ಈಗಿನ ಸುದ್ದಿ

ಭಾರತದಲ್ಲಿನ 'ಹತ್ಯಾ'ಚಾರಕ್ಕೆ ಬೆಚ್ಚಿಬಿದ್ದ ಅಮೆರಿಕ

ಭಾರತದಲ್ಲಿನ 'ಹತ್ಯಾ'ಚಾರಕ್ಕೆ ಬೆಚ್ಚಿಬಿದ್ದ ಅಮೆರಿಕ
Published On :

ವಾಷೀಂಗ್ಟನ್: ಭಾರತದಲ್ಲಿ ಸಂಭವಿಸುತ್ತಿರುವ ಲೈಂಗಿಕ ಹಿಂಸಾಚಾರ ಮತ್ತು ಹತ್ಯೆ ಪ್ರಕರಣಗಳು ಅಮೆರಿಕವನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ದೇಶದಲ್ಲಿ ನಡೆಯುತ್ತಿರುವ ಲೈಂಗಕಿ ದೌರ್ಜನ್ಯ ಮತ್ತು ಹತ್ಯೆಗಳ ಕುರಿತಾಗಿ ಅಮೆರಿಕಾ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇಂತಹ ಸಂದರ್ಭದಲ್ಲಿ ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರಿ ಅಧಿಕಾರಿಗಳು ಹಾಗೂ ನಾಗರಿಕ ಸಮಾಜ ವಹಿಸುತ್ತಿರುವ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಉತ್ತರಪ್ರದೇಶದ ಬದೌನ್ ಜಿಲ್ಲೆಯಲ್ಲಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಹತ್ಯೆ ಬಗ್ಗೆ ಭಯಗೊಂಡಿದ್ದೇವೆ ಎಂದು ವಿದೇಶಾಂಗ ಇಲಾಖೆ ಉಪ ವಕ್ತಾರೆ ಮೇರಿ ಹಾರ್ಫ್ ಹೇಳಿದ್ದಾರೆ.

ಭಾರತದಲ್ಲಿರುವ ಜನರ ರೀತಿ ನಾವು ಕೂಡ ಲೈಂಗಿಕ ಹಿಂಸಾಚಾರ ಮತ್ತು ಹತ್ಯೆಗಳ ಬಗ್ಗೆ ಭಯಗೊಂಡಿದ್ದೇವೆ. ಆದರೆ ಇಂತಹ ಕಷ್ಟ ಕಾಲದಲ್ಲಿ ನಾವು ಸಂತ್ರಸ್ತರ ಕುಟುಂಬಗಳಿಗೆ ಸಹಾನುಭೂತಿ ತೋರಿಸಲು ಮಾತ್ರ ಸಾಧ್ಯ ಎಂದರು.

ಇತ್ತೀಚೆಗೆ ಸಂಭವಿಸುತ್ತಿರುವ ಅತ್ಯಾಚಾರ ಪ್ರಕರಣಗಳ ಮುಖಪುಟದ ಸುದ್ದಿಗಳು ಮಾನವಜನಾಂಗಕ್ಕೆ ಕಪ್ಪುಚುಕ್ಕೆ. ನಮ್ಮೆಲ್ಲರ ಮೇಲೂ ಇದು ನೇರವಾಗಿ ಪರಿಣಾಮ ಬೀರುತ್ತದೆ. ಭಾರತದ ವರ್ಚಸ್ಸಿಗೂ ಇದರಿಂದ ಧಕ್ಕೆಯಾಗುತ್ತದೆ. ಹೂಡಿಕೆದಾರರು ಮತ್ತು ಪ್ರವಾಸಿಗಳು ಮೂಲಭೂತ ಸುರಕ್ಷತೆ ಕೊರತೆ ಹಿನ್ನೆಲೆಯಲ್ಲಿ ಭಾರತಕ್ಕೆ ಬರಲು ಹಿಂಜರಿಯುತ್ತಾರೆ ಎಂದು ಯುಎಸ್‌ಐಬಿಸಿ ಅಧ್ಯಕ್ಷ ರಾನ್ ಸೋಮರ್ಸ್ ತಿಳಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಪಾಲನೆ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದ್ದರೂ ಕೇಂದ್ರ ಸರ್ಕಾರ ಮಾದರಿ ನಿದರ್ಶನವನ್ನು ಹಾಕಿಕೊಟ್ಟು ಭಾರತದಲ್ಲಿರುವ ಮುಗ್ಧ ಜನರ ರಕ್ಷಣೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಸೋಮರ್ಸ್ ಹೇಳಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.