ಈಗಿನ ಸುದ್ದಿ

ಅವಧಿಗೂ ಮುನ್ನ ರಾಜ್ಯಪಾಲರ ರಾಜಿನಾಮೆ ಸೂಕ್ತವಲ್ಲ: ಭಾರದ್ವಾಜ್

ಅವಧಿಗೂ ಮುನ್ನ ರಾಜ್ಯಪಾಲರ ರಾಜಿನಾಮೆ ಸೂಕ್ತವಲ್ಲ: ಭಾರದ್ವಾಜ್
Published On :

ನವದೆಹಲಿ: ಕೇಂದ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಒತ್ತಡಕ್ಕೆ ಮಣಿದು ಅವಧಿಗೂ ಮುನ್ನ ರಾಜ್ಯಪಾಲರು ರಾಜಿನಾಮೆ ನೀಡುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭೇಟಿ ಬಳಿಕ, ರಾಜ್ಯಪಾಲರ ರಾಜಿನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಭಾರದ್ವಾಜ್, ಅವಧಿ ಪೂರ್ಣವಾಗುವವರೆಗೆ ರಾಜಿನಾಮೆ ನೀಡುವುದು ಸೂಕ್ತವಲ್ಲ. ಈ ಸಂಬಂಧ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅಲ್ಲದೆ ರಾಜ್ಯಪಾಲರು ನೇರವಾಗಿ ರಾಷ್ಟ್ರಪತಿಗಳ ಕಚೇರಿ ವ್ಯಾಪ್ತಿಗೆ ಬರುತ್ತಾರೆ ಎಂದು ಹೇಳಿದರು.

ನನ್ನ ಅವಧಿ ಪೂರ್ಣಗೊಂಡಿದೆ. ಆದರೆ ಇತರೆ ರಾಜ್ಯಗಳ ರಾಜ್ಯಪಾಲರು ಒತ್ತಡಕ್ಕೆ ಮಣಿದು ರಾಜಿನಾಮೆ ನೀಡುವುದು ಸೂಕ್ತವಲ್ಲ. ಉಳಿದ ರಾಜ್ಯಪಾಲರು ತಮ್ಮ ಅವಧಿಯನ್ನು ಪೂರ್ಣಗೊಳಿಸಬೇಕು ಎಂದು ಹಂಸರಾಜ್ ಭಾರದ್ವಾಜ್ ತಿಳಿಸಿದರು.

ಇದೇ ವೇಳೆ, ರಾಜ್ಯ ಸರ್ಕಾರ ರಾಜಕಾರಣಿಗಳನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪರಿಷತ್ ನಾಮನಿರ್ದೇಶಿತರ ಪಟ್ಟಿ ಇನ್ನೂ ನನ್ನ ಕೈ ಸೇರಿಲ್ಲ ಮತ್ತು ಪರಿಷತ್‌ಗೆ ನೇಮಕ ಮಾಡುವ ವಿಚಾರದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಅನುಸರಿಸಿದ್ದ ಕ್ರಮವೇ ಈಗಲೂ ಅನುಸರಿಸುತ್ತೇನೆ. ಒಂದು ರಾಜ್ಯ ಸರ್ಕಾರ ಸೂಕ್ತ ವ್ಯಕ್ತಿಗಳನ್ನು ನಾಮಕರಣ ಮಾಡದಿದ್ದರೆ ಪಟ್ಟಿಯನ್ನು ವಾಪಸ್ ಕಳುಹಿಸುವುದಾಗಿ ಹೇಳಿದ್ದಾರೆ.

ಮತ್ತೊಬ್ಬ ರಾಜ್ಯಪಾಲ ರಾಜಿನಾಮೆ
ಉತ್ತರ ಪ್ರದೇಶ ರಾಜ್ಯಪಾಲ ಬಿ.ಎಲ್.ಜೋಶಿ ರಾಜಿನಾಮೆಯ ನಂತರ ಯುಪಿಎ ಸರ್ಕಾರದಲ್ಲಿ ನೇಮಕಗೊಂಡಿದ್ದ ಮತ್ತೊಬ್ಬ ರಾಜ್ಯಪಾಲರು ಇಂದು ರಾಜಿನಾಮೆ ನೀಡಿದ್ದಾರೆ. ಛತ್ತೀಸಗಢದ ರಾಜ್ಯಪಾಲ ಶೇಖರ್ ದತ್ ಅವರು ನಿನ್ನೆ ರಾತ್ರಿ ತಮ್ಮ ರಾಜಿನಾಮೆ ಪತ್ರವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರವಾನಿಸಿದ್ದಾರೆ.

ದತ್ ಅವರ ಅಧಿಕಾರಾವಧಿ ಮುಂದಿನ ವರ್ಷ ಜನವರಿಗೆ ಮುಕ್ತಾಯಗೊಳ್ಳಲಿದೆ. ಆದರೆ ದತ್ ಅವರು ಅವಧಿಗೂ ಮುನ್ನ ರಾಜಿನಾಮೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.