ಈಗಿನ ಸುದ್ದಿ

ಫೇಸ್‌ಬುಕ್ ಡೌನ್: ಕ್ಷಮೆಯಾಚಿಸಿದ ಫೇಸ್‌ಬುಕ್ ಕಂಪನಿ

ಫೇಸ್‌ಬುಕ್ ಡೌನ್: ಕ್ಷಮೆಯಾಚಿಸಿದ ಫೇಸ್‌ಬುಕ್ ಕಂಪನಿ
Published On :

ನವದೆಹಲಿ: ಗುರುವಾರ ಮಧ್ಯಾಹ್ನದ ವೇಳೆ ದಿಢೀರನೆ ಸಾಮಾಜಿಕ ತಾಣ ಫೇಸ್‌ಬುಕ್ ಸ್ಥಗಿತಗೊಂಡಿದ್ದು, ಈ ಅಡಚಣೆಗೆ ಫೇಸ್‌ಬುಕ್ ಕ್ಷಮೆ ಯಾಚಿಸಿದೆ.

ಮಧ್ಯಾಹ್ನದ ವೇಳೆ ಫೇಸ್‌ಬುಕ್‌ಗೆ ಲಾಗಿನ್ ಆಗಲು ಪ್ರಯತ್ನಿಸಿದರೆ ಅಡಚಣೆಗೆ ಕ್ಷಮೆ ಕೋರುತ್ತೇವೆ ಎಂಬ ಸಂದೇಶ ಫೇಸ್ ಬುಕ್‌ನಲ್ಲಿ ಗೋಚರಿಸಿದ್ದು, ಬಳಕೆದಾರರಿಗೆ ಲಾಗಿನ್ ಆಗಲು ಸಾಧ್ಯವಾಗುತ್ತಿರಲಿಲ್ಲ.

ಈ ವೇಳೆ ವೆಬ್ ಆ್ಯಪ್‌ಗಳಲ್ಲಿ ಮಾತ್ರವಲ್ಲ ಆ್ಯಂಡ್ರಾಯಿಡ್ ನಲ್ಲಿರುವ ಫೇಸ್ ಬುಕ್ ಆ್ಯಪ್ ಕೂಡಾ ಕಾರ್ಯವೆಸಗುತ್ತಿರಲಿಲ್ಲ.

ಜಾಗತಿಕ ಮಟ್ಟದಲ್ಲಿ ಫೇಸ್ ಬುಕ್ ಡೌನ್ ಆಗಿರುವುದು ಬಳಕೆದಾರರನ್ನು ಆತಂಕಕ್ಕೀಡು ಮಾಡಿತ್ತು. ಸ್ವಲ್ಪ ಸಮಯದ ನಂತರ ಫೇಸ್‌ಬುಕ್ ಸಮಸ್ಯೆಗಳನ್ನು ಪರಿಹರಿಸಿದ್ದು, ಇದೀಗ ಅಡಚಣೆಗಾಗಿ ಕ್ಷಮೆಯಾಚಿಸಿದೆ.

ಪ್ರಸ್ತುತ ಸಮಸ್ಯೆ ಏನೆಂದು ತಿಳಿದಿಲ್ಲ, ಆದರೆ ಒಂದು ಗಂಟೆಯಲ್ಲಿ ನಾವು ಫೇಸ್ ಬುಕ್‌ಗೆ ಲಾಗಿನ್ ಆಗುವಂತೆ ಮಾಡಿದ್ದು ಈಗ ಎಲ್ಲವೂ ಸರಿಯಾಗಿದೆ ಎಂದು ಫೇಸ್‌ಬುಕ್ ವಕ್ತಾರರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.