ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾಗಲಿ
ಬೇಲೂರು: ಪ್ರಸ್ತುತ ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಮುಂದೆ ಬರಬೇಕು ಎಂದು ಶಾಸಕ ವೈ.ಎನ್.ರುದ್ರೇಶಗೌಡ ಕರೆ ನೀಡಿದರು.
ಬೇಲೂರು ಟೌನ್ ಸಹಕಾರ ಸಂಘ ಮಹಿಳೆಯರಿಗೆ ಸಿದ್ಧ ಉಡುಪು ಕೌಶಲ್ಯ ಉಚಿತ ಹೊಲಿಗೆ ತರಬೇತಿಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾವಲಂಬಿಗಳಾಗಿ: ಇಂದಿನ ದಿನಗಳಲ್ಲಿ ಮಹಿಳೆ ತನ್ನ ಕಾಲ ಮೇಲೆ ನಿಂತು ಜೀವನ ಸಾಗಿಸಬೇಕು. ಸರ್ಕಾರ ಮಹಿಳೆಯರ ಸ್ವಾವಲಂಬಿ ಬದುಕಿಗೆ ಹಲವಾರು ಯೋಜನೆ ರೂಪಿಸಿದ್ದು, ಇದರ ಉಪಯೋಗ ಪಡಿದುಕೊಳ್ಳುವಂತೆ ತಿಳಿಸಿದರು.
ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ದೌರ್ಜನ್ಯಗಳನ್ನು ಎದುರಿಸಲು ಮಹಿಳೆ ತಾನೇ ದುಡಿಯುವ ಶಕ್ತಿ ಹೊಂದಿದಾಗ ಯಾವ ದೌರ್ಜನ್ಯ ನಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿದರು.
ಸಾಂತ್ವನ ಕೇಂದ್ರ: ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ಭಾಗ್ಯ ಮಾತನಾಡಿ, ಸರ್ಕಾರ ನೊಂದ ಮಹಿಳೆಯರಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಆಶ್ರಯದಲ್ಲಿ ಸಾಂತ್ವನ ಯೋಜನೆ ರೂಪಿಸಿದ್ದು ವರದಕ್ಷಿಣೆ ಕಿರುಕುಳ ಅತ್ಯಾಚಾರ, ದೌರ್ಜನ್ಯ, ಶೋಷಣೆ, ಕಿರುಕುಳ, ಅಸಹಾಯಕ ಮಹಿಳೆ, ದೈಹಿಕ ಮತ್ತು ಮಾನಸಿಕ ಆಘಾತಕ್ಕೆ ಒಳಗಾದ ಮಹಿಳೆಯರಿಗೆ 24 ಗಂಟೆಗಳ ಕಾಲ ಸಮಸ್ಯೆ ಹಾಗೂ ಪರಿಹಾರ ಮತ್ತು ಸಹಾಯ ಹಸ್ತ ಸೇವೆ ಮಾಡಲು ಸಾಂತ್ವನ ಕೇಂದ್ರ ಆರಂಭಿಸಲಾಗಿದ್ದು ನೊಂದ ಮಹಿಳೆಯರು ಇದರ ಪಯೋಗ ಪಡೆಯುವಂತೆ ತಿಳಿಸಿದರು. ಬೇಲೂರು ಟೌನ್ ಸಹಕಾರ ಸಂಘದ ಅಧ್ಯಕ್ಷ ಬಿ.ಎಲ್.ಧರ್ಮೇಗೌಡ, ಡಿ.ಸಿ.ಸಿ. ಬ್ಯಾಂಕ್ನ ವೃತ್ತ ಮ್ಯನೇಜರ್ ನಾಗೇಶ್, ರುದ್ರಶೆಟ್ಟಿ, ಪುರೊಷೋತ್ತಮ್, ನಿರ್ದೇಶಕರರಾದ ನಿಂಗಶೆಟ್ಟಿ, ಪ್ರಕಾಶ್, ರವಿ ಕುಮಾರ್, ಸಿದ್ದಯ್ಯ ಕಾರ್ಯದರ್ಶಿ ನಂದಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

