ಈಗಿನ ಸುದ್ದಿ

ಮನಾಲಿ ದುರಂತ: ವಿದ್ಯಾರ್ಥಿಗಳು ನೀರುಪಾಲಾಗುತ್ತಿರುವ ವಿಡಿಯೋ ಲಭ್ಯ

ಮನಾಲಿ ದುರಂತ: ವಿದ್ಯಾರ್ಥಿಗಳು ನೀರುಪಾಲಾಗುತ್ತಿರುವ ವಿಡಿಯೋ ಲಭ್ಯ
Published On :

ಮಂಡಿ: ಹಿಮಾಚಲ ಪ್ರದೇಶದ ಮಂಡಿಯಲ್ಲಿ ಕಳೆದ ಭಾನುವಾರ ಪ್ರವಾಹದಲ್ಲಿ ಕೊಚ್ಚಿಹೋಗಿರುವ ಹೈದರಾಬಾದ್‌ನ ವಿಜ್ಞಾನ ಕಾಲೇಜ್‌ನ ವಿದ್ಯಾರ್ಥಿಗಳ ಪತ್ತೆಗಾಗಿ ಶೋಧ ಕಾರ್ಯ ಬುಧವಾರವೂ ಮುಂದುವರೆದಿದ್ದು, ಒಟ್ಟು 633 ರಕ್ಷಣಾ ಸಿಬ್ಬಂದಿಗಳು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಈ ನಡುವೆ ವಿದ್ಯಾರ್ಥಿಗಳು ನೀರುಪಾಲಾಗುವ ಕೆಲವೇ ಕ್ಷಣಗಳ ಮುನ್ನ ತೆಗೆದ ವಿಡಿಯೋ ಮಾಧ್ಯಮಕ್ಕೆ ಲಭ್ಯವಾಗಿದ್ದು, ವಿಡಿಯೋ ದೃಶ್ಯಾವಳಿಗಳು ಮನಕಲುಕುವಂತಿವೆ. ವಿಡಿಯೋದಲ್ಲಿ ವಿದ್ಯಾರ್ಥಿಗಳು ಬಿಯಾಸ್ ನದಿಯ ಮಧ್ಯಭಾಗಕ್ಕೆ ತೆರಳಿ, ಖುಷಿಯಿಂದ ಫೋಟೋ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ದಿಢೀರನೇ ಬಂದ ಭಾರಿ ಪ್ರಮಾಣದ ನಿರೀನ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗುತ್ತಾರೆ.



ಕಳೆದ ಭಾನುವಾರ ಸಿಬ್ಬಂದಿ ಸೇರಿದಂತೆ 60 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮನಾಲಿಗೆ ಪ್ರವಾಸಕ್ಕೆ ತೆರಳಿದ್ದರು. ಈ ಪೈಕಿ 24 ವಿದ್ಯಾರ್ಥಿಗಳು ನೀರುಪಾಲಾಗಿದ್ದು, ಕಳೆದ ಸೋಮವಾರ ಐವರ ಮೃತದೇಹ ಪತ್ತೆಯಾಗಿದೆ.  

ಹಿಮಾಚಲಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರು ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಜತೆಗೆ ಲಾರ್ಜಿ ಜಲವಿದ್ಯುತ್ ಯೋಜನೆಯ ಇಬ್ಬರು ಹಿರಿಯ ಎಂಜಿನಿಯರ್ಗಳು ಹಾಗೂ ಒಬ್ಬ ಫಿಟ್ಟರ್ನನ್ನು ಅಮಾನತು ಮಾಡಿದ್ದಾರೆ. ಇದೇ ವೇಳೆ, ದುರಂತದ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.

ಡ್ಯಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್
ಸೂಚನೆ ನೀಡದೇ ನದಿಗೆ ನೀರು ಬಿಟ್ಟಿದ್ದಕ್ಕಾಗಿ ಲಾರ್ಜಿ ಡ್ಯಾಂ ಅಧಿಕಾರಿಗಳ ವಿರುದ್ಧ ಹಿಮಾಚಲ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ವಿಡಿಯೋ ಕೃಪೆ: amarujala.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.