ಬ್ರೆಜಿಲ್ ಪ್ರವಾಸವನ್ನು ರದ್ದುಗೊಳಿಸಿದ ಗೋವಾ ಸರ್ಕಾರ

ಪಣಜಿ: ಗೋವಾ ಶಾಸಕರು ಫುಟ್‌ಬಾಲ್ ವಿಶ್ವಕಪ್ ನೋಡಲ್ ಬ್ರೆಜಿಲ್‌ಗೆ ಕೈಗೊಂಡಿದ್ದ ಪ್ರವಾಸವನ್ನು ಗೋವಾ ಸರ್ಕಾರ ರದ್ದುಗೊಳಿಸಿದೆ.
ಓರ್ವ ಸಚಿವ ಸೇರಿದಂತೆ 6 ಗೋವಾ ಶಾಸಕರು ಸರ್ಕಾರದ ಖರ್ಚಿನಲ್ಲಿ ಫುಟ್ಬಾಲ್ ವಿಶ್ವಕಪ್ ಟೂರ್ನಿ ವಿಕ್ಷಣೆಗಾಗಿ ಬ್ರೇಜಿಲ್‌ಗೆ ಪ್ರವಾಸ ಕೈಗೊಂಡಿದ್ದರು.
ಶಾಸಕರ ಪ್ರವಾಸಕ್ಕಾಗಿ 89 ಲಕ್ಷ ಹಣ ನೀಡಲು ಗೋವಾ ಸರ್ಕಾರ ಸಿದ್ದವಿತ್ತು. ಆದರೆ ಶಾಸಕರ ಪ್ರವಾಸ ವಿವಾದವನ್ನುಂಟು ಮಾಡಿದ ಹಿನ್ನಲೆಯಲ್ಲಿ ಸರ್ಕಾರ ಪ್ರವಾಸವನ್ನು ರದ್ದುಗೊಳಿಸಿದೆ.
ಸರ್ಕಾರ ದುಡ್ಡಲ್ಲಿ ಬ್ರೆಜಿಲ್ ಪ್ರವಾಸಕ್ಕೆ ತೆರಳುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಶಾಸಕರೇ ತಮ್ಮ ಖರ್ಚಿನಲ್ಲೇ ಬ್ರೆಜಿಲ್ ಪ್ರವಾಸ ಕೈಗೊಳ್ಳಲು ಮುಂದಾಗಿದ್ದರು.
ಸರ್ಕಾರದ ದುಡ್ಡಿನಲ್ಲಿ ನಾವು ಬ್ರೆಜಿಲ್ ಪ್ರವಾಸಕ್ಕೆ ತೆರಳುತ್ತಿದ್ದೇವೆ ಎಂದು ಮಾಧ್ಯಮದಲ್ಲಿ ದೊಡ್ಡ ಸುದ್ದಿ ಮಾಡಲಾಗುತ್ತಿದೆ. ಆದರೆ ನಾವು ಆರು ಶಾಸಕರು ನಮ್ಮ ಸ್ವಂತ ಖರ್ಚಿನಲ್ಲಿ ಬ್ರೆಜಿಲ್‌ಗೆ ತೆರಳಲು ನಿರ್ಧರಿಸಿದ್ದೇವೆ ಎಂದು ಶಾಸಕ ಫುರ್ಟಡೊ ಅವರು ಹೇಳಿದ್ದರು.
ಫುಟ್ಬಾಲ್ ವಿಶ್ವಕಪ್ ಅಧ್ಯಯನದ ಹೆಸರಿನಲ್ಲಿ ಕ್ರೀಡಾ ಸಚಿವ ರಮೇಶ್ ತಾವಡ್ಕರ್ ನೇತೃತ್ವದ ಆರು ಶಾಸಕರ ತಂಡ ಬ್ರೆಜಿಲ್ ಪ್ರವಾಸಕ್ಕೆ ಸಿದ್ಧತೆ ನಡೆಸಿತ್ತು. ಅಲ್ಲದೆ ಇದಕ್ಕಾಗಿ ಕ್ರೀಡಾ ಇಲಾಖೆ ಬರೋಬ್ಬರಿ 89 ಲಕ್ಷ ರುಪಾಯಿ ಬಿಡುಗಡೆ ಮಾಡಿತ್ತು. ಆದರೆ ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಶ್ರೀ ಸಾಮಾನ್ಯನ ಹಣದಿಂದ ರಾಜಕಾರಣಿಗಳು ಲಾಭ ಪಡೆಯುವುದು ಸರಿಯಲ್ಲ ಎಂದು ಟೀಕಿಸಿತ್ತು. ಅಲ್ಲದೆ ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


