ಈಗಿನ ಸುದ್ದಿ

ಸುಮಿತ್ರ ಮಹಾಜನ್ 16ನೇ ಲೋಕಸಭೆ ಸ್ಪೀಕರ್

ಸುಮಿತ್ರ ಮಹಾಜನ್ 16ನೇ ಲೋಕಸಭೆ ಸ್ಪೀಕರ್
Published On :

ನವದೆಹಲಿ: 16ನೇ ಲೋಕಸಭೆಯ ಸ್ಪೀಕರ್ ಸ್ಥಾನ ಅಲಂಕರಿಸುವ ಭಾಗ್ಯ ಪುನಃ ಮಹಿಳಾ ಅಭ್ಯರ್ಥಿಗೆ ಒಲಿದು ಬಂದಿದ್ದು, ಸಂಸದೆ ಸುಮಿತ್ರ ಮಹಾಜನ್ ಆಯ್ಕೆಯಾಗಲಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು, ಸುಮಿತ್ರಾ ಮಹಾಜನ್ ಅವರು ಲೋಸಭೆಯ ಸ್ಪೀಕರ್ ಸ್ಥಾನ ಅಲಂಕರಿಸಲಿದ್ದಾರೆ ಎಂದರು.

ಮಹಾರಾಷ್ಟ್ರದ 71 ವರ್ಷದ ಸುಮಿತ್ರಾ ಅವರು ಅನುಭವಿ ಸಂಸದೀಯ ಪಟುವಾಗಿದ್ದಾರೆ. ಹೀಗಾಗಿ ಅವರು ಆಯ್ಕೆಗೆ ಖುದ್ದು ಬಿಜೆಪಿ ರಾಷ್ಟ್ರದ್ಯಕ್ಷ ರಾಜ್‌ನಾಥ್ ಸಿಂಗ್ ಅವರು ಒಲವು ತೋರಿದ್ದರು.

ಸುಮಿತ್ರಾ ಮಹಾಜನ್ ಅವರು ಮೀರಾ ಕುಮಾರ್ ಬಳಿಕ ಸ್ಪೀಕರ್ ಸ್ಥಾನ ಅಲಂಕರಿಸಲಿರುವ 2ನೇ ಮಹಿಳೆ ಎನ್ನಿಸಿಕೊಳ್ಳಲಿದ್ದಾರೆ.

1989ರಿಂದ ಸತತವಾಗಿ ಜಯಿಸಿರುವ ಸುಮಿತ್ರಾ ಒಟ್ಟು 8 ಬಾರಿ ಕೆಳಮನೆ ಪ್ರವೇಶಿಸಿದ್ದಾರೆ. ಇತ್ತೀಚೆಗೆ ಇಂದೋರ್ ಕ್ಷೇತ್ರದಿಂದ ಅವರು 4.67ಲಕ್ಷ ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು. 1999ರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಡಳಿತದಲ್ಲಿ ರಾಜ್ಯ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.