ಈಗಿನ ಸುದ್ದಿ

ಆಪ್‌ನಲ್ಲಿ ಒಳ ಜಗಳ: ಯಾದವ್ ವಿರುದ್ಧ ಸಿಸೋಡಿಯಾ ಕಿಡಿ

ಆಪ್‌ನಲ್ಲಿ ಒಳ ಜಗಳ: ಯಾದವ್ ವಿರುದ್ಧ ಸಿಸೋಡಿಯಾ ಕಿಡಿ
Published On :

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ನಾಯಕರಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.

ಚುನಾವಣೆ ಸೋಲಿಗೆ ಒಬ್ಬರ ವಿರುದ್ಧ ಒಬ್ಬರು ಆರೋಪ ಮಾಡುತ್ತ್ತಾ, ಬೀದಿ ಜಗಳಕ್ಕೆ ಮುಂದಾಗಿದ್ದಾರೆ.

ಎಎಪಿ ಸೋಲಿಗೆ ಪರೋಕ್ಷವಾಗಿ ಯೋಗೇಂದ್ರ ಯಾದವ್ ಅವರೇ ಕಾರಣ ಎಂದು ಆಪ್‌ನ ಮತ್ತೊಬ್ಬ ನಾಯಕ ಮನೀಷ್ ಸಿಸೋಡಿಯಾ ಆರೋಪಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ನಿರ್ನಾಮಕ್ಕೆ ಯೋಗೇಂದ್ರ ಯಾದವ್ ಯತ್ನಿಸುತ್ತಿದ್ದಾರೆ ಎಂದು ಸಿಸೋಡಿಯಾ ಗಂಭೀರ ಆರೋಪ ಮಾಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರನ್ನು ರಾಜಕೀಯವಾಗಿ ನಿರ್ನಾಮ ಮಾಡಲು ಯಾದವ್ ಪ್ರಯತ್ನಿಸುತ್ತಿದ್ದಾರೆ ಎಂದು ಸಿಸೋಡಿಯಾ ಆಪಾದಿಸಿದ್ದಾರೆ.

ಯೋಗೇಂದ್ರ ಯಾದವ್ ಅವರಿಗೆ ಇ-ಮೇಲ್ ಮಾಡಿರುವ ಸಿಸೋಡಿಯಾ, ನಿಮ್ಮ ಸಲಹೆ ಮೇರೆಗೆ ಆಪ್‌ಗೆ ಈ ಪರಿಸ್ಥಿತಿ ಬಂತು. ಕೇಜ್ರಿವಾಲ್ ಅವರು ನಿಮ್ಮ ಸಲಹೆ ಪಡೆದ ಮೇಲೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಜ್ಜಾದರು. ಆದರೆ ಅದು ವಿಫಲವಾಯಿತು ಎಂದು ಸಿಸೋಡಿಯಾ ತಿಳಿಸಿದ್ದರು.

ನಿಮ್ಮ ಸಲಹೆಯನ್ನು ಪರಿಪಾಲಿಸದೇ ಕೇವಲ ದೆಹಲಿ ಜನತೆ ಅಭಿವೃದ್ಧಿಯತ್ತಾ ಕೇಜ್ರಿವಾಲ್ ಗಮನ ಹರಿಸಿದ್ದರೇ, ಎಎಪಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅವರು ಯೋಗೇಂದ್ರ ವಿರುದ್ಧ ಕಿಡಿಕಾರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.