ಫೋರಂ ಮಾಲ್ನಲ್ಲಿ 'ಛೋಟಾ ಭೀಮ್' ಪ್ರತ್ಯಕ್ಷ!

ಬೆಂಗಳೂರು: ಭಾರತೀಯರ, ಅದರಲ್ಲೂ ಭಾರತದ ಪುಟಾಣಿಗಳ ಅಚ್ಚುಮೆಚ್ಚಿನ ಆ್ಯನಿಮೇಟೆಡ್ ಪಾತ್ರಧಾರಿ ಛೋಟಾ ಭೀಮ್ನೊಂದಿಗೆ ಬೆಂಗಳೂರಿನ ಜನರು ಸಂತೋಷ ಹಾಗೂ ಮನರಂಜನಾತ್ಮಕ ಸಮಯವನ್ನು ಕಳೆಯುವ ಅವಕಾಶ ಪಡೆದುಕೊಂಡರು. ವೈಟ್ಫೀಲ್ಡ್ನಲ್ಲಿರುವ ಫೋರಂ ವ್ಯಾಲ್ಯೂ ಮಾಲ್ ತನ್ನ 5ನೇ ವಾಷರ್ಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಇದರ ಅಂಗವಾಗಿ 10 ದಿನಗಳ ಕಾಲ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. 'ಬಂಜಾರಾ ಮಸ್ತಿ' ಎಂಬ ಶೀಷರ್ಿಕೆಯಡಿ ನಡೆದ ವೈವಿಧ್ಯಮಯ ಕಾರ್ಯಕ್ರಮಗಳ ಸರಣಿಯಲ್ಲಿ, ಸುತ್ತಮುತ್ತಲಿನ ಪ್ರದೇಶಗಳ ಜನರು ಹಾಗೂ ಚಿಣ್ಣರು ತಮ್ಮ ನೆಚ್ಚಿನ ಕಿರುತೆರೆಯ ಆ್ಯನಿಮೇಟೆಡ್ ಪಾತ್ರಧಾರಿ ಛೋಟಾಭೀಮ್ ಹಾಗೂ ತಂಡದ ಇತರೆ ಸದಸ್ಯರ ಪ್ರತಿರೂಪ ಪಾತ್ರಧಾರಿಗಳೊಂದಿಗೆ ವಿನೋದಮಯ ಕ್ಷಣಗಳ ಅನುಭವವನ್ನು ಪಡೆದರು. ಚಿಣ್ಣರ ಅತ್ಯಂತ ನೆಚ್ಚಿನ ಹೀರೊ 'ಛೋಟಾ ಭೀಮ್' ಪಾತ್ರಧಾರಿಯ ಜೊತೆಗೆ ಫೋಟೊಗಳನ್ನು ಪಡೆಯಲು ಅಭಿಮಾನಿಗಳು ಮುಗಿಬಿದ್ದರು.
10 ದಿನಗಳ ಕಾಲ ನಡೆದ ಈ ಸಮಾರಂಭದಲ್ಲಿ ಮಕ್ಕಳು ವಿವಿಧ ಮನೋರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಿದರು. 'ಬಂಜಾರ ಮಸ್ತಿ ಝೋನ್'ನಲ್ಲಿ ಮಕ್ಕಳಿಗಾಗಿ 'ಹಣ್ಣುಗಳನ್ನು ಕೀಳುವ', 'ಕೋತಿಗೆ ಆಹಾರ ನೀಡುವ', 'ಕುಂಗ್ ಫೂ ಫೈಟಿಂಗ್', ಸೇರಿದಂತೆ ಮುಖದ ಮೇಲೆ ಪೇಯಿಂಟಿಂಗ್ ಹಾಗೂ ಕ್ಲೇ ಮಾಡೆಲ್ಲಿಂಗ್ ಚಟುವಟಿಕೆಗಳು ಹಾಗೂ ಕಾಯರ್ಾಗಾರಗಳಲ್ಲಿ ಭಾಗವಹಿಸಿ ಆನಂದಿಸಿದರು. ಜೊತೆಗೆ 'ಛೋಟಾ ಭೀಮ್'ಗೆ ಕಥೆಗಳಿಗೆ ಸಂಬಂಧಿಸಿದ ರಸಪ್ರಶ್ನೆ ಕಾರ್ಯಕ್ರಮಗಳನ್ನೂ ಸಹ ಮಕ್ಕಳಿಗಾಗಿ ಏರ್ಪಡಿಸಲಾಗಿತ್ತು. ವಾರದ ಕೊನೆಯಲ್ಲಿ ಏರ್ಪಡಿಸಲಾಗಿದ್ದ ವಿಭಿನ್ನ 'ಟಾಲಿಸ್ಮಾನ್ ಕಿ ಖೋಜ್' ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು.
ಒಟ್ಟಾರೆಯಾಗಿ ವೈಟ್ಫೀಲ್ಡ್ನ ಫೋರಂ ವ್ಯಾಲ್ಯೂ ಮಾಲ್ 5ನೇ ವಾಷರ್ಿಕೋತ್ಸವವನ್ನು ಅಭಿಮಾನಿಗಳಿಗೆ ಮರೆಯಲಾಗದಂತಹ ಅನುಭವವನ್ನಾಗಿಸುವಲ್ಲಿ ಯಶಸ್ವಿಯಾಯಿತು!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


