ಈಗಿನ ಸುದ್ದಿ

ನನ್ನ ಕಾಲಿಗೆ ಎರಗಬೇಡಿ ಸಂಸದರಿಗೆ ಮೋದಿ ತಾಕೀತು

ನನ್ನ ಕಾಲಿಗೆ ಎರಗಬೇಡಿ ಸಂಸದರಿಗೆ ಮೋದಿ ತಾಕೀತು
Published On :

ನವದೆಹಲಿ: ನನ್ನ ಕಾಲಿಗೆ ಬಿದ್ದು ನಮಸ್ಕರಿಸುವುದು ಬೇಡ ಎಂದು ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ತಾಕೀತು ಮಾಡಿದ್ದಾರೆ.

ಲೋಕಸಭೆಯ ಅಧಿವೇಶನದ ಮೂರನೇ ದಿನವಾದ ಇಂದು ಸಂಸತ್ ಭವನದ ಕೇಂದ್ರ ಸಭಾಂಗಣದಲ್ಲಿ ಬಿಜೆಪಿ ಸಂಸದರ ಜೊತೆಗಿನ ಸಮಾಲೋಚನ ಸಭೆಯಲ್ಲಿ ಮಾತನಾಡಿದ ಮೋದಿ, ಇನ್ನು ಮುಂದೆ ಯಾರು ನನ್ನ ಕಾಲು ಮುಟ್ಟಿ ನಮಸ್ಕಾರ ಮಾಡಬೇಡಿ ಎಂದು ತಾಕೀತು ಮಾಡಿದ್ದು, ನಿಮ್ಮನ್ನು ಆಯ್ಕೆ ಮಾಡಿದ ಜನತೆಯ ಋಣ ತೀರಿಸಲು ಪ್ರಯತ್ನಿಸಿ ಎಂದು ಮೋದಿ ಕಿವಿಮಾತು  ಹೇಳಿದ್ದಾರೆ.

ದೇಶದ ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ಮತಚಲಾಯಿಸಿದ್ದಾರೆ. ಜನತೆಯ ವಿಶ್ವಾಸಕ್ಕೆ ದ್ರೋಹವಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಜನತೆಯನ್ನು ಭೇಟಿ ಮಾಡಲು ಹೆಚ್ಚಿನ ಸಮಯವನ್ನು ವಿನಿಯೋಗಿಸಿ ಎಂದು ಮೋದಿ ಹೇಳಿದ್ದಾರೆ.

ನೂತನ ಸಂಸದರಿಗೆ ಮೋದಿ ಕಿವಿಮಾತು

* ಸಂಸದರು ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಿ ನಿಗದಿತ ಅವಧಿಯಲ್ಲಿ ಯೋಜನೆಗಳುನ್ನು ಪೂರ್ತಿಗೊಳ್ಳುವ ಬಗ್ಗೆ ಗಮನಹರಿಸಿ.

* ಸರ್ಕಾರಿ ಅಧಿಕಾರಿಗಳನ್ನು ಕೈ ಕೆಳಗಿನ ನೌಕರರು ಎಂದು ಪರಿಗಣಿಸದೆ ಕುಟುಂಬದ ಸದಸ್ಯರು ಎಂದು ಪರಿಗಣಿಸಿ.

* ಕಾಲಿಗೆ ಬೀಳುವುದು, ಭಟ್ಟಂಗಿತನ ಪ್ರದರ್ಶಿಸುವುದು ಬೇಡ.

* ಅಭಿವೃದ್ಧಿಯ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಬೇಡ.

* ಎಲ್ಲಾ ಅಧಿವೇಶನಗಳಿಗೂ ತಪ್ಪದೆ ಹಾಜರಾಗಿ, ಅಧಿವೇಶನಗಳು ಸರಾಗವಾಗಿ ನಡೆಯಲು ಸಹಕರಿಸಿ.

* ಸಂಸತ್ತಿನಲ್ಲಿ ನಡೆಯುವ ಚರ್ಚೆಗಳಲ್ಲಿ ಭಾಗವಹಿಸಿ, ಇದರಿಂದ ಸಾಕಷ್ಟು ಕಲಿಯಲು ಸಿಗುತ್ತದೆ.

* ಸಂಸತ್ತಿನಲ್ಲಿ ನಡೆಯುವ ಚರ್ಚೆಗಳಲ್ಲಿ ಭಾಗವಹಿಸುವಾಗ ಸೂಕ್ತವಾದ ಪೂರ್ವ ಸಿದ್ಥತೆಯೊಂದಿಗೆ ಸೂಕ್ತ ಹೋಂವರ್ಕ್ ಮಾಡಿಕೊಂಡು ಬನ್ನಿ.

* ಮಾಧ್ಯಮದವರ ಜತೆಗೆ ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡಿ, ಅದನ್ನು ಬಿಟ್ಟು ಪಕ್ಷದ ವಕ್ತಾರರ ಥರ ಮಾತನಾಡಬೇಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.