ಈಗಿನ ಸುದ್ದಿ

ರೈಲು ದರ ಏರಿಕೆ, ಹಿಂದಿ ಹೇರಿಕೆ ಸಮರ್ಥಿಸಿಕೊಂಡ ಜಾವೆಡ್ಕರ್

ರೈಲು ದರ ಏರಿಕೆ, ಹಿಂದಿ ಹೇರಿಕೆ ಸಮರ್ಥಿಸಿಕೊಂಡ ಜಾವೆಡ್ಕರ್
Published On :

ಮುಂಬೈ: ಸಾಮಾಜಿಕ ತಾಣದಲ್ಲಿ ಹಿಂದಿ ಭಾಷೆಯನ್ನು ಬಳಸಬೇಕೆಂಬ ಕೇಂದ್ರ ಸರ್ಕಾರ ತೀರ್ಮಾನವನ್ನು ಮಾಹಿತಿ ಹಾಗು ಪ್ರಸಾರಣ ಸಚಿವ ಪ್ರಕಾಶ್ ಜಾವೆಡ್ಕರ್ ಸಮರ್ಥಿಸಿಕೊಂಡಿದ್ದಾರೆ.

ಹಿಂದಿ ಭಾಷೆ ಬಳಕೆಯ ಬಗ್ಗೆ ಸರ್ಕಾರ ಸರಿಯಾದ ಕ್ರಮವನ್ನೇ ಕೈಗೊಂಡಿದೆ. ವಿವಿಧ ಭಾಷೆಗಳನ್ನು ಪ್ರಚಾರ ಮಾಡಲಿರುವ ಸರ್ಕಾರದ ಹೆಜ್ಜೆ ಇದು ಎಂದು ಜಾವೆಡ್ಕರ್ ಅಭಿಪ್ರಾಯಪಟ್ಟಿದ್ದಾರೆ.

ನಾವು ಎಲ್ಲ ಭಾಷೆಗಳ ಅಭಿವೃದ್ಧಿಗಾಗಿ ಪ್ರಯತ್ನಿಸಬೇಕಾಗಿದೆ. ಪ್ರತಿಯೊಬ್ಬರು ಅವರವರಿಗೆ ಇಷ್ಟವಿರುವ ಭಾಷೆಯನ್ನು ಮಾತನಾಡಲು ಸ್ವತಂತ್ರರು ಎಂದು ಮಾಧ್ಯಮದವರಲ್ಲಿ ಮಾತನಾಡಿದ ಸಚಿವರು ಹೇಳಿದ್ದಾರೆ.

ಚಲನಚಿತ್ರ ನಿರ್ಮಾಪಕರು ಹಾಗು ಚಿತ್ರೋದ್ಯಮದ ಅಧಿಕಾರಿಗಳ ಜತೆ ಸಭೆ ನಡೆಸಿದ ಜಾವೆಡ್ಕರ್, ಸರ್ಕಾರ ಸಂವಿಧಾನಕ್ಕೆ ಬಾಹಿರವಾಗಿರುವ ಯಾವುದೇ ಕಾರ್ಯಗಳನ್ನು ಮಾಡುತ್ತಿಲ್ಲ. ನಮ್ಮ ಸಂವಿಧಾನ ಎಲ್ಲಾ ಭಾಷೆಗಳಿಗೆ ಪ್ರಾಧಾನ್ಯತೆಯನ್ನು ನೀಡುತ್ತದೆ. ಒಂದು ಭಾಷೆಯನ್ನು ಇನ್ನೊಂದು ಭಾಷೆಯ ಮೇಲೆ ಹೇರಿಕೆ ಮಾಡಲಾಗುತ್ತಿಲ್ಲ ಎಂದು ಹೇಳಿದ ಸಚಿವರು ರೈಲು ದರ ಏರಿಕೆಯನ್ನೂ ಸಮರ್ಥಿಸಿಕೊಂಡಿದ್ದಾರೆ.

ರೈಲ್ವೇ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕಾಗಿದೆ. ಜನರು ರೈಲ್ವೇ ಇಲಾಖೆ ಉತ್ತಮವಾದ ಸೌಕರ್ಯವನ್ನು ಕಲ್ಪಿಸಲಿ ಎಂದು ಬಯಸುತ್ತಾರೆ. ಜನರಿಗೆ ಉತ್ತಮ ಸೌಲಭ್ಯ ಹಾಗು ಭದ್ರತೆಯನ್ನು ನೀಡುವುದೇ ನಮ್ಮ ಉದ್ದೇಶ. ರೈಲ್ವೇ ಭದ್ರತೆಯನ್ನು ಒದಗಿಸದೇ ಹೋದರೆ ಪ್ರಯಾಣವೂ ಸುಖಪ್ರದವಾಗಿರುವುದಿಲ್ಲ ಎಂದು ಜಾವೆಡ್ಕರ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.