ರಜೆ, ಪ್ರವಾಸ ಸೌಲಭ್ಯ ಹಗರಣ: ಹಾಲಿ, ಮಾಜಿ ಸಂಸದರ ವಿರುದ್ಧ ಎಫ್‌ಐಆರ್

ನವದೆಹಲಿ: ರಜೆ ಪ್ರವಾಸ ಸೌಲಭ್ಯ ಹಗರಣ ಸಂಬಂಧ ಮೂವರು ಹಾಲಿ ರಾಜ್ಯಸಭಾ ಸದಸ್ಯರು ಹಾಗೂ ಮೂವರು ಮಾಜಿ ರಾಜ್ಯಸಭಾ ಸದಸ್ಯರ ವಿರುದ್ಧ ಶುಕ್ರವಾರ ಸಿಬಿಐ ಎಫ್‌ಐಆರ್ ದಾಖಲಿಸಿದೆ.
ಈ ಸಂಬಂಧ ಇಂದು ಸಿಬಿಐ ಅಧಿಕಾರಿಗಳು ಕೆಲವು ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ದೆಹಲಿ ಹಾಗೂ ಒಡಿಸ್ಸಾ ಸೇರಿದಂತೆ 10 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ, ದಾಖಲೆಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಭಾರಿ ಪ್ರಮಾಣದಲ್ಲಿ ನಡೆದಿದೆ ಎನ್ನಲಾದ ರಜೆ ಪ್ರವಾಸ ಸೌಲಭ್ಯ(ಲೀವ್ ಟ್ರಾವೆಲ್ ಕನ್ಸೇಷನ್-ಎಲ್‌ಟಿಸಿ) ಹಗರಣದ ಸಂಬಂಧ ಹಾಲಿ ರಾಜ್ಯಸಭಾ ಸದಸ್ಯರಾದ ತೃಣಮೂಲ ಕಾಂಗ್ರೆಸ್‌ನ ಡಿ. ಬಂಡೋಪದ್ಯಾಯ್, ಬಹುಜನ ಸಮಾಜವಾದಿ ಪಕ್ಷದ ಬ್ರಿಜೇಶ್ ಪಾತಕ್ ಮತ್ತು ಎಂಪಿಎಫ್‌ನ ಲಾಲ್ಹಿಮಿಂಗ್ ಲಿಯಾನ ಹಾಗೂ ಮಾಜಿ ಸದಸ್ಯರಾದ ಬಿಜೆಪಿಯ ಜೆ.ಪಿ.ಎನ್ ಸಿಂಗ್, ಬಿಜೆಡಿಯ ರೇಣು ಬಾಲಾ, ಆರ್‌ಎಲ್‌ಡಿಯ ಮೆಹಮದ್ ಹರ್ಷದ್ ಮಂದನಿ ವಿರುದ್ಧ ಸಿಬಿಐ ಆರೋಪಿಸಿದೆ.
ಈ ಪ್ರಕರಣದಲ್ಲಿ ಭಾರಿ ಕುಳಗಳು ತೊಡಗಿಕೊಂಡಿರುವುದನ್ನು ಪತ್ತೆ ಹಚ್ಚಿರುವ ಸಿಬಿಐ ಪೊಲೀಸರು ನಕಲಿ ವಿಮಾನ ಟಿಕೆಟ್‌ಗಳು, ದಾಖಲೆಗಳಿಗಾಗಿ ಅನೇಕ ಹಿರಿಯ ಅಧಿಕಾರಿಗಳು ಹಾಲಿ ಹಾಗೂ ಮಾಜಿ ಸಂಸದರ ಮನೆಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದೇ ವೇಳೆ ವಿವಿಧ ಟ್ರಾವೆಲ್ ಏಜೆನ್ಸಿಗಳ ಮೇಲೂ ಸಿಬಿಐ ಪೊಲೀಸರು ದಾಳಿ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


