ಸೇನಾ ಮುಖ್ಯಸ್ಥರಾಗಿ ದಲ್ಬೀರ್ ಸಿಂಗ್ ನೇಮಕ ಅಂತಿಮ: ಜೇಟ್ಲಿ

ನವದೆಹಲಿ: ಸೇನಾ ಮುಖ್ಯಸ್ಥರ ನೇಮಕ ವಿಚಾರದಲ್ಲಿ ಎದ್ದಿರುವ ವಿವಾದಗಳಿಗೆ ಕೊನೆ ಹಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ನೂತನ ಸೇನಾ ಮುಖ್ಯಸ್ಥರಾಗಿ ಲೆ.ಜ. ದಲ್ಬೀರ್ ಸಿಂಗ್ ಸುಹಾಗ್ ನೇಮಕ ಅಂತಿಮ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಬುಧವಾರ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಮಾತನಾಡಿದ ಅರುಣ್ ಜೇಟ್ಲಿ, ದಲ್ಬೀರ್ ಸಿಂಗ್ ನೇಮಕ ಅಂತಿಮವಾಗಿದ್ದು, ಮುಖ್ಯಸ್ಥರಾಗಿ ದಲ್ಬೀರ್ ಸಿಂಗ್ ಅವರೇ ಮುಂದುವರೆಯುತ್ತಾರೆ ಈ ವಿಚಾರದಲ್ಲಿ ರಾಜಕೀಯ ಬೇಡ ಎಂದು ಹೇಳಿದ್ದಾರೆ.
ಸೇನಾ ಮುಖ್ಯಸ್ಥರಾಗಿರುವ ಜ. ಬಿಕ್ರಂ ಸಿಂಗ್ ಜು.31ರಂದು ನಿವೃತ್ತರಾಗುತ್ತಿದ್ದು, ಅವರ ನಿವೃತ್ತಿಗಿಂದ 2 ತಿಂಗಳ ಮೊದಲು ನೂತನ ಸೇನಾ ಮುಖ್ಯಸ್ಥರ ನೇಮಕ ಸಂಪ್ರದಾಯದಂತೆ ನೂತನ ಮುಖ್ಯಸ್ಥರ ಹೆಸರನ್ನು ಅಂದಿನ ಯುಪಿಎ ಸರ್ಕಾರ ಪ್ರಕಟಿಸಿತ್ತು.
ಈ ನೇಮಕಾತಿ ಪ್ರಶ್ನಿಸಿ ವಿ.ಕೆ. ಸಿಂಗ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ದಲ್ಬೀರ್ ಸಿಂಗ್ ಅವರು ಅಮಾಯಕರ ಹತ್ಯೆ ಹಾಗೂ ಡಕಾಯಿತಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಸುಪ್ರೀಂಕೋರ್ಟ್ಗೆ ವರದಿ ನೀಡಿರುವ ರಕ್ಷಣಾ ಸಚಿವಾಲಯ ವಿ.ಕೆ. ಸಿಂಗ್ ಆರೋಪ ಪೂರ್ವಗ್ರಹ ಪೀಡಿತವಾಗಿದ್ದು, ದಲ್ಬೀರ್ ಸಿಂಗ್ರನ್ನು ಮುಖ್ಯಸ್ಥರಾಗಿ ನೇಮಕ ಮಾಡಬಹುದು ಎಂದು ಹೇಳಿತ್ತು.
ಸೇನಾ ಮುಖ್ಯಸ್ಥರ ನೇಮಕಾತಿ ವಿಚಾರದಲ್ಲಿ ಕೇಂದ್ರ ಸಚಿವ ಜನರಲ್ ವಿ.ಕೆ. ಸಿಂಗ್ ತಪ್ಪು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ರಾಜಿನಾಮೆ ನೀಡಬೇಕು ಎಂದು ಕಾಂಗ್ರೆಸ್ ಹಾಗೂ ಜೆಡಿಯು ಸಂಸದರು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


