ಉಗ್ರರಿಂದ ಇರಾಕ್ ಸೈನಿಕರ ಸಾಮೂಹಿಕ ಕಗ್ಗೊಲೆ

ಬಾಗ್ದಾದ್: ಇರಾಕ್‌ನಲ್ಲಿ ಮುಸ್ಲಿಂ ಉಗ್ರಗಾಮಿ ಸಂಘಟನೆಯ ಉಗ್ರರು ನೂರಾರು ಇರಾಕಿ ಸೈನಿಕರನ್ನು ಸಾಮೂಹಿಕವಾಗಿ ಕೊಲೆ ಮಾಡಿರುವ ಭಯನಕ ಚಿತ್ರಗಳನ್ನು ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉತ್ತರ ಇರಾಕ್ ಮೇಲೆ ದಾಳಿ ಮಾಡಿ ಎರಡು ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿರುವ ಉಗ್ರರು ಆ ನಗರಗಳಲ್ಲಿ ತಮ್ಮ ಉಪಟಳವನ್ನು ಮುಂದುವರೆಸಿದ್ದು, ಸುಮಾರು 1700 ಸೈನಿಕರನ್ನು ಕೊಂದು ಹಾಕಿರುವ ಚಿತ್ರಗಳು ವೆಬ್‌ಸೈಟ್‌ನಲ್ಲಿ ರಾರಾಜಿಸುತ್ತಿವೆ.
ಮುಸುಕುಧಾರಿಗಳಾದ ಉಗ್ರಗಾಮಿಗಳು ಸೆರೆಸಿಕ್ಕ ಸೈನಿಕರನ್ನು ಟ್ರಕ್‌ಗಳ ಮೂಲಕ ಸಣ್ಣ ಹಳ್ಳಿಯೊಂದಕ್ಕೆ ಕೊಂಡೊಯ್ದು ಮುಖಕೆಳಗೆ ಮಾಡಿ ಮಲಗಿಸಿ ಕೈಗಳನ್ನು ಬೆನ್ನ ಹಿಂದೆ ಕಟ್ಟಿರುವುದು ಹಾಗೂ ಸೆರೆಯಾಳುಗಳಿಗೆ ಗುಂಡಿಕ್ಕಿ ಬಳಿಕ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವ ದೃಶ್ಯಗಳು ಮನಕಲಕುವಂತಿವೆ.
ವೆಬ್‌ಸೈಟ್‌ನಲ್ಲಿ ಹರಿದಾಡುತ್ತಿರುವ ಚಿತ್ರಗಳು ಇರಾಕ್‌ನಲ್ಲಿ ಜನಾಂಗೀಯ ಉದ್ವಿಗ್ನತೆ ತೀವ್ರಗೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಸುನ್ನಿ ಉಗ್ರಗಾಮಿಗಳ ವಿರುದ್ಧ ಹೋರಾಟಕ್ಕೆ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವಂತೆ ಧಾರ್ಮಿಕ ಮುಖಂಡನ ಕರೆಗೆ ನೂರಾರು ಶಿಯಾಗಳು ಮುಂದಾಗಿ ದಾಳಿಗೆ ನಡೆಸುತ್ತಿದ್ದಾರೆ.
ಇರಾಕ್‌ನಲ್ಲಿರುವ ಭಾರತೀಯರಿಗೆ ಮನೆಯಿಂದ ಹೊರಬರದಂತೆ ಸೂಚನೆ:
ಇರಾಕ್ ಸೇನೆ ಮತ್ತು ಉಗ್ರರ ನಡುವೆ ದಾಳಿ ಮುಂದುವರೆದಿದ್ದು, ಭಾರತೀಯರ ಮೇಲೆ ಉಗ್ರರು ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಇರಾಕ್‌ನಲ್ಲಿರುವ ಭಾರತೀಯರಿಗೆ ಮನೆಯಿಂದ ಹೊರ ಬರದಂತೆ ವಿದೇಶಾಂಗ ಸಚಿವಾಲಯ ಸೂಚಿಸಿದೆ.
ಸರ್ಕಾರ ಹಾಗೂ ನಮ್ಮ ರಾಯಬಾರ ಕಚೇರಿ ನಿರಂತರವಾಗಿ ಇರಾಕ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ. ಯಾವುದೇ ಸಮಯದಲ್ಲಿಯೂ ನಮ್ಮವರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಆದರೆ ನಮ್ಮವರು ಜಾಗೃತೆಯಿಂದ ಇರಬೇಕು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


