ಖಾಸಗಿ ಜಮೀನು ಸ್ವಾಧೀನಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ < ಹಾಸನ < ಜೂ 17
ಯಸಳೂರು ವಲಯ ವ್ಯಾಪ್ತಿಯ ಬಿಸಿಲೆ, ಕಾಗಿನೆರೆ ರಕ್ಷಿತಾರಣ್ಯಗಳಿಗೆ ಹೊಂದಿಕೊಂಡಿರುವ ಖಾಸಗಿ ಜಮೀನು ಸ್ವಾಧೀನ ಪಡಿಸಿಕೊಳ್ಳುವಂತೆ ಆಗ್ರಹಿಸಿ ಯಸಳೂರು ವ್ಯಾಪ್ತಿಯ ನಾನಾ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ನೀಡಿದರು.
ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಯಸಳೂರು ವಲಯದ ಅರಣಿ, ಮಂಕನಹಳ್ಳಿ, ಬೋರನಮನೆ, ಯತ್ತಳ್ಳ, ಬಟ್ಟೆಕುಮಾರಿ, ಬಾಜೆಮನೆ ಎಸ್ಟೇಟ್ ಮತ್ತು ಬಾಳೇಹಳ್ಳದ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ಗೆ ಮನವಿ ನೀಡಿದರು.
ಕೃಷಿಗೆ ತೊಂದರೆ: ಯಸಳೂರು ವಲಯ ವ್ಯಾಪ್ತಿಯ ಬಿಸಿಲೆ, ಬಿಸಿಲೆ ಎಕ್ಸ್ಟೆಂಕ್ಷನ್ ಕಾಗಿನೆರೆ ರಕ್ಷಿತಾರಣ್ಯಗಳಿಗೆ ಹೊಂದಿಕೊಂಡಿರುವ ಅರಣಿ, ಮಂಕನಹಳ್ಳಿ, ಬೋರನಮನೆ, ಯತ್ತಳ್ಳ, ಬಟ್ಟೆಕುಮಾರಿ, ಬಾಜೆಮನೆ ಎಸ್ಟೇಟ್ ಮತ್ತು ಬಾಳೇಹಳ್ಳ ಗ್ರಾಮಗಳ ರೈತರು ಕಾಡಾನೆ, ಕಾಡುಕೋಣ ಹಾಗೂ ಮುಂತಾದ ವನ್ಯ ಜೀವಿಗಳ ನಿರಂತರ ದಾಳಿಯಿಂದ ಕೃಷಿ ಮಾಡಲಾಗದೆ ಅತೀವ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ನಮ್ಮ ಜಮೀನನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡು ಅರಣ್ಯವೆಂದು ಘೋಷಿಸಿಕೊಳ್ಳಲಿ ಮತ್ತು ನಮಗೆ ಸರಿಯಾದ ಪರಿಹಾರವನ್ನು ನೀಡಬೇಕು ಎಂದು ಸರ್ಕಾರವನ್ನು ಸುಮಾರು 2 ವರ್ಷಗಳಿಂದಲೂ ಒತ್ತಾಯಿಸಿಕೊಂಡು ಬಂದಿದ್ದೇವೆ. ಈ ನಿಟ್ಟಿನಲ್ಲಿ ಅರಣ್ಯ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು, ಅರಣ್ಯಾಧಿಕಾರಿಗಳು ಮುಂತಾದವರೊಂದಿಗೆ ಅನೇಕ ಸಭೆಗಳು ನಡೆದು ಸುದೀರ್ಘವಾಗಿ ಚರ್ಚಿಸಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಪರಿಹಾರ ಕೊಡಿ: ಈ ನಿಟ್ಟಿನಲ್ಲಿ ಈಗ ಸರ್ಕಾರ ಆದೇಶವೊಂದನ್ನು ಹೊರತುಪಡಿಸಿ ಜಿಲ್ಲಾಮಟ್ಟದ ಸಮಿತಿಯೊಂದನ್ನು ರಚಿಸಿ ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಇರುವ ಖಾಸಗಿ ಪ್ರದೇಶಗಳನ್ನು ಅರಣ್ಯ ಇಲಾಖೆಯು ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಅನುಸರಿಸಬೇಕಾದ ವಿಧಿ ವಿಧಾನಗಳು ಹಾಗೂ ಮಾರ್ಗಸೂಚಿಗಳನ್ನು ನೀಡಿದೆ. ಅದ್ದರಿಂದ ನೊಂದಿರುವ ನಮಗೆ ತ್ವರಿತವಾಗಿ ನಿರ್ಧಾರಗಳನ್ನು ಕೈಗೊಂಡು ಸಾಧ್ಯವಾದಷ್ಟು ಬೇಗ ನಮಗೆ ಪರಿಹಾರವನ್ನು ನೀಡಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಲೆನಾಡು ಜನಪರ ಹೋರಾಟ ಸಮಿತಿಯ ಎಚ್.ಎ.ಕಿಶೋರ್ ಕುಮಾರ್, ರಾಜೇಗೌಡ, ಗಂಗಾಧರ್, ನಾಗರಾಜು, ರಾಮೇಗೌಡ, ಚಂದ್ರಶೇಖರ್, ರುದ್ರೇಗೌಡ, ದಿನೇಶ್, ಸುಬ್ಬಣ್ಣ, ದೇವರಾಜು ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

