ಸಿಇಒ ಹತ್ಯೆಯ ಹಿಂದೆ ಸಿಪಿಎಂ, ಬಿಜೆಪಿ ಕೈವಾಡ: ಮಮತಾ ಆರೋಪ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಬದ್ರೇಶ್ವರ್ನಲ್ಲಿ ಸೆಣಬು ಮಿಲ್ನ ಸಿಇಒ ಹತ್ಯೆಯ ಹಿಂದೆ ವಿರೋಧ ಪಕ್ಷಗಳಾದ ಸಿಪಿಎಂ ಮತ್ತು ಭಾರತೀಯ ಜನತಾ ಪಕ್ಷದ ಕೈವಾಡವಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ,
ಭಾನುವಾರ ನಾರ್ಥ್ ಬ್ರೂಕ್ ಸೆಣಬಿನ ಮಿಲ್ನ ಸಿಇಒ ಎಸ್.ಕೆ ಮಹೇಶ್ವರಿ ಅವರನ್ನು ಪ್ರತಿಭಟನಾನಿರತ ಕಾರ್ಮಿಕರು ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಕೆಲಸದ ಅವಧಿಯನ್ನು ಹೆಚ್ಚಳಗೊಳಿಸಿ ಹೆಚ್ಚಿನ ಸಂಬಳ ಕೊಡಬೇಕೆಂದು ಒತ್ತಾಯಿಸಿ ಪ್ರಸ್ತುತ ಕಾರ್ಖಾನೆಯ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು.
ಈ ಘಟನೆ ಬಗ್ಗೆ ವಿವರಿಸಿದ ಕಾರ್ಖಾನೆಯ ಜನರಲ್ ಮ್ಯಾನೇಜರ್ ಕಿರಣ್ಜಿತ್ ಸಿಂಗ್, ನಾವು ಸಭೆ ನಡೆಸುತ್ತಿರುವಾಗ ದಿಢೀರನೆ ಇಟ್ಟಿಗೆ ತುಂಡುಗಳು ನಮ್ಮತ್ತ ತೂರಿಬಂದವು. ಅಲ್ಲಿ ಯಾರಿದ್ದಾರೆ? ಎಂಬುದು ನಮಗೆ ಗೊತ್ತಾಗಿಲ್ಲ. ಮಹೇಶ್ವರಿ ಅವರಿಗೆ ತೀವ್ರ ಗಾಯಗಳಾಗಿದ್ದವು. ನನಗೂ, ನಮ್ಮ ಸೆಕ್ಯೂರಿಟಿಗೂ ಗಾಯಗಳಾಗಿದ್ದವು ಎಂದು ಹೇಳಿದ್ದಾರೆ.
ಇಲ್ಲಿನ ಕಾರ್ಮಿಕರಿಗೆ ಕೆಲಸ ಮಾಡುವ ಸಮಯವನ್ನು ಆಧಾರಿಸಿ ಸಂಬಳ ನೀಡಲಾಗುತ್ತಿತ್ತು. ಈವಾಗ ವಾರದಲ್ಲಿ 25 ಗಂಟೆಗಳ ಕಾಲ ಅವರ ಕೆಲಸದ ಅವಧಿಯಿದ್ದು, ಅದನ್ನು 40 ಗಂಟೆಗೆ ಏರಿಸಬೇಕು, ಸಂಬಳ ಹೆಚ್ಚಿಸಬೇಕು ಹೀಗೆ ಹಲವಾರು ಬೇಡಿಕೆಗಳನ್ನೊಡ್ಡಿ ಕಾರ್ಮಿಕರು ಪ್ರತಿಭಟನೆಗೆ ಇಳಿದಿದ್ದರು.
ಪ್ರತಿಭಟನೆಗೆ ಕಾರ್ಖಾನೆಯ ಅಧಿಕಾರಿಗಳು ಸ್ವಂದಿಸದೇ ಇದ್ದಾಗ ರೊಚ್ಚಿಗೆದ್ದ ಕಾರ್ಮಿಕರು ಮಹೇಶ್ವರಿ ಅವರ ಮೇಲೆ ಕಲ್ಲೆಸೆದು, ಕಬ್ಬಿಣದ ಸರಳುಗಳಿಂದ ಹಲ್ಲೆಗೊಳಿಸಿದ್ದಾರೆ.
ಹಲ್ಲೆಯಿಂದ ತೀವ್ರ ಗಾಯಗೊಂಡ ಮಹೇಶ್ವರಿ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಜೀವ ಉಳಿಸಲು ಸಾಧ್ಯವಾಗಿಲ್ಲ.
ಆದಾಗ್ಯೂ, ರಾಜ್ಯದಲ್ಲಿ ಮಮತಾ ನೇತೃತ್ವದ ಸರ್ಕಾರ ಕಾನೂನನ್ನು ಪಾಲಿಸಲು ವಿಫಲಗೊಂಡಿದೆ ಎಂದು ಬಿಜೆಪಿ ಆರೋಪಿಸಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


