ಈಗಿನ ಸುದ್ದಿ

ಪ್ರೀತಿ ಜಿಂಟಾ-ನೆಸ್ ವಾಡಿಯಾ ಪ್ರಕರಣ: ರವಿ ಪೂಜಾರಿ ವಿರುದ್ಧ ಕೇಸ್

ಪ್ರೀತಿ ಜಿಂಟಾ-ನೆಸ್ ವಾಡಿಯಾ ಪ್ರಕರಣ: ರವಿ ಪೂಜಾರಿ ವಿರುದ್ಧ ಕೇಸ್
Published On :

ನವದೆಹಲಿ: ಬಾಲಿವುಡ್ ನಟಿ ಪ್ರೀತಿ ಜಿಂಟಾ ಹಾಗೂ ಉದ್ಯಮಿ ನೆಸ್ ವಾಡಿಯಾ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ನೆಸ್ ವಾಡಿಯಾ ತಂದೆ ನುಸ್ಲಿ ವಾಡಿಯಾಗೆ ಕಾಲ್ ಮಾಡಿ ಬೆದರಿಕೆ ಹಾಕಿದ್ದ ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ಮುಂಬೈ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.

ನುಸ್ಲಿ ವಾಡಿಯಾ ಅವರಿಗೆ ದೂರವಾಣಿ ಕರೆ ಮಾಡಿದ್ದು ರವಿ ಪೂಜಾರಿ ಎಂಬುದು ಮುಂಬೈ ಪೊಲೀಸರಿಗೆ ಖಚಿತವಾಗಿದ್ದು, ಭೂಗತ ಪಾತಕಿ ವಿರುದ್ಧ ಈಗ ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೆ ಬೆದರಿಕೆ ಹಿನ್ನೆಲೆಯಲ್ಲಿ ವಾಡಿಯಾ ಅವರ ನಿವಾಸ ಮತ್ತು ಕಚೇರಿಗೆ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.

ಪ್ರೀತಿ ಪ್ರಕರಣದಿಂದ ದೂರ ಇರಿ. ಆಕೆಗೆ ಕಿರುಕುಳ ಕೊಟ್ಟರೆ ನಿಮ್ಮ ಉದ್ಯಮಕ್ಕೆ ಕುತ್ತು ಬರಲಿದೆ ಹುಷಾರ್!- ಹೀಗಂತ  ಭೂಗತ ಪಾತಕಿ ರವಿ ಪೂಜಾರಿ ಅವಾಜ್ ಹಾಕಿದ್ದ. ಈ ಸಂಬಂಧ ಕಳೆದ ಮಂಗಳವಾರ ನುಸ್ಲಿ ವಾಡಿಯಾ ಪೊಲೀಸರಿಗೆ ದೂರು ನೀಡಿದ್ದರು.

'ಪ್ರೀತಿ ಪ್ರಕರಣದಿಂದ ದೂರ ಇದ್ದರೆ ಒಳ್ಳೆಯದು. ಸುಖಾಸುಮ್ಮನೆ ಆಕೆಗೆ ಕಿರುಕುಳ ಕೊಟ್ಟರೆ ನಿಮ್ಮ ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂದು ರವಿ ಪೂಜಾರಿ ದೂರವಾಣಿ ಹಾಗೂ ಎಸ್ಸೆಮ್ಮೆಸ್ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ವಾಡಿಯೂ ಗ್ರೂಪ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.