ದೆಹಲಿಯಲ್ಲಿ ಸರ್ಕಾರ ರಚಿಸಲು ಆಪ್ ಶಾಸಕರಿಗೆ ಬಿಜೆಪಿ ಆಫರ್

ನವದೆಹಲಿ: ದೆಹಲಿಯಲ್ಲಿ ಸರ್ಕಾರ ರಚಿಸುವಂತೆ ಬಿಜೆಪಿ ಆಮ್ ಆದ್ಮಿ ಪಕ್ಷದ ಶಾಸಕರಿಗೆ ಆಫರ್ ನೀಡಿರುವುದಾಗಿ ಆಪ್ ಶಾಸಕ ರಾಜೇಶ್ ಗಾರ್ಗ್ ಬುಧವಾರ ಹೇಳಿದ್ದಾರೆ.
ತನ್ನನ್ನು ಭೇಟಿಯಾದ ಬಿಜೆಪಿ ಸದಸ್ಯರು ಈಗಾಗಲೇ ಆಪ್ನ ಕಥೆ ಮುಗಿದಿದೆ. ಆದ್ದರಿಂದ ನೀವು ಬಿಜೆಪಿಗೆ ಸೇರುವುದು ಒಳಿತು ಎಂದು ಹೇಳಿರುವುದಾಗಿ ಗಾರ್ಗ್ ಹೇಳಿಕೆ ನೀಡಿದ್ದಾರೆ.
ಅದೇ ವೇಳೆ ತಾನು ಬಿಜೆಪಿಗೆ ಸೇರುವುದಾದರೆ ಅವರು ನನಗೆ ಅಧಿಕಾರದ ಜತೆಗೆ ಹಣವನ್ನೂ ನೀಡುವುದಾಗಿ ಆಫರ್ ನೀಡಿದ್ದಾರೆ ಎಂದು ಗಾರ್ಗ್ ಆರೋಪಿಸಿದ್ದಾರೆ.
ಆದಾಗ್ಯೂ, ಬಿಜೆಪಿ ದೆಹಲಿಯಲ್ಲಿ ಸರ್ಕಾರ ರಚಿಸುವುದಾದರೂ ಹೇಗೆ? ಎಂದು ಕೇಳಿದಾಗ, ಬಿಜೆಪಿ ಹೇಳುವಂತೆ ಅವರಲ್ಲಿ 29 ಶಾಸಕರಿದ್ದಾರೆ. ಅದಕ್ಕೆ 5 ಶಾಸಕರು ಸೇರಿದರೆ ಅವರು ಸರ್ಕಾರ ರಚಿಸಬಲ್ಲರು. ಒಂದು ವೇಳೆ 5 ಜನ ಶಾಸಕರು ಬಿಜೆಪಿಗೆ ಸೇರಲು ನಿರಾಕರಿಸಿದರೆ ಅವರು ಬೆಂಬಲ ನೀಡಿದರಷ್ಟೇ ಸಾಕು. ಬೆಂಬಲ ನೀಡುವ ಶಾಸಕರಿಗೂ ಅಧಿಕಾರ ನೀಡಲಾಗುವುದು ಎಂದು ಬಿಜೆಪಿ ಹೇಳಿರುವುದಾಗಿ ಗಾರ್ಗ್ ಹೇಳಿದ್ದಾರೆ.
ಇತ್ತ ಗಾರ್ಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ, ಗಾರ್ಗ್ ಆರೋಪ ನಿರಾಧಾರ. ನಾವು ಹಾಗೆ ಹೇಳಿಲ್ಲ. ಈ ಬಗ್ಗೆ ಗಾರ್ಗ್ ಸಾಕ್ಷ್ಯಗಳನ್ನು ಒದಗಿಸಲಿ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


