ಈಗಿನ ಸುದ್ದಿ

ಹಣದುಬ್ಬರ ನಿಯಂತ್ರಿಸುವುದೇ ಮೋದಿ ಸರ್ಕಾರ?

ಹಣದುಬ್ಬರ ನಿಯಂತ್ರಿಸುವುದೇ ಮೋದಿ ಸರ್ಕಾರ?
Published On :

ನವದೆಹಲಿ: ಹಣದುಬ್ಬರ! ನರೇಂದ್ರ ಮೋದಿ ಸರ್ಕಾರದ ಮುಂದಿರುವ ಅತೀ ದೊಡ್ಡ ಸವಾಲು ಇದು. ಸದ್ಯದ ಪರಿಸ್ಥಿತಿಯಲ್ಲಿ ಹಣದುಬ್ಬರವನ್ನು ನಿಯಂತ್ರಿಸುವುದು ಮೋದಿ ಸರ್ಕಾರಕ್ಕೆ ಚಾಲೆಂಜಿಂಗ್ ಕೆಲಸವೇ ಆಗಿದೆ. ತರಕಾರಿ, ಹಣ್ಣು ಹಂಪಲು, ದವಸ ಧಾನ್ಯಗಳ ಬೆಲೆ ಏರಿಕೆಯಾಗುತ್ತಲೇ ಇರುವುದರಿಂದ ಮೇ ತಿಂಗಳಲ್ಲಿ ಹಣದುಬ್ಬರ ಶೇ.6.01ಕ್ಕೆ ತಲುಪುವಂತಾಗಿದೆ.

ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಕಳೆದ 5 ತಿಂಗಳಲ್ಲಿ ಹಣದುಬ್ಬರ ಗರಿಷ್ಠ ಮಟ್ಟಕ್ಕೆ ಏರಿದೆ. ಇದೀಗ ಮೋದಿ ಸರ್ಕಾರ ಹಣದುಬ್ಬರವನ್ನು ನಿಯಂತ್ರಿಸದೇ ಇದ್ದರೆ, ಸರ್ಕಾರ ಜನರಿಗೆ ನೀಡಿದ ಆಶ್ವಾಸನೆಯನ್ನು ಪೂರೈಸಲು ಕಷ್ಟವಾಗಲಿದೆ.

ಮೋದಿ ಪ್ರಧಾನಿ ಹುದ್ದೆಗೇರಿದಾಗ ಹಣದುಬ್ಬರವನ್ನು ನಿಯಂತ್ರಿಸುವುದೇ ನಮ್ಮ ಮೊದಲ ಆದ್ಯತೆ ಎಂದು ಹೇಳಿದ್ದರು.

ಆದಾಗ್ಯೂ, ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ ಅಕ್ಕಿ, ಜೋಳ ಮತ್ತು ಸೋಯಾ ಬೀನ್ ಬೆಳೆ ಹಾನಿಯಾಗಲಿದೆ. ಮಾತ್ರವಲ್ಲದೆ ಇರಾಕ್ ನಲ್ಲಿನ ರಾಜಕೀಯ ಸಮಸ್ಯೆ ಯಿಂದಾಗಿ ಕಚ್ಛಾ ತೈಲದ ಬೆಲೆಯೂ ಏರಿಕೆಯಾಗಲಿದೆ.

ಬಲ್ಲಮೂಲಗಳ ಪ್ರಕಾರ ಈ ಸಮಸ್ಯೆಗಳನ್ನು ನಿಯಂತ್ರಿಸಲು ಸರ್ಕಾರ ರೈತರಿಗೆ ಬಿತ್ತನೆ ಬೀಜ ಹಾಗು ಡೀಸೆಲ್‌ನಲ್ಲಿ ಸಬ್ಸಿಡಿ ನೀಡುವುದು ಮಾತ್ರವಲ್ಲದೆ ಸಾಲವನ್ನೂ ನೀಡಲು ತೀರ್ಮಾನಿಸಿದೆ.

ಒಟ್ಟಿನಲ್ಲಿ ಅಚ್ಚೇ ದಿನ್ ಆನೇವಾಲೇ ಹೈ ಎಂಬ ಘೋಷವಾಕ್ಯದೊಂದಿಗೆ ಅಧಿಕಾರಕ್ಕೇರಿರುವ ಮೋದಿ ಸರ್ಕಾರಕ್ಕೆ ಈ ಬಾರಿಯ ಹಣದುಬ್ಬರವನ್ನು ನಿಯಂತ್ರಿಸಿ ಜನಹಿತಕ್ಕಾಗಿ ಕ್ರಮಗಳನ್ನು ಕೈಗೊಳ್ಳುವುದು ಕಷ್ಟವಾಗಲಿದೆ ಎಂಬುದು ತಜ್ಞರ ಅಂಬೋಣ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.