ಈಗಿನ ಸುದ್ದಿ

ನಾವು ನೀಡಿದ ಪ್ರತಿಯೊಂದು ಭರವಸೆ ಈಡೇರಿಸುತ್ತೇವೆ: ಪ್ರಧಾನಿ

ನಾವು ನೀಡಿದ ಪ್ರತಿಯೊಂದು ಭರವಸೆ ಈಡೇರಿಸುತ್ತೇವೆ: ಪ್ರಧಾನಿ
Published On :

ನವದೆಹಲಿ: ಚುನಾವಣೆ ವೇಳೆ ನಾವು ನೀಡಿದ್ದ ಪ್ರತಿಯೊಂದು ಭರವಸೆಗಳನ್ನು ಈಡೇರಿಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ.

ಪ್ರಧಾನಿಯಾದ ನಂತರ ಮೊದಲ ಬಾರಿಗೆ ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಕುರಿತು ಮಾತನಾಡಿದ ಮೋದಿ, ನಾನು ಸಂಸತ್ತಿಗೆ ಮೊದಲ ಬಾರಿ ಪ್ರವೇಶಿಸಿದ್ದೇನೆ, ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದರು.

ರಾಷ್ಟ್ರಪತಿಗಳ ಭಾಷಣ ಬರೀ ಭಾಷಣವಲ್ಲ. ಅವರ ಪ್ರತಿಯೊಂದು ಮಾತು ಭರವಸೆಯಿಂದ ಕೂಡಿದೆ ಮತ್ತು ನಾವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಮೋದಿ ಭರವಸೆ ನೀಡಿದರು.

ಬೆಲೆ ಏರಿಕೆಯನ್ನು ನಿಯಂತ್ರಿಸುವುದು ನಮ್ಮ ಮತ್ತು ಪ್ರತಿಪಕ್ಷದ ಆದ್ಯ ಕರ್ತವ್ಯ. ಅಗತ್ಯ ವಸ್ತುಗಳ ಬೆಲೆ ಇಳಿಸುವುದಾಗಿ ನಾವು ಭರವಸೆ ನೀಡಿದ್ದೇವೆ. ಅದರಂತೆ ಈಗ ಸರ್ಕಾರ ಬೆಲೆ ನಿಯಂತ್ರಣಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ ಎಂದರು.

ಬಡತನವನ್ನು ಹೋಗಲಾಡಿಸುವ ವ್ಯವಸ್ಥೆ ನಮ್ಮದಾಗಬೇಕು, ಹಳ್ಳಿಗಳನ್ನು ಆಧುನಿಕರಣಗೊಳಿಸಬೇಕಿದೆ. ಹಳ್ಳಿಗಳಲ್ಲಿ 24 ಗಂಟೆ ವಿದ್ಯುತ್ ಹಾಗೂ ಉತ್ತಮ ಶಿಕ್ಷಣ ಸಿಗುವಂತಾಗಬೇಕು. ನಗರ ಪ್ರದೇಶಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ. ಆದರೆ ಹಳ್ಳಿಗಳಲ್ಲೂ ಉತ್ತಮ ಶಿಕ್ಷಣ ಸಿಗುವಂತಾದರೆ, ಅವರು ಹಳ್ಳಿ ಬಿಟ್ಟು ಪಟ್ಟಣಕ್ಕೆ ಹೋಗುವುದಿಲ್ಲ ಎಂದು ಮೋದಿ ಹೇಳಿದರು.

ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಸಂಶೋಧನೆ ಆಗಬೇಕು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಲಾಭ ಕೃಷಿ ಕ್ಷೇತ್ರದಲ್ಲೂ ಕಾಣುವಂತಾಗಬೇಕು ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು ಎಂದರು. ಅಲ್ಲದೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅಭಿವೃದ್ಧಿ ತಲುಪಬೇಕು. ಸ್ವಾತಂತ್ರ್ಯವನ್ನು ಮಹಾತ್ಮ ಗಾಂಧೀಜಿ ಜನಾಂದೋಲನವನ್ನಾಗಿ ಪರಿವರ್ತಿಸಿದ್ದರು. ಆದರೆ ನಾವು ಅಭಿವೃದ್ಧಿಯನ್ನು ಜನಾಂದೋಲನವನ್ನಾಗಿ ಪರಿವರ್ತಿಸೋಣ. ಗಾಂಧೀಜಿಯವರ 150ನೇ ಜನ್ಮ ದಿನಕ್ಕೆ ಸ್ವಚ್ಛ ಭಾರತ ಕೊಡುಗೆ ನೀಡಬೇಕು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.