ಈಗಿನ ಸುದ್ದಿ

ಚಂದ್ರಬಾಬು ನಾಯ್ಡು ಸೀಮಾಂಧ್ರದ ಮೊದಲ ಸಿಎಂ

ಚಂದ್ರಬಾಬು ನಾಯ್ಡು ಸೀಮಾಂಧ್ರದ ಮೊದಲ ಸಿಎಂ
Published On :

ಹೈದರಾಬಾದ್: ಸೀಮಾಂಧ್ರದ ಮೊದಲ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಅವರು ಭಾನುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು.

ಇಂದು ಸಂಜೆ 7.25ಕ್ಕೆ ನೂತನ ಮುಖ್ಯಮಂತ್ರಿಯಾಗಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆಂಧ್ರ ಪ್ರದೇಶ ಮತ್ತು ತೆಂಲಗಾಣ ರಾಜ್ಯಗಳ ಜಂಟಿ ರಾಜ್ಯಪಾಲ ಇ.ಎಸ್.ಎಲ್ ನರಸಿಂಹನ್ ಅವರು ಚಂದ್ರಬಾಬು ನಾಯ್ಡು ಅವರಿಗೆ ಪ್ರತಿಜ್ಞಾವಿಧಿ ಭೋದಿಸಿದರು.

ಇದೇ ವೇಳೆ ಸಚಿವರಾಗಿ ಸಿದ್ದ ರಾಘವರಾವು, ಕಿಮಿಡಿ ಮೃಣಾಳಿನಿ, ಕೆ.ಇ ಕೃಷ್ಣಮೂರ್ತಿ, ಬಿ ಗೋಪಾಲ್‌ಕೃಷ್ಣ, ಉಮಾ ಮಹೇಶ್ವರಿ, ಡಾ.ಪಿ. ನಾರಾಯಣ, ಪೆರಿಟಾಲ ಸುನಿತಾ, ಪತ್ತಿಪಾಟಿ ಪುಲ್ಲಾರಾವು ,ಕಾಮಿನೇನಿ ಶ್ರೀನಿವಾಸ ಪ್ರಮಾಣ ವಚನ ಸ್ವೀಕರಿಸಿದರು.

ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಸಿನಿಮಾ ನಟರು, ಹಿರಿಯ ರಾಜಕಾರಣಿಗಳು ಸೇರಿದಂತೆ ಕೇಂದ್ರ ಸಚಿವರು ಭಾಗವಹಿಸಿದ್ದರು. ಹೀಗಾಗಿ ಗುಂಟೂರು ಸಮೀಪ ಬಂದ ಅತಿಥಿಗಳಿಗಾಗಿ ಮತ್ತು ಟಿಡಿಪಿ ಕಾರ್ಯಕರ್ತರಿಗಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ.

ಚಂದ್ರಬಾಬು ನಾಯ್ಡು ಅವರು ಪ್ರಮಾಣ ವಚನ ಸಮಾರಂಭಕ್ಕೆ ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಷಿ, ರಾಜಸ್ಥಾನ್ ಮುಖ್ಯಮಂತ್ರಿ ವಸುಂದರ ರಾಜೇ. ನಟ ಜೂ.ಎನ್.ಟಿ.ಆರ್, ಜನಸೇನಾ ಪಕ್ಷದ ಸಂಸ್ಥಾಪಕ ಮತ್ತು ನಟ ಪವನ್ ಕಲ್ಯಾಣ್, ಹಿಂದೂಪುರ ಕ್ಷೇತ್ರದ ಶಾಸಕ ಮತ್ತು ನಟ ಬಾಲಕೃಷ್ಣ ಸೇರಿದಂತೆ ಖ್ಯಾತ ತೆಲುಗು ಸಿನಿಮಾ ನಟರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ದುಂದುವೆಚ್ಚಕ್ಕೆ ಪ್ರತಿಪಕ್ಷಗಳ ಕಿಡಿ

ಈ ನಡುವೆ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆಲುಗು ದೇಶಂ ಪಕ್ಷ ಮಾಡುತ್ತಿರುವ ವೆಚ್ಚದ ಕುರಿತು ಪ್ರತಿಪಕ್ಷಗಳು ಆಕ್ಷೇಪವೆತ್ತಿವೆ. ಚಂದ್ರಬಾಬು ನಾಯ್ಡು ಅವರು ಅನಗತ್ಯವಾಗಿ ಕೋಟ್ಯಂತರ ರುಪಾಯಿಗಳನ್ನು ವೆಚ್ಚಮಾಡುತ್ತಿದ್ದಾರೆ. ಪ್ರತಿಜ್ಞಾ ವಿಧಿ ಸಮಾರಂಭಕ್ಕೆ ಕೋಟ್ಯಂತರ ಹಣ ವ್ಯಯಿಸುವ ಅಗತ್ಯವಿರಲಿಲ್ಲ ಎಂದು ಟೀಕಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.