್ನಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಬ್ಲೂ ಟೂಥ್ ಮೂಲಕ ಕಳಿಸಲಾಗಿದೆಯೇ ಎಂಬುದು ತಜ್ಞರ ಪರೀಕ್ಷೆಯಿಂದಷ್ಟೇ ತಿಳಿಯಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


